ತಾಂಡವ್ನನ್ನು ಬ್ಲಾಕ್ಮೇಲ್ ಮಾಡಿ ಮನೆಗೆ ಬಂದು ಸೇರಿಕೊಂಡಿರುವ ಶ್ರೇಷ್ಠಾ, ತಾನು ಅಧಿಕೃತವಾಗಿ ಆ ಮನೆ ಸೊಸೆ ಎನ್ನುವಂತೆ ವರ್ತಿಸುತ್ತಿದ್ದಾಳೆ. ಮನೆಯವರೆಲ್ಲಾ ನನ್ನನ್ನು ಇಲ್ಲಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾನು ಆ ಭಾಗ್ಯಾಗಿಂತ ಕಡಿಮೆ ಎನಿಸಿಕೊಳ್ಳಬಾರದು ಎಂದು ಮನೆ ಕೆಲಸವನ್ನು ತಾನೇ ಮಾಡುತ್ತಿದ್ದಾಳೆ.
ಸತ್ಯನಾರಾಯಣಸ್ವಾಮಿಗೆ ಪ್ರಸಾದ ತಯಾರಿಸುತ್ತೇನೆ ಎಂದು ಹೇಳಿ ಶ್ರೇಷ್ಠಾ, ಉಪ್ಪಿಟ್ಟು ತಯಾರಿಸುತ್ತಾಳೆ. ಅದನ್ನು ನೋಡಿ ಅರ್ಚಕರು ಇಷ್ಟು ವರ್ಷಗಳ ಕಾಲ ಪೂಜೆ ಮಾಡಿದ್ದೇನೆ ಎಲ್ಲಿಯೂ ಈ ರೀತಿ ಪ್ರಮಾದ ಆಗಿಲ್ಲ, ಯಾರಾದರೂ ಸತ್ಯನಾರಾಯಣ ಪೂಜೆಗೆ ಉಪ್ಪಿಟ್ಟು ತಯಾರಿಸುತ್ತಾರಾ ಎಂದು ಕೇಳುತ್ತಾರೆ, ಅದರ ರುಚಿ ನೋಡುವ ಶ್ರೇಷ್ಠಾ ಚೆನಾಗಿದೆಯಲ್ಲಾ ಇದನ್ನು ಏಕೆ ಪ್ರಸಾದವಾಗಿ ಇಡುವುದಿಲ್ಲ ಎಂದು ಕೇಳುತ್ತಾಳೆ. ಶ್ರೇಷ್ಠಾ ವರ್ತನೆಗೆ ತಾಂಡವ್ ಬಿಟ್ಟು ಉಳಿದವರು ಸಿಟ್ಟಾಗುತ್ತಾರೆ. ನಾನು ಮನೆಯಲ್ಲಿ ಪೂಜೆ ಮಾಡುವುದಿಲ್ಲ ಎಂದು ಅರ್ಚಕರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಅವರನ್ನು ಮನವಿ ಮಾಡುವ ಭಾಗ್ಯಾ ನಾನು ಇನ್ನು 5 ನಿಮಿಷದಲ್ಲಿ ದೇವರಿಗೆ ಪ್ರಸಾದ ಮಾಡಿಕೊಡುತ್ತೇನೆ ಎನ್ನುತ್ತಾಳೆ.
ಹೇಳಿದಂತೆ ಭಾಗ್ಯಾ 5 ನಿಮಿಷಕ್ಕೆ ಪ್ರಸಾದ ಮಾಡಿ ತರುತ್ತಾಳೆ. ಪೂಜೆಗೆ ಯಾರು ಕೂರುತ್ತಾರೆ ರಂದು ಅರ್ಚಕರು ಕೇಳುತ್ತಾರೆ. ಭಾಗ್ಯಾ ಹಾಗೂ ತಾಂಡವ್ ಕೂರುತ್ತಾರೆ ಎಂದು ಧರ್ಮರಾಜ್ ಹೇಳುತ್ತಾಳೆ. ಆದರೆ ಶ್ರೇಷ್ಠಾ ಅದಕ್ಕೆ ನಿರಾಕರಿಸುತ್ತಾಳೆ. ಡಿವೋರ್ಸ್ ಆಗಿರುವ ಭಾಗ್ಯಾ ಹೇಗೆ ತಾಂಡವ್ ಜೊತೆ ಪೂಜೆಗೆ ಕೂರುತ್ತಾಳೆ? ನಾನು ಕೂರುತ್ತೇನೆ ಎನ್ನುತ್ತಾಳೆ. ತಾಳಿ ಇಲ್ಲದೆ ನೀನು ಪೂಜೆಗೆ ಕೂರೋಕೆ ಆಗುವುದಿಲ್ಲ ಎಂದು ಸುನಂದಾ ಹೇಳುತ್ತಾಳೆ.ಹಾಗಾದರೆ ಈ ಪೂಜೆ ನಡೆಯುವುದಿಲ್ಲ, ಭಾಗ್ಯಾ ತನ್ನ ಸ್ವಾರ್ಥಕ್ಕಾಗಿ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ನಿಲ್ಲಿಸುತ್ತಾಳೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಪೂಜೆ ನಿಲ್ಲುವುದಿಲ್ಲ, ಈ ಮನೆಯಲ್ಲಿ ಹಿರಿಯ ದಂಪತಿ ಇದ್ದಾರೆ, ನನ್ನ ಅತ್ತೆ ಮಾವ, ಅವರು ಪೂಜೆಗೆ ಕೂರುತ್ತಾರೆ ಎಂದು ಭಾಗ್ಯಾ ಹೇಳುತ್ತಾಳೆ.
ಕುಸುಮಾ, ಧರ್ಮರಾಜ್ ಇಬ್ಬರೂ ಪೂಜೆಗೆ ಕೂರುತ್ತಾರೆ. ಪೂಜೆ ಮುಗಿದ ನಂತರ ಎಲ್ಲರಿಗೂ ತಾಂಬೂಲ ಕೊಡುವಂತೆ ಅರ್ಚಕರು ಭಾಗ್ಯಾಗೆ ತಟ್ಟೆ ಕೊಡುತ್ತಾರೆ. ಅದನ್ನು ತೆಗೆದುಕೊಳ್ಳಲು ಭಾಗ್ಯಾ ಹೋದಾಗ, ಅವಳ ಕೈಯಿಂದ ಶ್ರೇಷ್ಠಾ ಕಸಿದುಕೊಂಡು ಎಲ್ಲರಿಗೂ ತಾಂಬೂಲ ಕೊಡಲು ಹೋಗುತ್ತಾಳೆ. ಆದರೆ ಅವಳ ಕೈಯಿಂದ ಯಾರೂ ತಾಂಬೂಲ ತೆಗೆದುಕೊಳ್ಳುವುದಿಲ್ಲ. ಈ ಮನೆಗೆ ತಕ್ಕ ಸೊಸೆ ಭಾಗ್ಯಾ, ಅವಳು ಕೊಟ್ಟರೆ ಮಾತ್ರ ನಾವು ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಪೂಜಾ ಬಂದು ಶ್ರೇಷ್ಠಾ ಕೈಯಿಂದ ತಾಂಬೂಲದ ತಟ್ಟೆ ಕಸಿದುಕೊಂಡು ಭಾಗ್ಯಾಗೆ ಕೊಡುತ್ತಾಳೆ.
ಕೋಪಗೊಂಡ ಶ್ರೇಷ್ಠಾ ರೂಮ್ಗೆ ಹೋಗುತ್ತಾಳೆ. ನಾನು ಭಾಗ್ಯಾ ಆಗಿ ಇದ್ದರೆ ಇವರನ್ನೆಲ್ಲಾ ಬಗ್ಗಿಸಲು ಸಾಧ್ಯವಿಲ್ಲ. ನಾನು ಶ್ರೇಷ್ಠಾ ಆಗೇ ಇವರಿಗೆ ಬುದ್ಧಿ ಕಲಿಸುತ್ತೇನೆ ಎಂದುಕೊಳ್ಳುತ್ತಾಳೆ. ಮರುದಿನ ಆಫೀಸಿಗೆ ಹೋಗಲು ರೆಡಿ ಆಗುತ್ತಾಳೆ. ನೀನು ಆಫೀಸಿಗೆ ಹೋದರೆ ಮನೆ ಕೆಲಸ ಯಾರು ಮಾಡುತ್ತಾರೆ ಎಂದು ಕುಸುಮಾ ಕೇಳುತ್ತಾಳೆ. ಅದಕ್ಕೆ ನಾನು ಎಲ್ಲಾ ರೆಡಿ ಮಾಡಿದ್ದೇನೆ ಎಂದು ಹೇಳುವ ಶ್ರೇಷ್ಠಾ, ಮನೆ ಕೆಲಸದವಳನ್ನು ಕರೆಯುತ್ತಾಳೆ.
ಮನೆ ಕೆಲಸದವಳನ್ನು ಕುಸುಮಾ ಒಪ್ಪುತ್ತಾಳಾ.? ಶ್ರೇಷ್ಠಾ ಮತ್ತೇನು ಅವಾಂತರ ಮಾಡುತ್ತಾಳೆ.? ಮುಂದಿನ ಎಪಿಸೋಡ್ಗಳಲ್ಲಿ ಉತ್ತರ ದೊರೆಯಲಿದೆ.
- ಮಹಿಳೆಯರಿಗಿಂತ ಪುರುಷರಲ್ಲೇ ಹೃದಯ ರೋಗದ ಅಪಾಯ ಹೆಚ್ಚು ; ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ..!
- ‘ಬ್ರೈನ್ ಸ್ಟ್ರೋಕ್’ ಬರುವ 24 ಗಂಟೆ ಮುನ್ನವೇ ದೇಹ ನೀಡುತ್ತೆ ಈ 6 ಎಚ್ಚರಿಕೆ ಸಂಕೇತಗಳು.!
- ದಿನ ಭವಿಷ್ಯ (21-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- 40ರಲ್ಲೂ 25ರವರಂತೆ ಕಾಣಬೇಕೇ? ಆರೋಗ್ಯ ತಜ್ಞರು ಹೇಳಿದ ಈ 4 ಆಹಾರ ಪದ್ಧತಿ ನಿಮ್ಮನ್ನು ಸದಾ ಯಂಗ್ ಆಗಿ ಇಡುತ್ತೆ!
- ಲೈಂಗಿಕ ಸಾಮರ್ಥ್ಯದ ಕೊರತೆಯ ಆತಂಕವೇ.? ಹೀಗ್ ಮಾಡಿದ್ರೆ ನಿಮ್ಮೆಲ್ಲಾ ಸಮಸ್ಯೆಗಳು ಮಾಯ..!
- ಯಾರಿಗೂ ಗೊತ್ತಾಗಲ್ಲ ಅಂತ ‘ಪೋರ್ನ್ ವಿಡಿಯೋ’ ನೋಡುವವರೇ ಇತ್ತ ಗಮನಿಸಿ!
- 110-210 ರೂ.ಗೆ ಪೆಟ್ರೋಲ್ ಹಾಕಿಸುವ ಟ್ರಿಕ್ಸ್ ಹಳೇದಾಯ್ತು : 2 ‘ಗೋಲ್ಡನ್ ಟಿಪ್ಸ್’ ಕೊಟ್ಟ ಪೆಟ್ರೋಲ್ ಬಂಕ್ ಉದ್ಯೋಗಿ
- ದಿನ ಭವಿಷ್ಯ (20-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..? ಸಂಪೂರ್ಣ ಮಾಹಿತಿ
- ದಿನ ಭವಿಷ್ಯ (19-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- Dina Bhavishya : ದಿನ ಭವಿಷ್ಯ (18-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಗೃಹಜ್ಯೋತಿ ಯೋಜನೆ ಅಪ್ ಡೇಟ್: ಮನೆ ಮನೆಗೆ ದಾಖಲೆ ಪರಿಶೀಲನೆ ಆರಂಭ, ಈ ದಾಖಲೆಗಳು ಕಡ್ಡಾಯ!
- ಬಂಟ್ವಾಳ ಘಟನೆ ಮಾಸುವ ಮುನ್ನ ಮತ್ತೊಬ್ಬ 16ರ ಹುಡಗಿ ಬಲಿ ; ಪ್ರೇಯಸಿ ಕೊಂದು ತೋಟದಲ್ಲಿ ಹೂತುಹಾಕಿದ ಪ್ರೇಮಿ.!
- Irregular Periods : ಪದೇ ಪದೇ ತಡವಾಗುತ್ತಿರುವ ಪಿರಿಯಡ್ಸ್. ಹಾಲಿನ ಜೊತೆ ಇದನ್ನು ಸೇವಿಸಿದ್ರೆ ಸಮಸ್ಯೆ ಮಾಯ
- ಮಹಿಳೆಯರೇ, ಎಚ್ಚರ.! ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಗರ್ಭಕಂಠದ ಕ್ಯಾನ್ಸರ್ ಬಂದಿದೆ ಎಂದರ್ಥ!
- Dina Bhavishya : ಇಂದು ಈ ರಾಶಿಯವರು ತಮ್ಮ ನಿರ್ಧಾರ ಮತ್ತು ಸ್ವಭಾವವನ್ನು ಪರರಮೇಲೆ ಹೇರುವರು.
- ಫ್ಯಾಟಿ ಲಿವರ್ ಸಮಸ್ಯೆ ಇದ್ದರೆ ಈ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಸಬಹುದು ಹುಷಾರ್!
- Health : ನಿಮಗೆ ಕ್ಯಾನ್ಸರ್ ಉಂಟು ಮಾಡುವ ಅಡುಗೆ ಮನೆಯಲ್ಲಿರುವ ಈ ವಸ್ತುಗಳ ಬಗ್ಗೆ ಎಚ್ಚರವಿರಲಿ!
- ಬಿಜೆಪಿ ಹೆಗಲೇರಿ 20 ಸೀಟು ಗೆಲ್ಲೋದು ಸಾಧನೆಯಲ್ಲ : ಹೆಚ್ಡಿಕೆಗೆ ಚಲುವರಾಯಸ್ವಾಮಿ ಟಾಂಗ್
- PM Vishwakarma : ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಹೇಗೆ ಸಾಲ ಪಡೆಯುವುದು.? ಬೇಕಾಗುವ ದಾಖಲೆಗಳೇನು.?
- Post Office Scheme : ಮಹಿಳೆಯರಿಗಾಗಿ ಪೋಸ್ಟ್ ಆಫೀಸ್ನಲ್ಲಿ ಬಂಪರ್ ಆಫರ್.! ಪೋಸ್ಟ್ ಆಫೀಸ್ ಖಾತೆ ಇದ್ದರೆ ತಪ್ಪದೇ ನೋಡಿ
- Arecanut Price : ಅಡಿಕೆ ಬೆಲೆ ಏರಿಕೆಯೇ? ಇಳಿಕೆಯೇ? ಇಂದಿನ ಲೈವ್ ಅಪ್ಡೇಟ್
- ಮಹಿಳೆಯರೇ ಎಚ್ಚರ : ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸಿದ್ರೆ ‘ಕ್ಯಾನ್ಸರ್’ ಬರಬಹುದು.!
- Dina Bhavishya : ಇಂದು ಈ ರಾಶಿಯವರು ದೊಡ್ಡ ವಿಚಾರದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಇಚ್ಛಿಸರು.
- ಮಿಕ್ಸ್ಚರ್ನಲ್ಲಿದ್ದ ಶೇಂಗಾಬೀಜ ನುಂಗಿ ಮೂರು ವರ್ಷದ ಕಂದಮ್ಮ ದುರ್ಮರಣ
- ಅಧಿಕಾರಿಗಳಿಗೆ ಹೊಡೆಯಬೇಡಿ, ಬೇಕಾದ್ರೆ ನನಗೆ ಪೊರಕೆಯಲ್ಲಿ ಹೊಡೆಯಿರಿ: ಬಿಡದಿ ಘಟನೆಗೆ ಕಣ್ಣೀರು ಹಾಕಿದ ಸಿಎಂ ಡಿಕೆಶಿ
- ಮಹಿಳೆಯರೇ ಎಚ್ಚರ : ಅಪ್ಪಿತಪ್ಪಿಯೂ ‘ಫ್ರಿಡ್ಜ್’ ಪಕ್ಕದಲ್ಲಿ ಈ ವಸ್ತುಗಳನ್ನು ಇಡಬೇಡಿ.!
- ಮಹಿಳೆಯರೇ ಎಚ್ಚರ : ‘ತಲೆ ಕೂದಲು’ ಕೊಟ್ಟು ಪಾತ್ರೆ ಖರೀದಿಸುವವರು ತಪ್ಪದೇ ಇದನ್ನೊಮ್ಮೆ ಓದಿ.!
- 40 ವರ್ಷದ ನಂತರ ಮಹಿಳೆಯರಲ್ಲಿ ಕಿಡ್ನಿ ಹಾನಿ ಮಾಡುವ 5 ದೈನಂದಿನ ಅಭ್ಯಾಸಗಳು



























