Meerpet Madhavi Case : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟೆಯ ಜಿಲ್ಲಾಲಗುಡದಲ್ಲಿ ನಡೆದ ಭೀಕರ ಕೊಲೆಯ ಪೊಲೀಸ್ ತನಿಖೆ ಮುಂದುವರೆದಿದೆ. ತನಿಖೆಯ ಸಮಯದಲ್ಲಿ ಈ ಪ್ರಕರಣದ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆರೋಪಿ ಗುರುಮೂರ್ತಿಯ ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಪ್ಲಾನ್ ಮಾಡಿ ಕೊಲೆ ಮಾಡಿದ್ದ ಗುರುಮೂರ್ತಿ, ವೆಬ್ ಸರಣಿಯ ಶೈಲಿಯಲ್ಲಿ ಶವವನ್ನು ವಿಲೇವಾರಿ ಮಾಡಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧವಿ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಆರೋಪಿ ಗುರುಮೂರ್ತಿಯನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪೊಲೀಸರು ಈಗಾಗಲೇ ಎರಡು ಬಾರಿ ಸ್ಥಳ ಮಹಜರು ಮಾಡಿದ್ದು, ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ತನಿಖಾ ತಂಡವು ಗುರುಮೂರ್ತಿಯ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಶೋಧ ನಡೆಸಿತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋನ್ ಸಿಗ್ನಲ್‌ಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಮಾಧವಿ ಕೊಲೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮಕ್ಕಳ ಹೇಳಿಕೆಗಳನ್ನು ಸಹ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಹೇಳಿಕೆಗಳ ಸಮಯದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ತಾಯಿ ಕಾಣೆಯಾದ ನಂತರ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು ಎಂದು ಮಕ್ಕಳು ಹೇಳಿದ್ದಾರೆ. ಪೊಲೀಸರು ಕುಟುಂಬ ಸದಸ್ಯರನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಆರೋಪಿಯ ಮಾಹಿತಿಯನ್ನು ಅವಲಂಬಿಸದೆ, ಪೊಲೀಸರು ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಆರೋಪಿಯ ಫೋನ್ ಪರಿಶೀಲಿಸಿದಾಗ, ಅಲ್ಲಿ ಮತ್ತೊಬ್ಬ ಮಹಿಳೆಯ ಕೆಲವು ಫೋಟೋಗಳು ಇರುವುದು ಕಂಡುಬಂದಿದೆ. ಈ ತಿಂಗಳ 18ರಂದು ದಾಖಲಾಗಿದ್ದ ವೆಂಕಟ ಮಾಧವಿ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣದ ಸೆಕ್ಷನ್ಗಳ ಅಡಿಯಲ್ಲಿ ವರ್ಗಾಯಿಸಲಾಗುತ್ತಿದೆ. ಇಂದು ಈ ಪ್ರಕರಣದಲ್ಲಿ ಸ್ವಲ್ಪ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.
ನಡೆದಿದ್ದೇನು?
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಾಚರ್ಲಾ ಮಂಡಲದ ಜೆ.ಪಿ. ಚೆರುವು ಗ್ರಾಮದ ನಿವಾಸಿ ಗುರುಮೂರ್ತಿ ಮತ್ತು ಅದೇ ಗ್ರಾಮದ ವೆಂಕಟ ಮಾಧವಿ 13 ವರ್ಷಗಳ ಹಿಂದೆ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗುರುಮೂರ್ತಿ ಸೇನೆಯಲ್ಲಿ ಜವಾನನಾಗಿ ಸೇರಿ ನಾಯಕ್ ಸುಬೇದಾರ್ ಆಗಿ ನಿವೃತ್ತನಾದನು. ಪ್ರಸ್ತುತ ಕಾಂಚನ್‌ಬಾಗ್ ಡಿಆರ್‌ಡಿಎಯಲ್ಲಿ ಗುತ್ತಿಗೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಗುರುಮೂರ್ತಿ ಕೆಲ ಸಮಯದಿಂದ ತಮ್ಮ ಹತ್ತಿರದ ಸಂಬಂಧಿಯಾಗಿರುವ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತದೆ. ಈ ವಿಷಯ ಪತ್ನಿ ಮಾಧವಿಗೆ ತಿಳಿದು ಇಬ್ಬರ ನಡುವೆ ಅನೇಕ ಬಾರಿ ಜಗಳಗಳು ನಡೆದಿದ್ದವು. ತಮ್ಮ ಅನೈತಿಕ ಸಂಬಂಧಕ್ಕೆ ಇರುವ ಅಡಚಣೆಯನ್ನು ತೊಡೆದು ಹಾಕಲು ಪತ್ನಿಯನ್ನೇ ಕೊಲ್ಲಲು ಗುರುಮೂರ್ತಿ ಪ್ಲಾನ್ ಮಾಡಿದನು.
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗುರುಮೂರ್ತಿ ತನ್ನಿಬ್ಬರು ಮಕ್ಕಳನ್ನು ನಗರದಲ್ಲಿನ ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ಹೋಗಿದ್ದ. ಜ. 13 ಮತ್ತು 14 ರಂದು ಗುರುಮೂರ್ತಿ ಮತ್ತು ಮಾಧವಿ ಬೆಳಗ್ಗೆ ತಮ್ಮ ಸಹೋದರಿಯ ಮನೆಗೆ ಹೋಗಿ ಸಂಜೆ ಹಿಂತಿರುಗಿದರು. ಜ. 15 ರಂದು ಬೆಳಗ್ಗೆ ಗುರುಮೂರ್ತಿ ಮತ್ತು ಮಾಧವಿ ಜಗಳವಾಡಲು ಶುರು ಮಾಡಿದರು. ಕಾರಣ ಏನೆಂದರೆ, ಗಂಡ ಇನ್ನೊಬ್ಬ ಮಹಿಳೆಯೊಂದಿಗೆ ಇರುವ ಕೆಲ ಫೋಟೋಗಳನ್ನು ಮಾಧವಿ ನೋಡಿದಳು. ಜಗಳ ನಡೆಯುತ್ತಿದ್ದಂತೆ ಮೊದಲೇ ಕೊಲೆಗೆ ಪ್ಲಾನ್ ಮಾಡಿದ್ದ ಗುರುಮೂರ್ತಿ, ಪತ್ನಿಯ ತಲೆಗೆ ಬಲವಾದ ಆಯುಧದಿಂದ ಹೊಡೆದನು. ಏಟು ತಾಳಲಾರದೇ ಮಾಧವಿ ಕೆಳಗೆ ಬಿದ್ದರು ಮತ್ತು ಸ್ಥಳದಲ್ಲೇ ಆಕೆ ಮೃತಪಟ್ಟಳು. ಬಳಿಕ ಆರು ತಿಂಗಳ ಹಿಂದೆ ಒಟಿಟಿಯಲ್ಲಿ ನೋಡಿದ ವೆಬ್ ಸರಣಿಯ ಪಾತ್ರಗಳಂತೆ ದೇಹವನ್ನು ವಿಲೇವಾರಿ ಮಾಡಲು ಗುರುಮೂರ್ತಿ ಮುಂದಾದನು. ಇದರ ಭಾಗವಾಗಿ, ದೇಹವನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗಿ ತುಂಡುಗಳಾಗಿ ಕತ್ತರಿಸಿದನು.
ನಂತರ ಹೀಟರ್ ಬಳಸಿ ಬಕೆಟ್ ನೀರನ್ನು ಬಿಸಿ ಮಾಡಿ ಮಾಂಸದ ತುಂಡುಗಳನ್ನು ಅದರೊಳಗೆ ಹಾಕಿದ್ದಾನೆ. ತುಂಡುಗಳನ್ನು ಮಾಡಿದ ನಂತರ, ಮಾಂಸವನ್ನು ಮೂಳೆಗಳಿಂದ ಬೇರ್ಪಡಿಸಿದ್ದಾರೆ. ಮಾಂಸ ಮತ್ತು ಮೂಳೆಗಳನ್ನು ಒಂದು ದೊಡ್ಡ ಕುಕ್ಕರ್ನಲ್ಲಿ ಬೇಯಿಸಿದ್ದಾನೆ. ಚೆನ್ನಾಗಿ ಬೇಯಿಸಿದ ಬಳಿಕ ಒಣಗಿಸಿ, ಮಾಂಸವನ್ನು ಸುಟ್ಟು ಹಾಕಿದ್ದಾನೆ. ಅಲ್ಲದೆ, ಮೂಳೆಗಳನ್ನು ಚೆನ್ನಾಗಿ ಪುಡಿ ಮಾಡಿದ್ದಾನೆ. ಇದಾದ ಬಳಿಕ ಬೂದಿಯನ್ನು ಒಳಚರಂಡಿ ಮ್ಯಾನ್‌ಹೋಲ್‌ನಲ್ಲಿ ಬೆರೆಸಿ ಉಳಿದ ಮೂಳೆಯ ಪುಡಿಯನ್ನು ಹತ್ತಿರದ ಜಿಲ್ಲಲಾಗುಡದ ಕೊಳಕ್ಕೆ ಎಸೆದಿದ್ದಾನೆ.
ಕೊಲೆಯಾದ ನಂತರ ಸುಮಾರು ಎರಡು ದಿನಗಳ ಕಾಲ ನಿದ್ದೆ ಮಾಡದೆ ಇದನ್ನೆಲ್ಲ ಮಾಡಿದೆ ಎಂದು ಆರೋಪಿ ಗುರುಮೂರ್ತಿ ಪೊಲೀಸರಿಗೆ ಹೇಳಿದ್ದಾನೆ. ದೇಹವನ್ನು ಕತ್ತರಿಸಿದ ಬಳಿಕ ಕೋಣೆಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾನೆ. 17ನೇ ತಾರೀಖಿನಂದು ಸಂಜೆ, ಮಾಧವಿಯ ಪಾಲಕರಿಗೆ ಕರೆ ಮಾಡಿ, ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ಹೇಳಿದ್ದಾನೆ. ಸಣ್ಣ ಜಗಳದಿಂದಾಗಿ ಆಕೆ ಮನೆ ಬಿಟ್ಟು ಹೋದಳು ಎಂದು ಕತೆ ಕಟ್ಟಿದ್ದಾನೆ. ಮಾಧವಿ ಪಾಲಕರ ಜತೆಗೆ ತೆರಳಿ ದೂರು ಸಹ ದಾಖಲಿಸಿದ್ದ.
ಪ್ರಕರಣದ ತನಿಖೆ ನಡೆಸುತ್ತಿದ್ದಾಗ, ಪೊಲೀಸರಿಗೆ ಗುರುಮೂರ್ತಿಯ ಮೇಲೆ ಅನುಮಾನ ಮೂಡಿತು. ಮಾಧವಿ ಮನೆಗೆ ಪ್ರವೇಶಿಸುವುದನ್ನು ಹೊರತುಪಡಿಸಿ, ಆಕೆ ಹೊರಗೆ ಬರುವ ಯಾವುದೇ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿರಲಿಲ್ಲ. ಇದರಿಂದ ಅನುಮಾನ ಮತ್ತಷ್ಟು ಬಲವಾಯಿತು. ಬಳಿಕ ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನಿಜವಾದ ಕತೆ ಬೆಳಕಿಗೆ ಬಂದಿತು. ಬುಧವಾರ ಮತ್ತು ಗುರುವಾರ ಆರೋಪಿಯ ನಿವಾಸವನ್ನು ಪರಿಶೀಲಿಸಿದ್ದ ತನಿಖಾ ತಂಡ ಮತ್ತು ವಿಧಿವಿಜ್ಞಾನ ತಂಡಗಳು, ಮನೆಯಿಂದ ನೀರಿನ ಬಕೆಟ್, ವಾಟರ್ ಹೀಟರ್ ಮತ್ತು ಕೆಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಅವುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೇಹವನ್ನು ತುಂಡು ಮಾಡಿ ಕುಕ್ಕರ್ನಲ್ಲಿ ಹಾಕಿ ಬೇಯಿಸಲಾಗಿದೆ ಎಂಬುದಕ್ಕೆ ಕೆಲವು ಪುರಾವೆಗಳು ಕಂಡುಬಂದಿವೆ.
ಪೊಲೀಸರ ತನಿಖೆಗೆ ಟ್ವಿಸ್ಟ್
ಆರೋಪಿ ಹೇಳಿರುವ ವಿಷಯಗಳನ್ನು ಆಧರಿಸಿ ತನಿಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ ಹೊಸ ಟ್ವಿಸ್ಟ್ ತಲೆನೋವಾಗಿ ಪರಿಣಮಿಸಿದೆ. ಮೂಳೆಗಳನ್ನು ಕೆರೆಗೆ ಎಸೆದಿರುವುದಾಗಿ ಹೇಳಿದ್ದರೂ ಅಲ್ಲಿ ಇನ್ನೂ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಶವದ ಕುರುಹುಗಳೇನಾದರೂ ಕಂಡುಬಂದರೆ, ಅದನ್ನು ಮಾಧವಿಯ ಮಕ್ಕಳ ಡಿಎನ್‌ಎ ಜೊತೆ ಹೋಲಿಸುವ ಸಾಧ್ಯತೆಯಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಇಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಿರ್ಣಾಯಕವಾಗಿರುತ್ತದೆ. ಮಾಧವಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಅವರು ಮನೆಯೊಳಗೆ ಹೋಗುತ್ತಿರುವ ದೃಶ್ಯಗಳು ಮಾತ್ರ ಪತ್ತೆಯಾಗಿವೆ ಎಂದು ಎಲ್‌ಬಿ ನಗರ ಡಿಸಿಪಿ ಪ್ರವೀಣ್ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
- Gold Price Today : ಮತ್ತೆ ಭಾರೀ ಏರಿಕೆ ಕಂಡ ಚಿನ್ನದ ಬೆಲೆ.! ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- Borewell Scheme : ಬೋರ್ವೆಲ್ ಕೊರಿಸಲು ರೈತರಿಗೆ ಸಹಾಯಧನ: ಯಾವ ರೈತರು ಅರ್ಜಿ ಸಲ್ಲಿಸಬಹುದು..? ಅರ್ಜಿ ಸಲ್ಲಿಸುವುದು ಹೇಗೆ..?
- Gold Price Today : ಇಂದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ.? ಮತ್ತೆ ಏರಿಕೆ ಕಂಡ ಗೋಲ್ಡ್ ಬೆಲೆ.!
- Gold Price : ಅಲ್ಪ ಕುಸಿತ ಕಂಡ ಚಿನ್ನ.! ಇವತ್ತಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- Gold Price Today : ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ಗೊತ್ತಾ.? ಇವತ್ತಿನ ಗೋಲ್ಡ್ ರೇಟ್ ನೋಡಿ
- Gold Price : ಇವತ್ತಿನ ಗೋಲ್ಡ್ ರೇಟ್ ಎಷ್ಟಿದೆ ಗೊತ್ತಾ.? ಚಿನ್ನಪ್ರಿಯರಿಗೆ ಸಿಹಿಸುದ್ಧಿ ಇದೆಯಾ.?
- Gold Price Today : ಚಿನ್ನದ ಬೆಲೆ ಮತ್ತೆ ಕುಸಿಯಿತೇ.? ಇವತ್ತಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ ನೋಡಿ
- Gold Price : ಇವತ್ತಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.? ಹೆಣ್ಣು ಮಕ್ಕಳಿಗೆ ಸಿಹಿಸುದ್ಧಿ ಇದೆಯಾ.?
- ಸರ್ಕಾರದ ಈ ಯೋಜನೆಯಡಿ ₹3,000/- ಠೇವಣಿ ಮಾಡಿದ್ರೆ ಸಿಗಲಿದೆ 16 ಲಕ್ಷ ರೂ.! ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್.!
- Gold Price Today : ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ.? ಎಷ್ಟಿದೆ ನೋಡಿ ಇಂದಿನ ಚಿನ್ನದ ಬೆಲೆ.?
- Gold Price : ಮತ್ತೆ ಭರ್ಜರಿ ಕುಸಿತ ಕಂಡ ಬಂಗಾರ.! ಇವತ್ತಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ.?
- Gold Price Today : ಇಂದಿನ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ.! ಎಷ್ಟು ಇಳಿಕೆ ಕಂಡಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Soujanya Case : ಯುಟ್ಯೂಬರ್ ಸಮೀರ್ MD ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಂದ ನೋಟಿಸ್.?
- Gold Price Today : ಇಂದು ಚಿನ್ನ ಖರೀದಿಗೆ ಮುಂದಾಗಿದ್ದೀರಾ.? ಎಷ್ಟಿದೆ ನೋಡಿ ಇಂದಿನ ಚಿನ್ನ ಹಾಗು ಬೆಳ್ಳಿಯ ಬೆಲೆ.?
- Gold Price : ಚಿನ್ನ ಖರೀದಿ ಮಾಡುವವರಿಗೆ ಶಾಕ್ ನೀಡಿತಾ ಬಂಗಾರ.! ಎಷ್ಟಾಗಿದೆ ಗೊತ್ತಾ ಚಿನ್ನದ ರೇಟ್.?
- ಕಾಮುಕ ಶಿಕ್ಷಕ ನಿದ್ದೆ ಮಾತ್ರೆ ನೀಡಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ – ಪ್ರಕರಣ ದಾಖಲು
- Gold Price : ಇಂದಿನ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ.? ಚಿನ್ನ ಖರೀದಿದಾರರಿಗೆ ಸಿಹಿಸುದ್ಧಿ ಇದೆಯಾ.?
- Gold Price : ಗೋಲ್ಡ್ ಪ್ರಿಯರಿಗೆ ಮತ್ತೆ ಬಂಪರ್ ಸುದ್ಧಿ.! ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Krishi Bhagya Scheme : ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.?
- Gold Price Today : ಬಂಗಾರ ಪ್ರಿಯರಿಗೆ ಸಿಹಿಸುದ್ಧಿ! ಭಾರೀ ಇಳಿಕೆಯತ್ತ ಚಿನ್ನದ ದರ.?
- Gold Rate : ಭಾರೀ ಇಳಿಕೆಯಾಯ್ತಾ ಚಿನ್ನದ ಬೆಲೆ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ರೇಟ್.?
- Birth Certificate : ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..? ಮೊಬೈಲ್ ಮೂಲಕವೇ ಪ್ರಮಾಣಪತ್ರ ಪಡೆಯಬಹುದು.?
- Constable Recruitment : SSLC ಪಾಸಾದವರಿಗೆ ಸಿಹಿಸುದ್ಧಿ – 1161ಕಾನ್ಸ್ಟೇಬಲ್’ ಹುದ್ದೆಗಳಿಗೆ ಅರ್ಜಿ ಆಹ್ವಾನ
- Gold Price : ಇಳಿಕೆಯತ್ತ ಸಾಗಿದ ಬಂಗಾರದ ಬೆಲೆ.! ಭರ್ಜರಿ ಇಳಿಕೆ ಕಂಡಿತಾ ಬಂಗಾರ.?
- Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ
- Post Office Scheme : ಮಹಿಳೆಯರಿಗಾಗಿ ಪೋಸ್ಟ್ ಆಫೀಸ್ನಲ್ಲಿ ಬಂಪರ್ ಆಫರ್.! ಪೋಸ್ಟ್ ಆಫೀಸ್ ಖಾತೆ ಇದ್ದರೆ ತಪ್ಪದೇ ನೋಡಿ
- ಹೊನ್ನಾವರ ಬಂದರು ಯೋಜನೆ ವಿರುದ್ಧ ಬೀದಿಗಿಳಿದ ಜನ – ಹಲವರ ಬಂಧನ, ನಿಷೇಧಾಜ್ಞೆ ಜಾರಿ