ಅಪ್ಪಾ , ಪ್ರೀತ್ಸೋದ್ ತಪ್ಪಾ? – ಡೆತ್ ನೋಟ್ ಬರೆದು ನೇಣಿಗೆ ಶರಣಾದ ಯುವತಿ!

Spread the love

ಬೆಂಗಳೂರು : ನಗರದ ಹೊರವಲಯ ಹೆಸರುಘಟ್ಟ ರಸ್ತೆಯ ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬಳು ಸೋಲದೇವನಹಳ್ಳಿಯ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಶರಣಾಗುವ ಮುನ್ನ ನನಗೆ ನಿಮ್ಮ ಪ್ರೀತಿಗೆ ಅರ್ಹಳಲ್ಲ ಅಪ್ಪ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾಳೆ.

ಹಾಸನ ಮೂಲದ ವತ್ಸಲಾ (19) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ತಿಳಿದು ಬಂದಿದೆ. ಈಕೆ ಅಂತಿಮ ವರ್ಷದ ಬಿ ಫಾರ್ಮ್ ವ್ಯಾಸಾಂಗ ಮಾಡುತ್ತಿದ್ದಳು. ಪಿಜಿಯಲ್ಲಿದ್ದು ಬೆಳಿಗ್ಗೆಯಿಂದ 8 ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಡೆತ್‌ನೋಟ್‌ನಲ್ಲಿ ಏನಿದೆ?

ಡೆತ್‌ ನೋಟ್‌ನಲ್ಲಿ ನಾನು ನಿಮ್ಮ ಪ್ರೀತಿಗೆ ಅರ್ಹಳಲ್ಲ ಅಪ್ಪ. ನೀವು ಕೊಟ್ಟಿರುವ ಪ್ರೀತಿ ಇನ್ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಕೇಳಿದ್ದನ್ನೆಲ್ಲಾ ಕೊಡಿಸಿದ್ದೀರಿ. ಅಪ್ಪ ನಿಮ್ಮ ಮರ್ಯಾದೆ ತೆಗೆಯುವ ಕೆಲಸ ನಾನು ಮಾಡಿಲ್ಲ. ಅಪ್ಪ ನಿಮ್ಮ ಪ್ರೀತಿ ಉಳಿಸಿಕೊಳ್ಳುವ ಭಾಗ್ಯ ನನಗಿಲ್ಲ ಎಂಬ ಸಾಲುಗಳೊಂದಿಗೆ ಪ್ರಾರಂಭಿಸಿ ನಾನು ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ನನಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ನಾನು ಸಾವಿಗೆ ಶರಣಾಗುತ್ತಿದ್ದೇನೆ ಎಂದು 8 ಪುಟಗಳ ಡೆತ್ ನೋಟ್ ಬರೆದಿಟ್ಟು ಮಧ್ಯಾಹ್ನ 2:30ಕ್ಕೆ ಫ್ಯಾನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಒಟ್ಟಾರೆ ಉನ್ನತ ವಿದ್ಯಾಭ್ಯಾಸಕ್ಕೆ ಹಾಸನದಿಂದ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ದುರಂತವೇ ಸರಿ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಯುಡಿಆ‌ರ್ ಪ್ರಕರಣ ದಾಖಲಾಗಿದೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

WhatsApp Group Join Now

Spread the love

Leave a Reply