ಜೈಪುರ: ಸರಕಾರಿ ಶಾಲೆಗಳ ಸ್ಥಿತಿ ಮತ್ತು ಮೂಲಸೌಕರ್ಯ ಪರಿಶೀಲನೆಗೆ ಮುಂದಾಗಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಕಾರ್ಯಕರ್ತರ ಭೇಟಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜೈಪುರದ ರಾಂಪುರ-ಕನ್ವರ್ಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಘರ್ಷಣೆ ನಡೆದಿದೆ.
ಶಾಲೆಯ ಸ್ಥಿತಿ ಮತ್ತು ವ್ಯವಸ್ಥೆಗಳ ಕುರಿತು ಪರಿಶೀಲಿಸಿ ಚರ್ಚಿಸಲು CJP ಕಾರ್ಯಕರ್ತರು ಗ್ರಾಮಕ್ಕೆ ತೆರಳಿದ್ದರು. ಪಕ್ಷದ ಸಹ-ಸಂಚಾಲಕ ಅಶುತೋಷ್ ರಂಕಾ ಕೂಡ ಶಾಲಾ ಆವರಣಕ್ಕೆ ಭೇಟಿ ನೀಡುವ ನಿರೀಕ್ಷೆಯಿತ್ತು. ಆದರೆ, ಭೇಟಿಯನ್ನು ವಿರೋಧಿಸಿದ ಸ್ಥಳೀಯರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿ ಕಾರ್ಯಕರ್ತರನ್ನು ಅಲ್ಲಿಂದ ತೆರಳುವಂತೆ ಒತ್ತಾಯಿಸಿದರು.
ಆದರೆ, ಭೇಟಿಯನ್ನು ವಿರೋಧಿಸಿದವರು ಸ್ಥಳೀಯ ಗ್ರಾಮಸ್ಥರು ಎಂಬುದನ್ನು ರಂಕಾ ತಳ್ಳಿಹಾಕಿದರು. ಸರಕಾರಿ ಶಾಲೆಗಳನ್ನು ಪರಿಶೀಲಿಸುವ CJPಯ ಪ್ರಯತ್ನಗಳಿಗೆ ಅಡ್ಡಿಪಡಿಸಲು ಬಿಜೆಪಿ ‘ಗೂಂಡಾಗಳನ್ನು’ ಕಳುಹಿಸುತ್ತಿದೆ ಎಂದು ಅವರು ಆರೋಪಿಸಿದರು.
‘ಇವರು ಅಲ್ಲಿನ ಗ್ರಾಮಸ್ಥರಲ್ಲ, ಬಿಜೆಪಿಯಿಂದ ಕರೆಸಲ್ಪಟ್ಟ ಗೂಂಡಾಗಳು’ ಎಂದು ರಂಕಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದರು.
ಮತ್ತೊಂದು ಪೋಸ್ಟ್ನಲ್ಲಿ, ದನದ ಕೊಟ್ಟಿಗೆಯಲ್ಲಿ ಮಕ್ಕಳಿಗೆ ‘ಎಮ್ಮೆಗಳ ನಡುವೆ’ ಪಾಠ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ವಿಷಯವನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ರಾಜಕೀಯ ಒತ್ತಡದ ಮೂಲಕ ತಡೆಯಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು CJP ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು CJP ಸಂಸ್ಥಾಪಕ ಅಭಿಜಿತ್ ದೀಪೆ ಆರೋಪಿಸಿದ್ದಾರೆ. ಇಂತಹ ಘಟನೆಗೆ ರಾಜಸ್ಥಾನ ಪೊಲೀಸರು ಹೇಗೆ ಅವಕಾಶ ನೀಡುತ್ತಾರೆ ಎಂದು ಪ್ರಶ್ನಿಸಿದರು.
‘ಶಾಲೆ ಕೆಡವಲು ಬಿಡುವುದಿಲ್ಲ’
ಘಟನೆ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಯೊಬ್ಬರು, ಶಾಲೆಯನ್ನು ಕೆಡವಲು ಉದ್ದೇಶಿಸಲಾಗಿದೆ ಎಂಬ ಕಾರಣಕ್ಕೆ CJPಯ ಭೇಟಿಯನ್ನು ವಿರೋಧಿಸಿದ್ದಾಗಿ ಹೇಳಿದರು.
‘ಅವರು ಈ ಶಾಲೆಯನ್ನು ಕೆಡವಲು ಪ್ರಯತ್ನಿಸುತ್ತಿರುವುದರಿಂದ ನಾವು ಅವರನ್ನು ವಿರೋಧಿಸಿದ್ದೇವೆ. ಸುಮಾರು 20-25 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಅವರು ಎಲ್ಲಿಗೆ ಹೋಗುತ್ತಾರೆ? ಶಾಲೆಯನ್ನು ಕೆಡವಲು ನಾವು ಬಿಡುವುದಿಲ್ಲ. ಅದರ ದುರಸ್ತಿಗೆ ಈಗಾಗಲೇ ಹಣ ಮಂಜೂರಾಗಿದೆ. ಕೇವಲ ಮಾತಿನ ಚಕಮಕಿ ನಡೆಯಿತು’ ಎಂದು ಅವರು ಹೇಳಿದರು.
ರಾಜಸ್ಥಾನದ ಬಿಜೆಪಿ ಸರಕಾರವು ಸರಕಾರಿ ಶಾಲೆಗಳಿಗೆ ಹೊರಗಿನವರು ಭೇಟಿ ನೀಡುವುದನ್ನು ನಿರ್ಬಂಧಿಸಿದ ಕೆಲವೇ ದಿನಗಳ ಬಳಿಕ ಈ ಘರ್ಷಣೆ ನಡೆದಿದೆ.
ಕಳಪೆ ಮೂಲಸೌಕರ್ಯ, ಶಿಕ್ಷಕರ ಕೊರತೆ ಮತ್ತು ಅಸಮರ್ಪಕ ಸಮರ್ಪಕ ಮೂಲಸೌಲಭ್ಯಗಳನ್ನು ಎದುರಿಸುತ್ತಿರುವ ಸರಕಾರಿ ಶಾಲೆಗಳನ್ನು ಪರಿಶೀಲಿಸುವ ಯೋಜನೆಯನ್ನು CJP ಘೋಷಿಸಿದ ಬಳಿಕ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು.
ಸಿಜೆಪಿಯ ಶಾಲಾ ತಪಾಸಣೆ ಅಭಿಯಾನದ ವೇಳೆ ಘರ್ಷಣೆ – ಶಾಲೆಗಳನ್ನು ಪರಿಶೀಲನೆ ಮಾಡದಂತೆ ಅಡ್ಡಿಪಡಿಲು ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ : ಸಿಜೆಪಿ
WhatsApp Group
Join Now