ರಾಜ್ಯದಲ್ಲಿ ಪಡಿತರ ಚೀಟಿಯ ಇ-ಕೆವೈಸಿ (E-KYC) ಪ್ರಕ್ರಿಯೆ ನಡೆಯುತ್ತಿದ್ದು,ಸರ್ಕಾರದ ಆದೇಶದಂತೆ ಪಡಿತರ ಚೀಟಿಯಲ್ಲಿರುವ (Ration Card) ಪ್ರತಿಯೊಬ್ಬ ಸದಸ್ಯರ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ಇದನ್ನು ಪೂರ್ಣಗೊಳಿಸದಿದ್ದರೆ ರೇಷನ್ ಕಾರ್ಡ್ದಾರರು ಸೌಲಭ್ಯವನ್ನ ಕಳೆದುಕೊಳ್ತಾರೆ.
ಇ-ಕೆವೈಸಿ ಮಾಡಿಸೋಕು ಡೆಡ್ಲೈನ್ ಇದೆ.
ರೇಷನ್ ಕಾರ್ಡ್ದಾರರಿಗೆ ಇ-ಕೆವೈಸಿ ಡೆಡ್ಲೈನ್
ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ ನಡೆಸುತ್ತಿರುವ ಸರ್ಕಾರ, ಇದೀಗ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಹೀಗಾಗಿ ರಾಜ್ಯದಲ್ಲಿ APL-BPL ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಯೂ ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಆಹಾರ ಇಲಾಖೆ ಸೂಚನೆ ನೀಡಿದೆ.
ಪಡಿತರ ಚೀಟಿ ಇ-ಕೆವೈಸಿ ಕಡ್ಡಾಯ
ಕರ್ನಾಟಕದಲ್ಲಿ ಎಲ್ಲಾ ಪಡಿತರ ಚೀಟಿದಾರರು ತಮ್ಮ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ಮತ್ತು ಇದಕ್ಕೆ ಸೆಪ್ಟೆಂಬರ್ 30, 2026 ಕೊನೆಯ ದಿನಾಂಕವಾಗಿದೆ. ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡದಿದ್ದರೆ ಪಡಿತರ ಚೀಟಿ ರದ್ದಾಗಬಹುದು ಅಥವಾ ಅನ್ನಭಾಗ್ಯ ಯೋಜನೆ ಹಣ ಮತ್ತು ಉಚಿತ ಪಡಿತರ ಸ್ಥಗಿತಗೊಳ್ಳಬಹುದು
ಇ-ಕೆವೈಸಿ ಮಾಡಿಸದಿದ್ದರೆ ಸಿಗಲ್ಲ ರೇಷನ್
ನಿಗದಿತ ಸಮಯ ಅಂದರೆ ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ತಾತ್ಕಾಲಿಕವಾಗಿ ತಡೆಹಿಡಿಯುವ ಸಾಧ್ಯತೆಯಿದೆ. ಮುಂದಿನ ತಿಂಗಳಿಂದ ಸಿಗುವ ಉಚಿತ ಅಕ್ಕಿ ಸ್ಥಗಿತಗೊಳ್ಳಬಹುದು. ಪಡಿತರ ಚೀಟಿಯ ಆಧಾರದ ಮೇಲೆ ದೊರೆಯುವ ‘ಗೃಹಲಕ್ಷ್ಮಿ’ ಯೋಜನೆ ಹಾಗೂ ಮಾಸಿಕ ಧನಸಹಾಯ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳಿಗೆ ತೊಂದರೆ ಆಗಬಹುದು.
ಇ-ಕೆವೈಸಿ ಮಾಡಿಸುವುದು ಹೇಗೆ?
ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಇ-ಕೆವೈಸಿ ಮಾಡಿಸಬಹುದು. ಬೆಂಗಳೂರಿನಲ್ಲಿದ್ದರೆ, ಹತ್ತಿರದ ಜಿಬಿಎ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದು ಸಂಪೂರ್ಣ ಉಚಿತ ಸೇವೆಯಾಗಿದೆ.
ಫಿಂಗರ್‌ಪ್ರಿಂಟ್ ಹೊಂದಾಣಿಕೆಯಾಗದಿದ್ದಲ್ಲಿ, ಆಧಾರ್ ಕೇಂದ್ರಕ್ಕೆ ತೆರಳಿ ಆಧಾರ್ ಅಪ್ ಡೇಟ್ ಮಾಡಿದ 15 ದಿನಗಳ ನಂತರ ಮತ್ತೆ ಇ-ಕೆವೈಸಿ ಮಾಡಲು ಅವಕಾಶವಿದೆ.
ಇ-ಕೆವೈಸಿಗೆ ಅಗತ್ಯವಿರುವ ದಾಖಲೆಗಳು
* ರೇಷನ್ ಕಾರ್ಡ್ ನಂಬರ್
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
* ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಜಾತಿ ಪ್ರಮಾಣ ಪತ್ರ
* ಗ್ಯಾಸ್ ಸಂಪರ್ಕದ ಪುಸ್ತಕ
ಇ-ಕೆವೈಸಿ ಪೂರ್ಣಗೊಳಿಸುವ ವಿಧಾನಗಳು:
ಆನ್‌ಲೈನ್ (ಮೊಬೈಲ್ ಆಯಪ್ ಮೂಲಕ) ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಸಾರ್ವಜನಿಕರು ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು
* ಗೂಗಲ್ ಪ್ಲೇ ಸ್ಟೋರ್‌ನಿಂದ ‘Mera Ration’ ಹಾಗೂ ‘Aadhaar FaceRD’ ಆಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಆಯಪ್‌ನಲ್ಲಿ ‘Aadhaar Seeding’ ಅಥವಾ ಇ-ಕೆವೈಸಿ ಆಯ್ಕೆ ಮಾಡಿಕೊಂಡು ರೇಷನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ನಮೂದಿಸಬೇಕು.
* OTP ಅಥವಾ ಮುಖದ ಗುರುತು ಮೂಲಕ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಹೊಸದಾಗಿ ಸೇರ್ಪಡೆಯಾದ ಸದಸ್ಯರಿಗೂ ಇದು ಅನ್ವಯಿಸುತ್ತದೆ.
BPL, APL ಕಾರ್ಡ್ ದಾರರಿಗೆ ಬಿಗ್ ನ್ಯೂಸ್ ; ಪ್ರತಿಯೊಬ್ಬ ಸದಸ್ಯರಿಗೂ ಇದು ಕಡ್ಡಾಯ, ಡೆಡ್ಲೈನ್ ಅನೌನ್ಸ್.!
WhatsApp Group
Join Now