ರಾಜ್ಯದ ಸಣ್ಣ ರೈತರಿಗೆ ಗುಡ್ ನ್ಯೂಸ್: ‘ರೈತ ಮಿತ್ರ’ ಯೋಜನೆಯಡಿ ಕೃಷಿ ಯಂತ್ರೋಪಕರಣ ಬಾಡಿಗೆಗೆ ಶೇ. 50 ಸಬ್ಸಿಡಿ.!

Spread the love

ಸಣ್ಣ ಮತ್ತು ಅತಿಸಣ್ಣ ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡಿ, ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಸುಲಭವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ‘ರೈತ ಮಿತ್ರ’ ಯೋಜನೆಯನ್ನು ಜಾರಿಗೊಳಿಸಿದೆ.

WhatsApp Group Join Now

ಈ ಯೋಜನೆಯಡಿ ರೈತರು ಟ್ರ್ಯಾಕ್ಟರ್, ರೋಟವೇಟರ್, ಟಿಲ್ಲರ್ ಹಾಗೂ ಸೀಡ್ ಡ್ರಿಲ್ ಸೇರಿದಂತೆ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯಬಹುದಾಗಿದೆ.

ಇದರಿಂದ ದುಬಾರಿ ಯಂತ್ರೋಪಕರಣಗಳನ್ನು ಸ್ವಂತವಾಗಿ ಖರೀದಿಸುವ ಹೊರೆ ರೈತರ ಮೇಲೆ ಬೀಳದಂತೆ ನೆರವಾಗಲಿದೆ.

WhatsApp Group Join Now

ಸಣ್ಣ ರೈತರಿಗೆ ಶೇ.50ರಷ್ಟು ಸಬ್ಸಿಡಿ

3 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ಶುಲ್ಕದ ಮೇಲೆ ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡಲು ನಿರ್ಧರಿಸಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತಗಲುವ ವೆಚ್ಚ ಕಡಿಮೆಯಾಗುವುದರ ಜೊತೆಗೆ, ಸಮಯಕ್ಕೆ ಸರಿಯಾಗಿ ಯಾಂತ್ರೀಕೃತ ಕೃಷಿ ಕೈಗೊಳ್ಳಲು ರೈತರಿಗೆ ಅನುಕೂಲವಾಗಲಿದೆ.

WhatsApp Group Join Now

ಆಧುನಿಕ ಕೃಷಿ ತಂತ್ರಜ್ಞಾನವನ್ನು ಸಣ್ಣ ರೈತರಿಗೂ ತಲುಪಿಸುವ ಮೂಲಕ ಉತ್ಪಾದಕತೆ ಹೆಚ್ಚಿಸುವುದು ಹಾಗೂ ಕೃಷಿಯನ್ನು ಹೆಚ್ಚು ಸುಲಭ ಮತ್ತು ಕಡಿಮೆ ವೆಚ್ಚದಾಯಕವಾಗಿಸುವುದು ‘ರೈತ ಮಿತ್ರ’ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ರೈತ ಮಿತ್ರ’ ಯೋಜನೆ ಸಣ್ಣ ರೈತರ ಕೃಷಿಗೆ ಹೊಸ ಬಲ ನೀಡುವ ಜೊತೆಗೆ, ಯಾಂತ್ರೀಕರಣದ ಮೂಲಕ ಕೃಷಿ ವೆಚ್ಚ ಕಡಿಮೆ ಮಾಡಲು ಸಹಕಾರಿಯಾಗಲಿದೆ.

https://x.com/KarnatakaVarthe/status/2089945495250882687?ref_src=twsrc%5Etfw%7Ctwcamp%5Etweetembed%7Ctwterm%5E2089945495250882687%7Ctwgr%5Ecda5f23e142671e3b844895868fbb4251302fa4c%7Ctwcon%5Es1_c10&ref_url=https%3A%2F%2Fapi-news.dailyhunt.in%2F

Spread the love

Leave a Reply