ಕರ್ನಾಟಕ ರಾಜ್ಯದಲ್ಲಿ ಬಹುನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯವು ಬರದಿಂದ ಸಾಗ್ತಾ ಇದೆ. ಈ ಪ್ರಮುಖ ಸಮೀಕ್ಷೆಯಲ್ಲಿ ಶ್ರಮಿಸುತ್ತಾ ಇರುವಂತಹ ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರಿಗೆ ರಾಜ್ಯ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ.
ಸಮೀಕ್ಷೆಗಾಗಿ ಗೌರವ ಧನವನ್ನ ನಿಗದಿಪಡಿಸಿ ಸರ್ಕಾರವು ಅಧೀಕೃತವಾಗಿ ಇದೀಗ ಆದೇಶವನ್ನು ಕೂಡ ಹೊರಡಿಸಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನ ಬರೆದಿದ್ದಾರೆ. ಪತ್ರದಲ್ಲಿ ಆಯೋಗದಿಂದ ನಡೆಸಲಾಗ್ತ ಇರುವಂತಹ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿರುವ ಸಮೀಕ್ಷೆದಾರರು ಮತ್ತೆ ಮೇಲ್ವಿಚಾರಕರಿಗೆ ನೀಡಬೇಕಾದ ಗೌರವಧನದ ಮೊತ್ತವನ್ನ ಸ್ಪಷ್ಟಪಡಿಸಿದ್ದಾರೆ.
ಹಾಗಾಗಿ ಸಮೀಕ್ಷೆದಾರರಿಗೆ ಲಭಿಸುವ ಮೊತ್ತ 5000 ರೂಪಾಯಿ. ಪ್ರತಿ ಮನೆ ಸಮೀಕ್ಷೆಗೆ 100 ರೂಪಾಯಿಯಂತೆ ಗೌರವಧನ ನಿಗದಿಪಡಿಸಲಾಗಿದೆ. ಇನ್ನು ಮೇಲ್ವಿಚಾರಕರಿಗೆ ಒಟ್ಟು ರೂಪಾಯಿ 10 ಸಾವಿರ ಗೌರವಧನವನ್ನ ನಿಗದಿ ಪಡಿಸಲಾಗಿದೆ. ಸಮೀಕ್ಷೆದಾರರಿಗೆ ಈಗಾಗಲೇ ಮೊದಲ ಕಂತಿನಲ್ಲಿ 5000 ದಂತೆ ಗೌರವಧನವನ್ನ ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಸಮೀಕ್ಷೆದಾರರಿಗೆ ಉಳಿದ ಮೊತ್ತ ಮತ್ತು ಮೇಲ್ವಿಚಾರಕರಿಗೆ ನಿಗದಿ ಪಡಿಸಿದ ಒಟ್ಟು ಗೌರವಧನವನ್ನ ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕಿದೆ.
ಹಾಗಾಗಿ ಒಂದು ಬ್ಲಾಕಿಗೆ ಒಂದಕ್ಕಿಂತ ಹೆಚ್ಚು ಸಮೀಕ್ಷೆದಾರರನ್ನ ನೇಮಿಸಿದರೆ, ಪ್ರತಿ ಬ್ಲಾಕಿಗೆ ನಿಗದಿಪಡಿಸಿದ ಮೊತ್ತವನ್ನ ಸಮೀಕ್ಷೆದಾರರ ನಡುವೆ ವಿಭಜಿಸಿ ನೀಡಲು ಆದೇಶ ಮಾಡಲಾಗಿದೆ ಅಂತ ಹೇಳಿ ಪತ್ರದಲ್ಲಿ ತಿಳಿಸಲಾಗಿದೆ. ಈ ವಿಚಾರವಂತು ಸಮೀಕ್ಷೆದಾರರಿಗೆ ಇದೀಗ ಬಹಳಷ್ಟು ಖುಷಿ ಕೂಡ ನೀಡಿದೆ.

ಜಾತಿಗಣತಿಯಲ್ಲಿ ಕೆಲಸ ಮಾಡಿದ ಎಲ್ಲಾ ಶಿಕ್ಷಕರಿಗೂ ಗುಡ್ ನ್ಯೂಸ್ | Karnataka Caste Census 2025
WhatsApp Group
Join Now