ಪ್ಲಾಸ್ಟಿಕ್, ಸ್ಟೀಲ್, ಮಣ್ಣು, ತಾಮ್ರ – ಆರೋಗ್ಯಕ್ಕೆ ಯಾವ ಬಾಟಲಿ ನೀರು ಶ್ರೇಷ್ಠ?

Spread the love

ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ತ್ಯಜಿಸಿ, ಸ್ಟೀಲ್ ಅಥವಾ ಮಣ್ಣಿನ ಬಾಟಲಿಗಳನ್ನು ಬಳಸುವುದು ಅತ್ಯುತ್ತಮ ಎಂದು ತಜ್ಞರು ತಿಳಿಸಿದ್ದಾರೆ. ತಾಮ್ರದ ಬಾಟಲಿಯು ರೋಗನಿರೋಧಕ ಶಕ್ತಿ ಹೆಚ್ಚಿಸಿದರೂ, ಅದರ ಅತಿಯಾದ ಬಳಕೆ ಮತ್ತು ಆಮ್ಲೀಯ ಪದಾರ್ಥಗಳ ಸಂಗ್ರಹ ಅಪಾಯಕಾರಿಯಾಗಬಹುದು.

ದಿನವಿಡೀ ನಮ್ಮನ್ನು ಹೈಡ್ರೇಟೆಡ್ ಆಗಿ ಇರಿಸಲು ನೀರಿನ ಬಾಟಲಿ ಅತ್ಯಗತ್ಯ. ಆದರೆ ನಾವು ಯಾವ ಬಾಟಲಿಯಿಂದ ನೀರು ಕುಡಿಯುತ್ತೇವೆ ಎಂಬುದು ಕೂಡ ಮುಖ್ಯ. ಬಾಟಲಿಗಳು ನಮ್ಮ ಆರೋಗ್ಯದ ಮೇಲೆ ಹೇಗೆ ನೇರ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್, ಗಾಜು, ತಾಮ್ರ, ಸ್ಟೀಲ್ ಮತ್ತು ಮಣ್ಣಿನ ಬಾಟಲಿಗಳು ಲಭ್ಯವಿವೆ. ಇವುಗಳಲ್ಲಿ ಯಾವುದು ಉತ್ತಮ?

ಗಾಜಿನ ಬಾಟಲಿಗಳು (Glass Bottles)

ಗಾಜು ಯಾವುದೇ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ (Non-toxic). ಇದರಲ್ಲಿ ಬಿಸಿನೀರು ಹಾಕಿದರೂ ಯಾವುದೇ ವಿಷಕಾರಿ ಅಂಶಗಳು ಬಿಡುಗಡೆಯಾಗುವುದಿಲ್ಲ. ಇದು 100% ಮರುಬಳಕೆ ಮಾಡಬಹುದು ಮತ್ತು ನೀರಿನ ರುಚಿ ಬದಲಾಗುವುದಿಲ್ಲ. ಇವು ತೂಕ ಜಾಸ್ತಿ ಮತ್ತು ಕೆಳಗೆ ಬಿದ್ದರೆ ಒಡೆದು ಹೋಗುವ ಅಪಾಯವಿರುತ್ತದೆ. ಕಚೇರಿ ಅಥವಾ ಮನೆಯ ಬಳಕೆಗೆ ಇದು ಸೂಕ್ತ.

ತಾಮ್ರದ ಬಾಟಲಿಗಳು (Copper Bottles)

ಆಯುರ್ವೇದದಲ್ಲಿ ತಾಮ್ರದ ಪಾತ್ರೆಗೆ ವಿಶೇಷ ಸ್ಥಾನವಿದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದರಿಂದ ನೀರಿನ pH ಮಟ್ಟ ಹೆಚ್ಚಾಗಿ ಅದು ಅಲ್ಕಲೈನ್ ಆಗಿ ಬದಲಾಗುತ್ತದೆ. ಇದು ಜೀರ್ಣಕ್ರಿಯೆ ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ತಾಮ್ರದ ಬಾಟಲಿಯನ್ನು ಅತಿಯಾಗಿ ಬಳಸಬಾರದು. ಇದರಲ್ಲಿ ಹಾಲು ಅಥವಾ ನಿಂಬೆ ರಸದಂತಹ ಆಮ್ಲೀಯ ಪದಾರ್ಥಗಳನ್ನು ಹಾಕಬೇಡಿ. ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ವಾಂತಿ ಅಥವಾ ಲಿವರ್ ಸಮಸ್ಯೆ ಉಂಟಾಗಬಹುದು.

ಪ್ಲಾಸ್ಟಿಕ್ ಬಾಟಲಿಗಳು (Plastic Bottles)

ಇವು ಹಗುರ ಮತ್ತು ಅಗ್ಗವಾಗಿರುವುದರಿಂದ ಹೆಚ್ಚಿನವರು ಇದನ್ನೇ ಬಳಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಪ್ಲಾಸ್ಟಿಕ್‌ನಲ್ಲಿರುವ BPA ಮತ್ತು ಥಾಲೇಟ್ಸ್‌ ಎಂಬ ರಾಸಾಯನಿಕಗಳು ಬಿಸಿಲಿಗೆ ಒಡ್ಡಿಕೊಂಡಾಗ ನೀರಿನಲ್ಲಿ ಸೇರಿಕೊಳ್ಳುತ್ತವೆ. ಇವು ಕ್ಯಾನ್ಸರ್ ಮತ್ತು ಮೆದುಳಿನ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗಬಹುದು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ತಪ್ಪಿಸಿ. ಅನಿವಾರ್ಯವಾದರೆ ‘BPA-Free’ ಬಾಟಲಿಗಳನ್ನು ಮಾತ್ರ ಬಳಸಿ.

ಸ್ಟೇನ್‌ಲೆಸ್ ಸ್ಟೀಲ್ ಬಾಟಲಿಗಳು (Stainless Steel Bottles)

ದಿನನಿತ್ಯದ ಬಳಕೆಗೆ ಸ್ಟೀಲ್ ಬಾಟಲಿಗಳು ಅತ್ಯುತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ. ಇವು ಬಾಳಿಕೆ ಬರುತ್ತವೆ, ಹಗುರವಾಗಿರುತ್ತವೆ ಮತ್ತು ಯಾವುದೇ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದಿಲ್ಲ. ಬಿಸಿ ಅಥವಾ ತಣ್ಣನೆಯ ನೀರನ್ನು ಇಡಲು ಇದು ಸುರಕ್ಷಿತ. ಇವುಗಳನ್ನು ದೀರ್ಘಕಾಲ ಬಳಸಬಹುದು ಮತ್ತು ಪರಿಸರಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.

ಮಣ್ಣಿನ ಬಾಟಲಿಗಳು (Clay/Earthen Bottles)

ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವುದು ನಮ್ಮ ಹಳೆಯ ಸಂಪ್ರದಾಯ. ಮಣ್ಣು ನೈಸರ್ಗಿಕ ಅಲ್ಕಲೈನ್ ಗುಣವನ್ನು ಹೊಂದಿದೆ, ಇದು ನೀರಿನ pH ಮಟ್ಟವನ್ನು ಸಮತೋಲನಗೊಳಿಸುತ್ತದೆ. ನೀರನ್ನು ನೈಸರ್ಗಿಕವಾಗಿ ತಂಪಾಗಿಸುತ್ತದೆ ಮತ್ತು ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ. ಗಾಜಿನಂತೆ ಇವು ಕೂಡ ಬೇಗ ಒಡೆಯುವ ಸಾಧ್ಯತೆ ಇರುತ್ತದೆ ಮತ್ತು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

ತಜ್ಞರ ಶಿಫಾರಸು ಏನು.?

ಸ್ಟೇನ್‌ಲೆಸ್ ಸ್ಟೀಲ್ ಬಾಟಲಿ ಬಳಸಿ
ಮಣ್ಣಿನ ಮಡಕೆ ಅಥವಾ ಗಾಜಿನ ಬಾಟಲಿ ಬಳಸಿ
ದಿನದಲ್ಲಿ ಸ್ವಲ್ಪ ಸಮಯ ಮಾತ್ರ ತಾಮ್ರದ ಬಾಟಲಿ ನೀರು ಕುಡಿಯಿರಿ. ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಅಥವಾ ಕಡಿಮೆ ಮಾಡಿ

WhatsApp Group Join Now

Spread the love

Leave a Reply