ಡೆಬಿಟ್ ಕಾರ್ಡ್ ಇಲ್ಲದೇ UPI ಪಿನ್ ಸೆಟ್ ಮಾಡುವುದು ಹೇಗೆ ಗೊತ್ತಾ..? ಆಧಾರ್ ಕಾರ್ಡ್ ಮಾತ್ರ ಇದ್ದರೆ ಸಾಕಾ.?

Spread the love

UPI PIN : ನಮಸ್ಕಾರ ಸ್ನೇಹಿತರೇ, ಕೈ ತುಂಬಾ ಹಣ ಇಟ್ಟುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದ ದಿನಗಳು ಕಳೆದು ಹೋಗಿವೆ. ಈಗ ಏನಿದ್ರೂ ಒಂದು ಸ್ಮಾರ್ಟ್‌ ಪೋನ್‌ ಇದ್ರೆ ಸಾಕು ನೀವು ಬೇಕಾದುದನ್ನು ಖರೀದಿಸಬಹುದು. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ ಪಿಸಿಐ) ಇದಕ್ಕೆ ಅವಕಾಶ ಮತ್ತು ಸೌಲಭ್ಯ ಕಲ್ಪಿಸಿದೆ.

ಅಂದರೆ ನಾವು UPI ID ಯೊಂದಿಗೆ ನೋಂದಾಯಿಸಿಕೊಳ್ಳಬಹುದು ಮತ್ತು Google Pay, PhonePe, Paytm ಮುಂತಾದ ಕಂಪನಿಗಳ ಮೂಲಕ ನಮಗೆ ಬೇಕಾದ ಜನರಿಗೆ ಪಾವತಿಸಬಹುದು. UPI ಪಿನ್ ರಚಿಸಲು ನಾವು ಖಾತೆಯನ್ನು ಹೊಂದಿರುವ ಬ್ಯಾಂಕ್‌ನ ಡೆಬಿಟ್ ಕಾರ್ಡ್ ಅಗತ್ಯವಿತ್ತು. ಆದರೆ ಈಗ ಅದರ ಅಗತ್ಯವೂ ಇಲ್ಲ. ಈಗ ಆಧಾರ್ ಆಧಾರಿತ UPI ಯೊಂದಿಗೆ, Google Pay ಬಳಕೆದಾರರು ಡೆಬಿಟ್ ಕಾರ್ಡ್ ಇಲ್ಲದೆ UPI ಪಿನ್ ಅನ್ನು ರಚಿಸಬಹುದು.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಡೆಬಿಟ್ ಕಾರ್ಡ್ ಇಲ್ಲದವರಿಗೆ ಯುಪಿಐ ಪಿನ್ ಸೆಟ್ ಮಾಡುವ ಅಥವಾ ಫೋನ್ ಪೇ (PhonePe) ಆಯಪ್ ಬಳಸುವ ಅವಕಾಶ ಸಿಗುತ್ತಿರಲಿಲ್ಲ. ಆದರೆ, ಇನ್ನು ಈ ಸಮಸ್ಯೆ ಎದುರಾಗದು. ಆಧಾರ್ ಆಧಾರಿತ ಕೆವೈಸಿ ಮೂಲಕ ಜನರು ಯುಪಿಐ ಆಯಪ್ ಆಯಕ್ಟಿವೇಟ್ ಮಾಡಿಕೊಳ್ಳಬಹುದು ಎಂದು ಫೋನ್ ಪೇ ಹೇಳಿದೆ.

ಫೋನ್ ಪೇ(PhonePe)ನಲ್ಲಿ ಆಧಾರ್ ಕಾರ್ಡ್ ಆಯ್ಕೆಯನ್ನು ಆಯ್ದುಕೊಂಡು, ಆಧಾರ್ನ ಕೊನೆಯ ಆರು ಸಂಖ್ಯೆಗಳನ್ನು ನಮೂದಿಸುವ ಮೂಲಕ ಪಿನ್ ಜನರೇಟ್ ಮಾಡಬಹುದು. ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಬಳಕೆದಾರರ ನೋಂದಾಯಿತ ಮೊಬೈಲ್ಗೆ ಯುಐಡಿಎಐ ಹಾಗೂ ಬ್ಯಾಂಕ್ನಿಂದ ಒಟಿಪಿ ಬರಲಿದೆ.

WhatsApp Group Join Now

Spread the love

Leave a Reply