ಮೇಷ :
ಈ ದಿನ ಗ್ರಹಗತಿಗಳು ನಿಮಗಾಗಿ ಅದೃಷ್ಟದ ದಿನವನ್ನೇ ತಂದಿವೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಸಾಮಾಜಿಕ ಆಸಕ್ತಿ ಮತ್ತು ಪರಚಿಂತನೆಯು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರಿಂದ ಮತ್ತು ಸ್ನೇಹಿತರಿಂದ ಸಾಕಷ್ಟು ಪ್ರಶಂಸೆಗಳನ್ನು ಪಡೆಯುತ್ತೀರಿ.
ನೀವು ಯಾವಾಗಲೂ ಸ್ನೇಹಿತರಿಗಾಗಿ, ಪ್ರೀತಿಪಾತ್ರರಿಗಾಗಿ ಮತ್ತು ಸಹೋದ್ಯೋಗಿಗಳಿಗಾಗಿ ಶರತ್ತುರಹಿತವಾಗಿ ವೆಚ್ಚಮಾಡುತ್ತೀರಿ ಮತ್ತು ನೀಡುತ್ತೀರಿ. ಹಿರಿಯರು ಮತ್ತು ಹೆತ್ತವರೊಂದಿಗಿನ ಮಾತುಕತೆಯು ನಿಜವಾಗಿಯೂ ಅದ್ಭುತವಾಗಿರುತ್ತದೆ ಮತ್ತು ಇದು ನಿಮ್ಮನ್ನು ಇನ್ನಷ್ಟು ಮನಸ್ಸಿಗೆ ಹತ್ತಿರವಾಗಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪ್ರಣಯಭರಿತ ಪ್ರದೇಶಗಳಿಗೆ ತೆರಳುವ ನಿಮ್ಮ ಯೋಜನೆಯು ಫಲಕಾರಿಯಾಗಲಿದೆ. ಅನಿರೀಕ್ಷಿತ ಫಲಪ್ರಾಪ್ತಿಯಾಗಲಿದೆ ಮತ್ತು ಮಕ್ಕಳು ಮತ್ತು ನಿಮಗಿಂತ ಕಿರಿಯವರಿಂದ ಪ್ರಯೋಜನಗಳು ಉಂಟಾಗಲಿವೆ. ಪ್ರಶಂಸೆಗಳನ್ನು ಸಂಪಾದಿಸಿಕೊಳ್ಳಿ.
ವೃಷಭ :
ನಿಮಗಾಗಿ ಅದ್ಭುತ ದಿನವು ಈ ದಿನ ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಹೊಸ ಯೋಜನೆಗಳ ಸದವಕಾಶವಿದೆ ಮತ್ತು ಹಳೆಯ ವಿಚಾರಗಳು ಪುನಶ್ಚೇತನವು ಸಾಧ್ಯವಿದೆ. ಇವೆಲ್ಲವೂ ಫಲಕಾರಿಯಾಗಿ ಸಾಬೀತಾಗಲಿದೆ. ನಿಮ್ಮ ವೃತ್ತಿಕ್ಷೇತ್ರದಲ್ಲಿ ಗ್ರಹಗತಿಗಳು ಸುಗಮವಾಗಿ ಚಟುವಟಿಕೆಯಿಂದಿರುವುದರಿಂದ ಎಲ್ಲಾ ವೃತ್ತಿಪರ ಹಾಗೂ ಉದ್ಯಮಿಗಳಿಗೆ ಉತ್ತಮ ದಿನ. ಮೇಲಾಧಿಕಾರಿಗಳಿಂದ ಪ್ರಶಂಸೆ, ಸಹೋದ್ಯೋಗಿಗಳಿಂದ ಬೆಂಬಲ, ಅನಿರೀಕ್ಷಿತ ಬಡ್ತಿ ಇವೆಲ್ಲವೂ ನಿಮ್ಮನ್ನು ಮತ್ತು ಇತರರನ್ನು ಸಂತೋಷದಲ್ಲಿರಿಸಲಿದೆ. ನೀವು ಏನೇ ಮಾಡಿದರೂ ಅದಕ್ಕೆ ನಿಮ್ಮ ಸಂಗಾತಿಯು ಬೆಂಬಲಿಸುತ್ತಾರೆ ಮತ್ತು ಮನೆಯಲ್ಲಿ ನಿಮ್ಮ ಸ್ಥಾನವು ವೃದ್ಧಿಗೊಳ್ಳುತ್ತದೆ. ನಿಮ್ಮತ್ತ ಬರುತ್ತಿರುವ ಉಡುಗೊರೆಗಳನ್ ನು ಸ್ವೀಕರಿಸಿ.
ಮಿಥುನ :
ಈ ದಿನದ ವಿವರಗಳನ್ನು ನಿಮ್ಮ ವೈಯಕ್ತಿಕ ಪುಸ್ತಕದಲ್ಲಿ ದಾಖಲಿಸಲು ಬಯಸಲಾರಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ವಾಸ್ತವವಾಗಿ ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಚಾರಗಳು ಅಸ್ತವ್ಯಸ್ತಗೊಳ್ಳಲಿವೆ. ಇಂದು ಆರೋಗ್ಯ, ಸಂಪತ್ತು, ಕುಟುಂಬ ಯಾವುದೂ ಆಗಿರಬಹುದು. ಆದ್ದರಿಂದ ನಿಮ್ಮ ಮನಸ್ಸಿಗೆ ಮುದ ಹಾಗೂ ಸಂತಸವನ್ನು ನೀಡುವಂತಹ ಏನಾದರೂ ಕಾರ್ಯವನ್ನು ಮಾಡಿ. ನಿಮ್ಮ ಕಚೇರಿಯಲ್ಲೂ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡದೇ ಇರುವ ಕಾರಣ ನೀವು ಅಸಮಾಧಾನ ಹಾಗೂ ಆತಂಕಕ್ಕೆ ಒಳಗಾಗಬಹುದು. ನಿಮ್ಮ ಪ್ರತಿಸ್ಪರ್ಧಿಗಳು ಮತ್ತು ವಿರೋಧಿಗಳು ನಿಮ್ಮನ್ನು ಸದೆಬಡಿಯಲು ಸಿದ್ಧರಾಗಿರುತ್ತಾರೆ. ಆದ್ದರಿಂದ, ಅವರೊಂದಿಗಿನ ಸಂಪರ್ಕವನ್ನು ತಪ್ಪಿಸುವುದು ಉತ್ತಮ. ನಿಮ್ಮ ಮಕ್ಕಳು ನಿಮ್ಮ ಆತಂಕದ ಮುಖ್ಯ ಕಾರಣವಾಗಿರಬಹುದು. ನೀವು ಮಾಡುವ ಕಾರ್ಯಗಳು ಅಥವಾ ಇಂದು ಪೂರ್ಣಗೊಳಿಸುವ ಕಾರ್ಯಗಳು ನಿಮ್ಮ ಶ್ರಮಕ್ಕೆ ತಕ್ಕಂತೆ ಉತ್ತಮ ಪ್ರತಿಫಲ ನೀಡುವುದಿಲ್ಲ.
ಕರ್ಕಾಟಕ :
ಇಂದು ನಿಮ್ಮ ಹಡಗು ಗೊಂದಲ ಹಾಗೂ ಅಹಿತಕರ ಸಮುದ್ರದಲ್ಲಿ ಮುಳುಗಲಿದೆ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಇದರಿಂದ ನೀವಾಗಿಯೇ ಅಪಾಯಕ್ಕೆ ಕೈಯೊಡ್ಡುವುದನ್ನು ತಪ್ಪಿಸಿ ಇಲ್ಲವಾದಲ್ಲಿ ಏನಾದರೂ ದುರಾದೃಷ್ಟ ಸಂಭವಿಸಬಹುದು. ಸಂಘರ್ಷವನ್ನು ತಪ್ಪಿಸಿ ಮತ್ತು ಶಾಂತಿಯಿಂದಿರಲಿ ಪ್ರಯತ್ನಿಸಿ. ಇಲ್ಲವಾದಲ್ಲಿ, ಮನೆಯಲ್ಲಿ ಸನ್ನಿವೇಶಗಳು ತೀವ್ರರೀತಿಯಲ್ಲಿ ಅಡ್ಡದಾರಿಗೆ ಸಾಗುತ್ತವೆ. ಅನೈತಿಕ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಂದ ನೀವು ದೂರ ಉಳಿಯಬೇಕು ಇಲ್ಲವಾದಲ್ಲಿ ನೀವು ಭವಿಷ್ಯದಲ್ಲಿ ಕಾನೂನು ಮೆಟ್ಟಿಲು ಹತ್ತಬೇಕಾದೀತು. ಆತಂಕವೂ ನಿಮ್ಮನ್ನು ಕಾಡಬಹುದು.
ಸಿಂಹ :
ಇಂದು ಸಿಂಹರಾಶಿಯವರಿಗೆ ಸಾಮಾನ್ಯ ಪ್ರಭಾವವನ್ನು ಹೊಂದಿದ ದಿನವಾಗಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಕೆಲವು ಸಣ್ಣ ಮಟ್ಟದ ಸಂಘರ್ಷವನ್ನು ನಿರೀಕ್ಷಿಸಿ ಆದರೆ, ಈ ಸಣ್ಣ ಸಂಘರ್ಷಗಳು ದೊಡ್ಡ ಕಲಹವಾಗಲು ಬಿಡಬೇಡಿ. ಇಲ್ಲವಾದಲ್ಲಿ ಪರಿಸ್ಥಿತಿಯು ಹದಗೆಡುತ್ತದೆ. ನಿಮ್ಮ ಸಂಗಾತಿಯ ಆರೋಗ್ಯವು ಉತ್ತಮವಾಗಿರುವುದಿಲ್ಲ. ಆದರೆ, ನಿಮ್ಮ ಆರೋಗ್ಯವು ಎಂದಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತದೆ. ನಿಮ್ಮ ಉದ್ಯಮ ಪಾಲುದಾರರ ಬಗ್ಗೆ ನೀವು ಇಂದು ಎಚ್ಚರದಿಂದಿರಬೇಕು. ಅವನ/ಳ ವರ್ತನೆಯು ಸ್ವಲ್ಪ ಪ್ರಮಾಣದ ಕೇಡನ್ನು ಪ್ರದರ್ಶಿಸಬಹುದು. ಜೊತೆಗೆ ಅವಳೊ/ನೊಂದಿಗೆ ಕಲಹಕ್ಕೆ ಒಳಗಾಗುವುದನ್ನು ತಪ್ಪಿಸಿ. ಇಂದು ನೀವು ವಿವಿಧ ಪ್ರಕಾರ, ಜಾತಿ ಹಾಗೂ ಮತಗಳಿಗೆ ಸೇರಿದ ಜನರನ್ನು ಭೇಟಿ ಮಾಡಬಹುದು. ಹೊಸ ಸಂಪರ್ಕಗಳನ್ನು ಬೆಳೆಸುವ ಅವಕಾಶಗಳನ್ನು ಬಳಸಿಕೊಳ್ಳಿ.
ಕನ್ಯಾ :
ಗ್ರಹಗತಿಗಳು ಇಂದು ನಿಮ್ಮ ಮೇಲೆ ಸಾಕಷ್ಟು ಪ್ರೀತಿ ತೋರುವಂತೆ ಅನಿಸುತ್ತದೆ ಎಂಬುದಾಗಿ ಗಣೇಶ ವಿಶ್ಲೇಷಿಸುತ್ತಾರೆ. ಸಾಮಾಜಿಕ ವಿಚಾರಗಳಲ್ಲಿ , ಸ್ನೇಹಿತರೊಂದಿಗೆ ಸಂತಸ ಹಂಚಿಕೊಳ್ಳುವುದರಲ್ಲಿ ಮತ್ತು ನಿಮ್ಮ ಕಿಸೆ ಭರ್ತಿ ಮಾಡುವುದರಲ್ಲಿ ಕಾಲ ಕಳೆಯುತ್ತೀರಿ. ಇಂದು ನಿಮ್ಮ ಆರೋಗ್ಯವು ಪರಿಪೂರ್ಣವಾಗಿರುತ್ತದೆ. ಈಗಾಗಲೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರವವರು ಸ್ವಲ್ಪ ಮಟ್ಟಿಗೆ ಚೇತರಿಕೆಯನ್ನು ಕಾಣುತ್ತಾರೆ. ಕಚೇರಿಯಲ್ಲೂ ಸಹೋದ್ಯೋಗಿಗಳು ಮಧ್ಯಪ್ರವೇಶಿಸುತ್ತಾರೆ ಮತ್ತು ಕೆಲಸ ಪೂರ್ಣಗೊಳ್ಳಲು ಸಹಾಯ ಮಾಡುತ್ತಾರೆ.
ತುಲಾ :
ನಿಮ್ಮ ಕಲ್ಪನೆ ಮತ್ತು ಸೃಜನಶೀಲತೆಯ ಕಲ್ಪನೆಯನ್ನು ಹೊಂದಿರುವ ದಿನವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆದರೆ, ನಿಮ್ಮ ಊಹೆಯು ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಿ. ನಿಮ್ಮ ವೇಗವನ್ನು ನಿಯಂತ್ರಿಸಿ. ಇಂದು ಸಾಕಷ್ಟು ಬೌದ್ಧಿಕ ಚರ್ಚೆ ಹಾಗೂ ಮಾತುಕತೆಗಳಲ್ಲಿ ನೀವು ಕ್ರಿಯಾಶೀಲರಾಗಿರುತ್ತೀರಿ. ನಿಮ್ಮ ಮಕ್ಕಳು ಶುಭಸುದ್ದಿಯನ್ನು ತರುವುದರಿಂದ ನೀವು ಸಂತೋಷವಾಗಿರುತ್ತೀರಿ ಮತ್ತು ಮನೆಯ ವಾತಾವರಣವು ಉಲ್ಲಾಸಕರವಾಗಿರುತ್ತದೆ. ಇದರೊಂದಿಗೆ ಸ್ವರ್ಗಕ್ಕಿಂತ ಕಡಿಮೆಯೇನಿರದ ಮನೆಯಲ್ಲಿ ಸಂಗಾತಿಯು ಬೆಂಬಲ ಹಾಗೂ ಸಹಾಯವನ್ನು ತೋರುತ್ತಾರೆ. ನಿಮ್ಮ ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಮಹಿಳಾ ಸ್ನೇಹಿತರಿಂದ ವಿಚಾರ ಸಂಗ್ರಹ ಪ್ರೋತ್ಸಾಹವೂ ಸುಲಭವಾಗಿರುತ್ತದೆ. ಒಟ್ಟಾರೆಯಾಗಿ ಅದ್ಭುತ ದಿನ ನಿಮಗಾಗಿ ಕಾದಿದೆ.
ವೃಶ್ಚಿಕ :
ಪರಿಸ್ಥಿತಿಯು ಎಷ್ಟೇ ಕಷ್ಟಕರವಾಗಿದ್ದರೂ, ನಿಮ್ಮ ಕೆಲಸವನ್ನು ತಡೆಹಿಡಿಯುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಒತ್ತಡದೊಂದಿಗೆ, ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಜಗಳವಾಡಬಹುದು. ಆದ್ದರಿಂದ ವಿಶ್ರಾಂತರಾಗಲು ಪ್ರಯತ್ನಿಸಿ. ಮತ್ತು ತೀರ್ಮಾನಕ್ಕೆ ಅವಸರಿಸುವುದು ಉತ್ತಮ ಆಲೋಚನೆಯಲ್ಲ. ನಿಮ್ಮದೇ ಸಿಹಿಯಾದ ಸಮಯವನ್ನು ಬಳಸಿಕೊಳ್ಳಿ. ನಿಮ್ಮ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗಳು ಹದಗೆಡಬಹುದು. ಎಚ್ಚರಿಕೆಯಿಂದಿರಿ. ಮಹಿಳೆಯರೊಂದಿಗಿನ ಸಂವಾದವನ್ನು ಇಂದು ತಪ್ಪಿಸಿ. ಮತ್ತು ಅಪರಿಚಿತ ನೀರಿರುವ ಪ್ರದೇಶಗಳಿಂದ ದೂರವಿರಿ. ಪರಿಸ್ಥಿತಿಗಳು ನಿಮಗೆ ಅಪಖ್ಯಾತಿಯನ್ನು ತರಬಹುದು ಅಥವಾ ನಿಮ್ಮ ಗೌರವಕ್ಕೆ ಧಕ್ಕೆ ಉಂಟುಮಾಡಬಹುದು. ಯಾವುದೇ ಕಾನೂನು ಪತ್ರಗಳಿಗೆ ಸಹಿ ಹಾಕುವಾಗ ಎಚ್ಚರಿಕೆ ವಹಿಸಿ.
ಧನು :
ಅತೀಂದ್ರಿಯ ಮತ್ತು ಆಧ್ಯಾತ್ಮಿಕ ವಿಚಾರಗಳಲ್ಲಿ ನೀವು ಪೂರ್ತಿಯಾಗಿ ತಲ್ಲೀನರಾಗುವಿರಿ. ಇದು ನಿಮ್ಮ ಓದಿನಲ್ಲಿರುವ ಅಥವಾ ನೀವು ಆರಿಸಿದ ವಿಷಯಗಳರಾಗಿರಬಹುದು.ಏನೇ ಆಗಿದ್ದರೂ, ಇದು ನಿಮ್ಮನ್ನುಿ ಆಕರ್ಷಿಸುತ್ತದೆ ಮತ್ತು ಇದರ ಕುರಿತಾಗಿ ಹೆಚ್ಚು ಪ್ರಭಾವಿತಗೊಳ್ಳುವಿರಿ. ನಿಮ್ಮ ಒಡಹುಟ್ಟಿದವರೊಂದಿಗಿನ ಸಂಬಂಧ ಮತ್ತು ಸಂವಾದಗಳು ನಿಮ್ಮನ್ನು ಸಂತೋಷಗೊಳಿಸಬಹುದು. ನಿಮ್ಮ ದೀರ್ಘಕಾಲದ ಸ್ನೇಹಿತರೊಂದಿಗಿನ ಕಾಫಿ ಹರಟೆಯಲ್ಲಿ ತೊಡಗುವಿರಿ. ನೀವು ಸಾಮಾನ್ಯದಲ್ಲೂ ಸಾಕಷ್ಟು ಹೊಂದಿರುವಿರಿ ಎಂಬುದನ್ನು ನೀವು ಕಂಡುಕೊಳ್ಳುವ ಕಾರಣ ಎಲ್ಲಾ ವಿಚಾರದಲ್ಲೂ ಮುಂದಕ್ಕೆ ಸಾಗುವಂತೆ ಗಣೇಶ ನಿಮ್ಮನ್ನು ಒತ್ತಾಯಿಸುತ್ತಾರೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ದಿನ. ಒಟ್ಟಾರೆಯಾಗಿ ಗೆಲುವು, ಉತ್ತಮ ಅದೃಷ್ಟ, ಸಂಭ್ರಮದ ಪ್ರಯಾಣ ಮತ್ತು ಬೌದ್ಧಿಕ ನೆಮ್ಮದಿ ಇವುಗಳೆಲ್ಲವನ್ನೂ ನಿರೀಕ್ಷಿಸಬಹುದಾದ ದಿನ.
ಮಕರ :
ಇಂದು ಸಾಮಾನ್ಯ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಶೇರುಮಾರುಕಟ್ಟೆಗಳಲ್ಲಿ ಅಥವಾ ಬೆಟ್ಟಿಂಗ್ ಬಜಾರ್‌ಗಳಲ್ಲಿ ಹೂಡಿಕೆದಾರರು ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ಹೆಚ್ಚು ಶ್ರಮಪಡಬೇಕು. ಮನೆಯಲ್ಲಿ ಪ್ರತಿಕೂಲ ವಾತಾವರಣ ಸೃಷ್ಟಿಯಾಗುವುದನ್ನು ತಪ್ಪಿಸಲು ನಿಮ್ಮ ದುರಾಕ್ರಮಣ ಪ್ರವೃತ್ತಿಯನ್ನು ನಿಯಂತ್ರಿಸಿ ತಾಳ್ಮೆಯಿಂದಿರಬೇಕು. ಇಲ್ಲವಾದಲ್ಲಿ ಮನೆಯಲ್ಲಿ ನಿಮ್ಮ ಪರಿಸ್ಥತಿ ಕಷ್ಟಕರವಾಗಿರಬಹುದು. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ. ಒಳ್ಳೆಯ ಆಹಾರ ಸೇವಿಸಿ. ಕಣ್ಣು ಸಂಬಂಧಿ ತೊಂದರೆಗಳು, ಋಣಾತ್ಮಕತೆ ಮತ್ತು ನಿರಾಸಕ್ತಿಯು ಕಾಣಲಿದೆ. ಧ್ಯಾನ ಹಾಗೂ ಯೋಗದ ಮೂಲಕ ಅವುಗಳನ್ನು ತೊಡೆದುಹಾಕಿ. ಹವ್ಯಾಸಗಳಲ್ಲಿ ನೀವು ಕ್ರಿಯಾಶೀಲರಾಗಿರುವುದರಿಂದ ಪ್ರಯೋಜನ ಉಂಟಾಗಲಿದೆ.
ಕುಂಭ :
ನಿಮ್ಮ ಗ್ರಹಗತಿಗಳು ಇಂದು ಅನುಕೂಲಕರ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಹಣಕಾಸು ಲಾಭ ಸಿಗಲಿದೆ. ಇಂದು ನೀವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ಕೃಷ್ಟರಾಗಿರುತ್ತೀರಿ ಎಂಬುದನ್ನು ನಿಮ್ಮ ಗ್ರಹಗತಿಗಳು ಸಾಬೀತುಪಡಿಸುತ್ತವೆ. ನಿಮ್ಮ ಗ್ರಹಗತಿಗಳ ಫಲದ ಪ್ರಯೋಜನವನ್ನು ಪಡೆದುಕೊಳ್ಳಲು ಸಂಭ್ರಮದ ಪ್ರವಾಸವನ್ನು ಯೋಜಿಸಿ. ಆಧ್ಯಾತ್ಮದೆಡೆಗಿನ ನಿಮ್ಮ ಒಲವು, ನಿಮ್ಮ ನಿರಾಶಾವಾದವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಅನ್ಯೋನ್ಯತೆಯು ಅದ್ಭುತವಾಗಿರುವುದರಿಂದ ನೀವು ವೈವಾಹಿಕ ಸಂತಸವನ್ನು ಅನುಭವಿಸುವಿರಿ.
ಮೀನ :
ದಿನಪೂರ್ತಿ ನೀವು ಎಚ್ಚರಿಕೆಯಿಂದಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.ಏಕಾಗ್ರತೆ ಮತ್ತು ಗಮನದ ಕೊರತೆಯು, ನಿಮ್ಮ ಕೂಟವನ್ನು ಹಾಳುಮಾಡುತ್ತದೆ. ಧ್ಯಾನ ಮತ್ತು ಯೋಗದಲ್ಲಿ ತೊಡಗಿ. ನಿಮ್ಮ ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಜಾಗರೂಕರಾಗಿರಿ. ಜೊತೆಗೆ, ಇಂದು ನೀವು ಧಾರ್ಮಿಕ ಚಟುವಟಿಕೆಗಳಿಗಾಗಿ ಸಾಕಷ್ಟು ಪ್ರಮಾಣದಲ್ಲಿ ವೆಚ್ಚಮಾಡಬಹುದು.ಸ್ನೇಹಿತರು ಮತ್ತು ಪ್ರೀತಿಪಾತ್ರರ ನಡುವಿನ ಜಗಳಗಳು ನಿಮ್ಮಿಬ್ಬರ ನಡುವಿನ ಸ್ನೇಹಪರತೆಯನ್ನು ಕಿತ್ತೊಗೆಯುತ್ತದೆ. ನಿಮ್ಮ ಕೋಪ ಮತ್ತು ಸಿಡುಕನ್ನು ನಿಯಂತ್ರಿಸುವ ಮೂಲಕ ಇದನ್ನು ತಪ್ಪಿಸಿ.ಪೊದೆಯಲ್ಲಿರುವ ಎರಡು ಹಕ್ಕಿಗಳಿಗಿಂತ ಕೈಯಲ್ಲಿರುವ ಒಂದು ಹಕ್ಕಿಯೇ ಲೇಸು. ದುರಾಸೆ ಬೇಡ. ಕಾನೂನು ಸಂಬಂಧಿ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಬೇಕು.
ಇಂದಿನ ಜ್ಯೋತಿಷ್ಯ ಭವಿಷ್ಯ: ಗ್ರಹಗಳ ಚಲನೆ ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
WhatsApp Group
Join Now