ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ‘ಗೃಹಜ್ಯೋತಿ’ ಯೋಜನೆಯ ಮನೆ ಮನೆ ಸಮೀಕ್ಷೆಯ ಅಂತಿಮ ಗಡುವು ಅಕ್ಟೋಬರ್ 31ಕ್ಕೆ ಮುಕ್ತಾಯವಾಗಲಿದೆ. ಸಮೀಕ್ಷೆಯ ವೇಳೆ ಮನೆಗೆ ಬೀಗ ಹಾಕಿದ್ದ ಕಾರಣಕ್ಕೆ ಅಥವಾ ಕೆಲಸ ಹಾಗೂ ಕಚೇರಿ ನಿಮಿತ್ತ ಹೊರಗಡೆ ತೆರಳಿದ್ದರಿಂದ ಸಮೀಕ್ಷೆಯಲ್ಲಿ ಭಾಗಿಯಾಗಲು ಸಾಧ್ಯವಾಗದ ಗ್ರಾಹಕರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ.
ಇಂತಹ ಗ್ರಾಹಕರು ತಮ್ಮ ಅಗತ್ಯ ದಾಖಲಾತಿಗಳನ್ನು ವ್ಯಾಪ್ತಿಯ ಬೆಸ್ಕಾಂ (BESCOM) ಉಪ ವಿಭಾಗೀಯ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸುವಂತೆ ಬೆಸ್ಕಾಂ ವಿನಂತಿಸಿಕೊಂಡಿದೆ.
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳು ಸೇರಿದಂತೆ ಒಟ್ಟು 74,29,773 ಗೃಹ ಜ್ಯೋತಿ ಗ್ರಾಹಕರಿದ್ದಾರೆ. ಅಕ್ಟೋಬರ್ 22ರ ವೇಳೆಗೆ ಈಗಾಗಲೇ 73,17,687 ಗ್ರಾಹಕರ ಸಮೀಕ್ಷೆ (ಶೇ. 98.49) ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನುಳಿದ ಸಣ್ಣ ಪ್ರಮಾಣದ ಗ್ರಾಹಕರು ಗಡುವಿನೊಳಗೆ ದಾಖಲೆಗಳನ್ನು ಕಚೇರಿಗೆ ಸಲ್ಲಿಸಿ ಯೋಜನೆಯ ಸೌಲಭ್ಯವನ್ನು ತಡೆರಹಿತವಾಗಿ ಪಡೆಯಬಹುದಾಗಿದೆ.
ದಾಖಲಾತಿಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಅಕ್ಟೋಬರ್ 31ನೇ ತಾರೀಖು ಅಂತಿಮ ಅವಕಾಶವಾಗಿದ್ದು, ಯಾವುದೇ ಕಾರಣಕ್ಕೂ ಮತ್ತೊಮ್ಮೆ ಕಾಲಾವಕಾಶವನ್ನು ಅಥವಾ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಬೆಸ್ಕಾಂ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದ್ದರಿಂದ, ಇದುವರೆಗೂ ಸಮೀಕ್ಷೆಯಲ್ಲಿ ಭಾಗಿಯಾಗದ ಗ್ರಾಹಕರು ತಕ್ಷಣವೇ ಬೆಸ್ಕಾಂ ಕಚೇರಿಗೆ ತೆರಳಿ ತಮ್ಮ ದಾಖಲೆಗಳನ್ನು ಸಲ್ಲಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕಾಗಿ ವಿನಂತಿ.
ರಾಜ್ಯದ ಗೃಹಜ್ಯೋತಿ ಫಲಾನುಭವಿಗಳ ಗಮನಕ್ಕೆ : ಅ.31ರೊಳಗಾಗಿ ಈ ಕೆಲಸ ಮಾಡದಿದ್ರೆ ಉಚಿತ ಕರೆಂಟ್ ಕಟ್!
WhatsApp Group
Join Now