Gruhalakshmi Scheme : ಗೃಹಿಣಿಯರಿಗೆ ಬಿಗ್ ಶಾಕ್ – ಗೃಹಲಕ್ಷ್ಮಿ ಯೋಜನೆಯ ರದ್ದತಿ ಪಟ್ಟಿ ಬಿಡುಗಡೆ.! ಹಣ ಜಮಾ ಆಗಲ್ವಾ.?

Gruhalakshmi Scheme : ನಮಸ್ಕಾರ ಸ್ನೇಹಿತರೇ, ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 12 ಮತ್ತು 13 ನೇ ಕಂತಿನ ಹಣ ಕೆಲ ಮಹಿಳೆಯರಿಗೆ ಜಮಾ ಆಗುವುದಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಕೂಡ ಓದಿ : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ ಸೌಲಭ್ಯ.! ಅರ್ಹ ರೈತರು ಈ ಯೋಜನೆಯ ಲಾಭವನ್ನು ಹೇಗೆ ಪಡೆದುಕೊಳ್ಳುವುದು.? ನೋಡೋಣ

ಹೌದು, ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಕೆಲ ಮಹಿಳೆಯರಿಗೆ ಮಾತ್ರ 12 ಮತ್ತು 13 ನೇ ಕಂತಿನ ಹಣ ಜಮಾ ಆಗುವುದಿಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರು ಅಥವಾ ಅವರ ಪತಿ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರೆ ಅವರು ಈ ಯೋಜನೆಗೆ ಅರ್ಹರಲ್ಲ. ಹಾಗೆಯೇ ಆದಾಯ ತೆರಿಗೆ ಪಾವತಿಸುತ್ತಿರುವ ಅಥವಾ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಫಲಾನುಭವಿಗಳನ್ನು ಸಹ ಅನರ್ಹಗೊಳಿಸಲಾಗಿದೆ.

ಇದನ್ನೂ ಕೂಡ ಓದಿ : Crop Insurance : ಬೆಳೆ ಸಮೀಕ್ಷೆ ಮಾಡಿಲ್ಲವೆಂದರೆ ಆಗುವ ಅನಾಹುತಗಳು – ಬೆಳೆ ವಿಮೆ ಜಮಾ ಆಗಬೇಕೆಂದರೆ ರೈತರು ಈ ಕೆಲಸವನ್ನು ಕೂಡಲೇ ಮಾಡಿ.!

ಗೃಹಲಕ್ಷ್ಮಿ ಯೋಜನೆಯು ಕಡಿಮೆ-ಆದಾಯದ ಹಿನ್ನೆಲೆಯ ಮಹಿಳೆಯರಿಗೆ ಮೀಸಲಾಗಿದೆ. ಈ ಪರಿಶೀಲನೆಯು ಸುಮಾರು 2 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲು ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿ ಸೆಪ್ಟೆಂಬರ್ ನಲ್ಲಿ ನಿರೀಕ್ಷಿಸಲಾಗಿದ್ದ 12ನೇ ಮತ್ತು 13ನೇ ಕಂತಿನ ಹಣ ಬಿಡುಗಡೆಯನ್ನು ವಿಳಂಬಗೊಳಿಸಿದೆ.

Leave a Reply