ಬೆಂಗಳೂರಿನಲ್ಲಿ ಹೊಸ ಬೈಕ್ ಖರೀದಿಸಿ ಸಂತೋಷದಿಂದ ತಮ್ಮ ಊರಿಗೆ ಮರಳುತ್ತಿದ್ದ ಇಬ್ಬರು ಸ್ನೇಹಿತರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಸಂಗಾರೆಡ್ಡಿ ಬಳಿ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ನಡೆದಿದೆ.
ಬೀದರ್ ತಾಲೂಕಿನ ಯರನಳ್ಳಿ ಗ್ರಾಮದ ಸಾಯಿಕಿರಣ ಜೀತಪ್ಪ ಜೋಶಿ (25) ಹಾಗೂ ನಾಗೇಶ್ ಮಾಣಿಪ್ಪ ಅಣ್ಣಾ (24) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.
ಹೊಸ ಬೈಕ್ ಖರೀದಿಸಿ ಊರಿಗೆ ಮರಳುತ್ತಿದ್ದಾಗ ದುರಂತ
ಸಾಯಿಕಿರಣ ಹಾಗೂ ನಾಗೇಶ್ ಇಬ್ಬರೂ ಸ್ನೇಹಿತರಾಗಿದ್ದು, ಬೈಕ್ ಖರೀದಿಸುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದ್ದರು. ಬೈಕ್ ಖರೀದಿಸಿದ ಬಳಿಕ ಅದೇ ಬೈಕ್ನಲ್ಲಿ ಬೀದರ್ಗೆ ವಾಪಸಾಗುತ್ತಿದ್ದರು.
ಈ ವೇಳೆ ತೆಲಂಗಾಣದ ಸಂಗಾರೆಡ್ಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದಾಖಲೆ ಪರಿಶೀಲನೆ ವೇಳೆ ಯುವಕರ ಗುರುತು ಪತ್ತೆ
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ತೆಲಂಗಾಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವಕರ ಬಳಿ ಲಭ್ಯವಾದ ದಾಖಲೆಗಳನ್ನು ಪರಿಶೀಲಿಸಿದಾಗ ಇಬ್ಬರೂ ಬೀದರ್ ಜಿಲ್ಲೆಯ ಯರನಳ್ಳಿ ಗ್ರಾಮದವರು ಎಂಬುದು ಪತ್ತೆಯಾಗಿದೆ.
ಸಂಗಾರೆಡ್ಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
ಅಪಘಾತ ಸಂಬಂಧ ಸಂಗಾರೆಡ್ಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಸಂದರ್ಭಗಳು ಹಾಗೂ ಲಾರಿ ಚಾಲಕನ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹೊಸ ಬೈಕ್ ಖರೀದಿಸಿ ಊರಿಗೆ ಮರಳುತ್ತಿದ್ದ ಇಬ್ಬರು ಯುವಕರ ಜೀವನ ರಸ್ತೆ ಅಪಘಾತದಲ್ಲಿ ಅಂತ್ಯಗೊಂಡಿರುವುದು ದುರಂತವಾಗಿದೆ.
ಹೊಸ ಬೈಕ್ʼನಲ್ಲಿ ಮನೆ ಸೇರುವ ಕನಸು ನುಚ್ಚುನೂರು : ಲಾರಿ ಡಿಕ್ಕಿಯಾಗಿ ಇಬ್ಬರು ಸ್ನೇಹಿತರು ಸ್ಥಳದಲ್ಲೇ ಸಾ*ವು.!
WhatsApp Group
Join Now