E-KYC ಮಾಡದಿದ್ರೆ ರೇಷನ್ ಬಂದ್! ಸೆ.30 ಕೊನೆ ದಿನ- ಮನೆಯಿಂದ್ಲೇ ಮಾಡೋದು ಹೇಗೆ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Spread the love

ಇದೇ ಸೆಪ್ಟೆಂಬರ್ 30ರ ಒಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಬಯೋಮೆಟ್ರಿಕ್ ಅಪ್ಡೇಟ್ ಮಾಡದೇ ಹೋದರೆ ರೇಷನ್ ಸಿಗೋದಿಲ್ಲ. ಕಡಿಮೆ ದರದಲ್ಲಿ ಪಡಿತರ ಪಡೆಯುತ್ತಿರುವವರು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು.

ಇಲ್ಲದೇ ಹೋದರೆ, ನೀವು ದುಬಾರಿ ಬೆಲೆ ಕೊಟ್ಟು ಉಳಿದವರಂತೆ ಆಹಾರ ಸಾಮಗ್ರಿ ಖರೀದಿ ಮಾಡಬೇಕಾಗುತ್ತದೆ! ಇದಕ್ಕಾಗಿ ಸೆ.30ರ ಡೆಡ್ಲೈನ್ ವಿಧಿಸಲಾಗಿದ್ದು, ಅಲ್ಲಿಯವರೆಗೆ ನೀವು ಆನ್ಲೈನ್, ಆಫ್ಲೈನ್ ಎರಡರದಲ್ಲಿಯೂ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ, ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ಹೆಬ್ಬೆರಳ ಗುರುತು ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.

ನಿಗದಿಪಡಿಸಿದ ಸೆಪ್ಟೆಂಬರ್ 30ರ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಅಂತಹ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸುವ ಅಥವಾ ರದ್ದುಪಡಿಸುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಮುಂದಿನ ತಿಂಗಳುಗಳಿಂದ ಉಚಿತ ಅಕ್ಕಿ ಹಾಗೂ ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಇತರೆ ಸೌಲಭ್ಯಗಳ ಹಣ ಸ್ಥಗಿತಗೊಳ್ಳಬಹುದು.

ಹಾಗಿದ್ದರೆ ಇ-ಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ, ಆನ್ಲೈನ್ನಲ್ಲಿ ಮಾಡುವುದು ಹೇಗೆ? ಆಫ್ಲೈನ್ನಲ್ಲಿ ಮಾಡುವುದು ಹೇಗೆ, ಫುಲ್ ಡಿಟೇಲ್ಸ್ ಇಲ್ಲಿದೆ:

ನಿಮ್ಮ ಇ-ಕೆವೈಸಿ ಆಗಿದ್ಯೋ ನೋಡೋದು ಹೇಗೆ?

– ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.kar.nic.in ಮೇಲೆ ಕ್ಲಿಕ್ ಮಾಡಿ

– ಮುಖಪುಟದಲ್ಲಿ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, ‘ಇ-ಸೇವೆಗಳು’ ಆಯ್ಕೆಯನ್ನು ಆರಿಸಿ.

– ನಂತರ ‘ಇ-ರೇಷನ್ ಕಾರ್ಡ್‌’ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕಾಣುವ ‘ಪಡಿತರ ಚೀಟಿ ವಿವರ’ (Show RCs) ಎಂಬುದನ್ನು ಒತ್ತಿ.

– ನಿಮ್ಮ ಜಿಲ್ಲೆಗೆ ಅನುಗುಣವಾಗಿ ‘ಬೆಂಗಳೂರು ವಲಯ’ ಅಥವಾ ‘ಇತರೆ ಜಿಲ್ಲೆಗಳ ವಲಯ’ದ ಲಿಂಕ್ ಅನ್ನು ಕ್ಲಿಕ್ ಮಾಡಿ.

– ಅಲ್ಲಿ ‘RC Status’ ಆಯ್ಕೆಮಾಡಿ, ನಿಮ್ಮ 12 ಅಂಕಿಯ ರೇಷನ್ ಕಾರ್ಡ್ ನಂಬರ್ ಅನ್ನು ಬಾಕ್ಸ್‌ನಲ್ಲಿ ಟೈಪ್ ಮಾಡಿ ‘Go’ ನೀಡಿ.

– ಈಗ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳ ಪಟ್ಟಿ ಕಾಣಿಸುತ್ತದೆ.

– Success’ ಎಂದು ಹಸಿರು ಬಣ್ಣದಲ್ಲಿದ್ದರೆ ನಿಮ್ಮ ಇ-ಕೆವೈಸಿ ಆಗಿದೆ ಎಂದರ್ಥ. ‘Pending’ ಅಥವಾ ಖಾಲಿ ಇದ್ದರೆ: ಇ-ಕೆವೈಸಿ ಆಗಿಲ್ಲ ಎಂದರ್ಥ.

ಇ-ಕೆವೈಸಿ ಮಾಡಿಸುವುದು ಹೇಗೆ?

ಇ-ಕೆವೈಸಿ ಮಾಡಿಸಲು ನಿಮಗೆ ಬೇಕಿರುವ ಮುಖ್ಯ ದಾಖಲೆಗಳು ಎಂದರೆ

-ರೇಷನ್ ಕಾರ್ಡ್‌ ಸಂಖ್ಯೆ

– ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್

ಆನ್ಲೈನ್ನಲ್ಲಿ ಇ-ಕೆವೈಸಿ ಮಾಡಿಸುವುದು ಹೇಗೆ?

* ಆನ್‌ಲೈನ್ ಮೂಲಕ ಮನೆಯಿಂದಲೇ ಸುಲಭವಾಗಿ ಮೊಬೈಲ್ ಆಯಪ್ ಮೂಲಕ ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಸಾರ್ವಜನಿಕರು ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು.

* ಗೂಗಲ್ ಪ್ಲೇ ಸ್ಟೋರ್‌ನಿಂದ ‘Mera Ration’ ಹಾಗೂ ‘Aadhaar FaceRD’ ಆಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

* ಆಯಪ್‌ನಲ್ಲಿ ‘Aadhaar Seeding’ ಅಥವಾ ಇ-ಕೆವೈಸಿ ಆಯ್ಕೆ ಮಾಡಿಕೊಂಡು ರೇಷನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ನಮೂದಿಸಬೇಕು.

* OTP ಅಥವಾ ಮುಖದ ಗುರುತು ಮೂಲಕ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.

ಆಫ್ಲೈನ್ ಮೂಲಕ ಮಾಡಿಸೋದು ಹೇಗೆ?

-ನಿಮ್ಮ ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಸದಸ್ಯರು ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಸಂಖ್ಯೆಯೊಂದಿಗೆ ನಿಯಮಿತವಾಗಿ ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬೇಕು.

– ನ್ಯಾಯಬೆಲೆ ಅಂಗಡಿಯಲ್ಲಿರುವ ಇ-ಪೋಸ್ ಯಂತ್ರದಲ್ಲಿ ನಿಮ್ಮ ಹೆಬ್ಬೆರಳ ಗುರುತು (ಫಿಂಗರ್ ಪ್ರಿಂಟ್) ನೀಡುವ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಉಚಿತವಾಗಿ ಪೂರ್ಣಗೊಳಿಸಬಹುದು.

– ಒಂದು ವೇಳೆ ನ್ಯಾಯಬೆಲೆ ಅಂಗಡಿಯಲ್ಲಿ ತಾಂತ್ರಿಕ ತೊಂದರೆ ಇದ್ದಲ್ಲಿ, ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೂ ಭೇಟಿ ನೀಡಿ ಇದನ್ನು ಮಾಡಿಸಬಹುದು.

WhatsApp Group Join Now

Spread the love

Leave a Reply