Ration Card : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ.! ಏನೆಲ್ಲಾ ದಾಖಲೆ ಬೇಕು.? ಹೇಗೆ ಅರ್ಜಿ ಸಲ್ಲಿಸುವುದು.?

ಪಡಿತರ ಚೀಟಿ : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ – ಸಂಪೂರ್ಣ ಮಾಹಿತಿ

Ration Card : ನಮಸ್ಕಾರ ಸ್ನೇಹಿತರೇ, ಹೊಸ ರೇಷನ್ ಕಾರ್ಡ್ ಗಾಗಿ ಈ ಕೆಳಗೆ ತಿಳಿಸಿರುವಂತೆ ಅರ್ಜಿ ಸಲ್ಲಿಸಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ, ರೇಷನ್ ಕಾರ್ಡ್(Ration Card) ಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಗೃಹಲಕ್ಷ್ಮಿ ಯೋಜನೆ(Gruhalakshmi), ಗೃಹಜ್ಯೋತಿ(Gruhajyothi) ಯೋಜನೆ, ಅನ್ನಭಾಗ್ಯ(Annabhagya) ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳಿಗೆ ಈ ಪಡಿತರ ಚೀಟಿ ಅತೀ ಅಗತ್ಯವಾಗಿದ್ದು, ಈ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಿದೆ. ಯಾವುದೇ ಸರ್ಕಾರಿ ಸವಲತ್ತು ಪಡೆಯಲು ಪಡಿತರ ಚೀಟಿಯ ಅಗತ್ಯವಿದೆ.

ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೂ ಆಹಾರ ಇಲಾಖೆ ಅವಕಾಶ ಕಲ್ಪಿಸಿದೆ. ಅಪ್ಲಿಕೇಶನ್ ಪರಿಶೀಲನೆ 2023 ರಲ್ಲಿ ಹೆಚ್ಚಿನ ಜನರು ಪಡಿತರ ಚೀಟಿ(Ration Card)ಗೆ ಅರ್ಜಿ ಸಲ್ಲಿಸಿದ್ದರೂ, ಈ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪಡಿತರ ಚೀಟಿ ಸಿಕ್ಕಿಲ್ಲ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಮಾಹಿತಿ ನೀಡಿದ್ದು, ಮೇ 31ರೊಳಗೆ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೊಸ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಇನ್ನೂ ಪರಿಶೀಲನೆಯಾಗಿಲ್ಲ. ಆಹಾರ ಇಲಾಖೆಯೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕಾರ್ಡ್‌ಗಳ ಪರಿಶೀಲನೆಯೂ ನಡೆಯುತ್ತಿದೆ ಎಂದರು.

ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.

ರೇಷನ್ ಕಾರ್ಡ್(Ration Card)ಗೆ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು?

ಈಗಾಗಲೇ ರೇಷನ್ ಕಾರ್ಡ್(Ration Card)ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ ಮೇ 31ರೊಳಗೆ ಅರ್ಹರಿಗೆ ಪಡಿತರ ಚೀಟಿ ವಿತರಿಸಿ, ಚುನಾವಣೆ ಮುಗಿದ ನಂತರ ಮತ್ತೊಮ್ಮೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಆಹ್ವಾನಿಸಲಾಗುವುದು ಎಂದರು.

ಹೊಸ ರೇಷನ್ ಕಾರ್ಡ್(Ration Card)ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು.?

  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣಪತ್ರ
  • ವಿಳಾಸ ಮಾಹಿತಿ
  • ಮೊಬೈಲ್ ನಂಬರ್

ಪಡಿತರ ಚೀಟಿ(Ration Card) ತಿದ್ದುಪಡಿಯನ್ನು ಸಹ ಮಾಡಬಹುದು :-

ನೀವು ಪಡಿತರ ಚೀಟಿಯಲ್ಲಿ(Ration Card) ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ, ಕೆಲವು ತಿದ್ದುಪಡಿಗಳನ್ನು ಮಾಡಲು ನಿಮಗೆ ಅನುಮತಿಸಲಾಗಿದೆ. ಹೆಸರನ್ನು ಸಹ ಬದಲಾಯಿಸಬಹುದು. ಹಾಗೆಯೇ ಸತ್ತವರ ಹೆಸರನ್ನು ಅಳಿಸಬಹುದು. ನಿಮ್ಮ ಡಾಕ್ಯುಮೆಂಟ್ ಇ-ಕೆವೈಸಿ ಅಲ್ಲದಿದ್ದರೂ ಸಹ ಇದನ್ನು ಮಾಡಬಹುದು.

ಇದನ್ನೂ ಕೂಡ ಓದಿ : Cibil Score : ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ.? ಸಿಬಿಲ್ ಸ್ಕೋರ್ ಟೆನ್ಶನ್ ಬಿಡಿ – ಇಲ್ಲಿದೆ ಜಾಸ್ತಿ ಮಾಡುವ ಟ್ರಿಕ್ಸ್

ಹೊಸ ರೇಷನ್ ಕಾರ್ಡ್(Ration Card)ಗೆ ಹೇಗೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವುದು.?

ಮೊದಲು ಆಹಾರ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ ಸೈಟ್ ಗೆ ಹೋಗಿ ಲಾಗಿನ್ ಮಾಡಿಕೊಳ್ಳಬೇಕು. ನಂತರ ಆಯ್ಕೆ ಕ್ಲಿಕ್ ಮಾಡಿ, ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ, ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ. ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಅರ್ಜಿಯನ್ನು ಸಲ್ಲಿಸಿ.

ಆಹಾರ ಇಲಾಖೆಯ ಡೈರೆಕ್ಟ್ ಲಿಂಕ್ :- ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply