ಮೆದುಳಿನ ಯಾವುದಾದರೂ ನರವು ಬ್ಲಾಕ್ ಆದಾಗ (ರಕ್ತ ಹೆಪ್ಪುಗಟ್ಟಿದಾಗ) ಬ್ರೈನ್ ಸ್ಟ್ರೋಕ್ ಸಂಭವಿಸುತ್ತದೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಪ್ರಾಣಕ್ಕೆ ಕುತ್ತು ಬರಬಹುದು. ಆದರೆ ದೊಡ್ಡ ಮಟ್ಟದ ಸ್ಟ್ರೋಕ್ ಬರುವ ಮುನ್ನವೇ ದೇಹವು ಕೆಲವು ಸಣ್ಣ ಮುನ್ಸೂಚನೆಗಳನ್ನು ನೀಡುತ್ತದೆ ಎಂಬುದು ನಿಮಗೆ ಗೊತ್ತೇ.?
ಇದನ್ನು ‘ಮಿನಿ ಬ್ರೈನ್ ಸ್ಟ್ರೋಕ್’ ಅಥವಾ ವೈದ್ಯಕೀಯ ಭಾಷೆಯಲ್ಲಿ ‘ಟ್ರಾನ್ಸಿಯೆಂಟ್ ಇಸ್ಕೆಮಿಕ್ ಅಟ್ಯಾಕ್’ (TIA) ಎಂದು ಕರೆಯಲಾಗುತ್ತದೆ. ಇದರ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ ದೊಡ್ಡ ಅನಾಹುತದಿಂದ ಪಾರಾಗಬಹುದು.
ಮಿನಿ ಬ್ರೈನ್ ಸ್ಟ್ರೋಕ್ ಎಂದರೇನು? ಇದು ಯಾವಾಗ ಸಂಭವಿಸುತ್ತದೆ?
ಸಾಮಾನ್ಯ ಬ್ರೈನ್ ಸ್ಟ್ರೋಕ್ನಂತೆಯೇ, ಮೆದುಳಿನ ನರಗಳಲ್ಲಿ ರಕ್ತದ ಹರಿವು ತಾತ್ಕಾಲಿಕವಾಗಿ ಸ್ಥಗಿತಗೊಂಡಾಗ ಈ ಸಣ್ಣ ಬ್ರೈನ್ ಅಟ್ಯಾಕ್ ಸಂಭವಿಸುತ್ತದೆ. ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸಂಸ್ಥೆ (NHS) ಪ್ರಕಾರ, ಇದರ ಪರಿಣಾಮವಾಗಿ ಮೆದುಳಿಗೆ ಆಮ್ಲಜನಕದ ಪೂರೈಕೆ ನಿಲ್ಲುತ್ತದೆ. ಆದರೆ, ಈ ಹಾನಿ ಶಾಶ್ವತವಾಗಿರುವುದಿಲ್ಲ ಮತ್ತು ಇದರ ಲಕ್ಷಣಗಳು ಸಾಮಾನ್ಯವಾಗಿ 24 ಗಂಟೆಗಳ ಒಳಗೆ ತಾವಾಗಿಯೇ ಗುಣವಾಗುತ್ತವೆ. ಆದರೂ, ಇದನ್ನು ನಿರ್ಲಕ್ಷಿಸದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ.
ಮಿನಿ ಬ್ರೈನ್ ಸ್ಟ್ರೋಕ್ನ ಪ್ರಮುಖ ಲಕ್ಷಣಗಳು
ದೇಹದಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಜಾಗರೂಕರಾಗಿರಿ:
ದೇಹದ ಒಂದು ಬದಿಯ ಮುಖ, ಕೈ ಅಥವಾ ಕಾಲಿನಲ್ಲಿ ಜುಮುಗುಡುವಿಕೆ ಅಥವಾ ದೌರ್ಬಲ್ಯ ಕಾಣಿಸಿಕೊಳ್ಳುವುದು.
ಇದ್ದಕ್ಕಿದ್ದಂತೆ ಗೊಂದಲಕ್ಕೊಳಗಾಗುವುದು (ಭ್ರಮೆ).
ಮಾತನಾಡಲು ಇದ್ದಕ್ಕಿದ್ದಂತೆ ತೊಂದರೆಯಾಗುವುದು ಅಥವಾ ಮಾತು ತೊದಲ ಪಡುವುದು.
ಇದ್ದಕ್ಕಿದ್ದಂತೆ ಕಣ್ಣಿನ ದೃಷ್ಟಿ ಮಂಜಾಗುವುದು ಅಥವಾ ಸರಿಯಾಗಿ ಕಾಣಿಸದಿರುವುದು.
ಹಠಾತ್ ಆಗಿ ದೇಹದ ಸಮತೋಲನ ತಪ್ಪುವುದು ಮತ್ತು ನಡೆಯಲು ಕಷ್ಟವಾಗುವುದು.
ತೀವ್ರವಾಗಿ ತಲೆತಿರುಗುವುದು.
ಗಮನಿಸಿ: ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರವು ಕೊಬ್ಬಿನ ರೂಪ ಪಡೆದು, ದೇಹದ ಬೊಜ್ಜು ಕರಗದಿದ್ದರೆ ಅದು ಕೂಡ ಮುಂದೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
‘ಬ್ರೈನ್ ಸ್ಟ್ರೋಕ್’ ಬರುವ 24 ಗಂಟೆ ಮುನ್ನವೇ ದೇಹ ನೀಡುತ್ತೆ ಈ 6 ಎಚ್ಚರಿಕೆ ಸಂಕೇತಗಳು.!
WhatsApp Group
Join Now