ಮೊದಲ ರಾತ್ರಿಯಂದು ವಧು ಇಟ್ಟ ಡಿಮ್ಯಾಂಡ್‌ ನೋಡಿ ವರ ಶಾಕ್‌.! ವೈರಲ್ ವಿಡಿಯೋ ಇಲ್ಲಿದೆ

Spread the love

ಮದುವೆಯ ಮೊದಲ ರಾತ್ರಿ ಸವಿ ಅನುಭವಕ್ಕಾಗಿ ಕಾದು ಕುಳಿತಿದ್ದ ನವ ವಿವಾಹಿತನಿಗೆ ವಧು ಶಾಕ್‌ ನೀಡಿರುವ ಘಟನೆಯೊಂದು ಉತ್ತರಪ್ರದೇಶದ ಸಹರಾನ್‌ ಪುರದಲ್ಲಿ ನಡೆದಿದೆ. ಮೊದಲ ರಾತ್ರಿಯಂದು ತನ್ನ ತಲೆಯ ಅವಗುಂಠನ (ಮೇಲ್ಮುಸುಕು) ತೆಗೆದು ತನ್ನ ವದನಾರವಿಂದವನ್ನು ತೋರಿಸಲು ಬಿಯರ್‌, ಗಾಂಜಾ ಹಾಗೂ ಮೇಕೆ ಮಾಂಸ ಬೇಕೆಂದು ಬೇಡಿಕೆಯಿಟ್ಟಿದ್ದಾಳೆ. ಇದನ್ನು ಕೇಳಿದ ವರ ಶಾಕ್‌ ಆಗಿದ್ದು, ಪೊಲೀಸರ ಮೊರೆ ಹೋಗಿದ್ದಾನೆ.


ಪೊಲೀಸ್‌ ಠಾಣೆಯಲ್ಲಿ ಈ ವಿಚಿತ್ರ ವಧುವಿನ ಬೇಡಿಕೆಗಳನ್ನು ಪೊಲೀಸರು ಆಲಿಸುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ.

WhatsApp Group Join Now

ಈ ವಿಡಿಯೋಗೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಮೆಂಟಿಸಿದ್ದಾರೆ. ಕೆಲವರು ಇದು ಸ್ತ್ರೀಸ್ವಾತಂತ್ರ್ಯ. ಇದನ್ನೇ ಹುಡುಗ ಕೇಳಿದ್ದರೆ ತಪ್ಪಾಗುತ್ತಿತ್ತೇ ಎಂದು ಪ್ರತಿಕ್ರಿಯಿಸಿದ್ದರೆ, ಇನ್ನೂ ಕೆಲವರು ..ಪೊಲೀಸರ ಬಳಿ ಯಾಕೆ ಹೋದಿರಿ. ಅವರೇನು ಗಾಂಜಾ ಹಾಗೂ ಮೇಕೆ ಮಾಂಸ ತರಿಸಿಕೊಡ್ತಾರೆಯೇ ಎಂದು ಕಾಲೆಳೆದಿದ್ದಾರೆ.

ಇದೇ ವೇಳೆ ಪೊಲೀಸ್‌ ಠಾಣೆಯಲ್ಲಿ ಹೈಡ್ರಾಮಾ ನಡೆದಿದ್ದು, ಮದುವಣಗಿತ್ತಿ ಹುಡುಗಿಯೇ ಅಲ್ಲ. ಆಕೆಯೊಬ್ಬ ತೃತೀಯ ಲಿಂಗಿ ಎಂದು ಹುಡುಗನ ಮನೆಯವರು ಆರೋಪಿಸಿದ ಘಟನೆಯೂ ನಡೆದಿದೆ. ಕೊನೆಗೆ ರಾಜಿ ಮುಖಾಂತರ ಎರಡೂ ಕುಟುಂಬಗಳನ್ನು ಸಮಾಧಾನ ಪಡಿಸಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.


Spread the love

Leave a Reply