ಮುಕಳೆಪ್ಪಾಗೆ ಇನ್ನೊಂದು ಹೊಡೆತ – ಅಸಲಿ ಸತ್ಯ ಹೊರಹಾಕಿದ ಯುವಕರು

Spread the love

ಸಾಮಾಜಿಕ ಜಾಲತಾಣಗಳಲ್ಲಿ ಕಾಮಿಡಿ ವಿಡಿಯೋಗಳನ್ನ ಮಾಡ್ತಾ ಇದ್ದಂತ ಯೂಟ್ಯೂಬರ್ ಮುಕಳೆಪ್ಪಾ ವಿರುದ್ಧ ಬಜರಂಗದಳ ಗಂಭೀರ ಆರೋಪಗಳನ್ನ ಮಾಡಿದೆ. ಈತನ ವಿರುದ್ಧ ಕ್ರಮವನ್ನ ಕೈಗೊಳ್ಳಬೇಕು ಹಾಗೂ YouTube ಚಾನೆಲ್ ಅನ್ನ ನಿಷೇಧ ಮಾಡಬೇಕು ಅಂತ ಹೇಳಿ ಆಗ್ರಹಿಸಿದೆ. ಹಾಗಿದ್ರೆ ಇದಕ್ಕೆ ಕಾರಣ ಏನು ಅಂತ ತಿಳಿಯೋಣ.

WhatsApp Group Join Now

ಮುಕಳೆಪ್ಪಾ ಹಿಂದೂ ಮಹಿಳೆಯನ್ನ ಬಳಸಿಕೊಂಡು ಮೂರು ಮಂದಿ ಜೊತೆ ಫಸ್ಟ್ ನೈಟ್ ಎಂಬಂತ ಅಸಭ್ಯ ವಿಡಿಯೋಗಳನ್ನ ಮಾಡ್ತಾ ಇದ್ದಾನೆ ಅಂತ ಹೇಳಿ ಬಜರಂಗದಳ ಧಾರವಾಡ ಜಿಲ್ಲಾ ಸಂಯೋಜಕ ಸಿದ್ದೇವರ ಮಠ ಆರೋಪಿಸಿದ್ದಾರೆ. ಇದಲ್ಲದೆ ಗಣಪತಿ ಹಬ್ಬದ ಸಂದರ್ಭದಲ್ಲಿಯೂ ಹಿಂದೂ ಧರ್ಮಕ್ಕೆ ಅವಮಾನ ಮಾಡುವ ವಿಡಿಯೋಗಳನ್ನ ಪ್ರಕಟಿಸಿದ್ದಾನೆ ಅಂತ ಹೇಳಿದ್ದಾರೆ.

ಮುಕಳೆಪ್ಪಾ ಹಿಂದೂ ಯುವತಿಯಳೊಬ್ಬಳನ್ನ ಮದುವೆಯಾಗಿದ್ದು, ಅದಕ್ಕಾಗಿ ನಕಲಿ ದಾಖಲೆಗಳನ್ನ ಬಳಸಿದ್ದಾನೆ. ಅದೇ ರೀತಿ ಬಜರಂಗದಳ ಈ ದಾಖಲೆಗಳ ಸಮೇತ ಆರೋಪ ಮಾಡಿದೆ. ಇನ್ನು ಕಾನೂನು ದಾಖಲೆಗಳಲ್ಲಿ ಮುಂಡಗೋಡಿನ ವಿಳಾಸವನ್ನು ನಮೂದಿಸಲಾಗಿದ್ದು, ಆದರೆ ಆತ ವಾಸವಾಗಿರುವುದು ಧಾರವಾಡದ ಹುಬ್ಬಳ್ಳಿ ಬಳಿ. ಆದ್ದರಿಂದ ಇದು ವ್ಯವಸ್ಥಿತವಾಗಿ ನಡೆಸ್ತಾ ಇರುವಂತಹ ಲವ್ ಜಿಹಾದ್ ಪ್ರಕರಣವಾಗಿದ್ದು, ಯುವತಿಯ ಮನಸ್ಸನ್ನ ಪರಿವರ್ತನೆ ಮಾಡಿ ಕೃತ್ಯವನ್ನ ಎಸಗಿದ್ದಾನೆ ಅಂತ ಹೇಳಿ ಇದೀಗ ಬಜರಂಗದಳದ ಕಾರ್ಯಕರ್ತರು ಕೂಡ ಆರೋಪ ಮಾಡಿದ್ದಾರೆ.

WhatsApp Group Join Now

Spread the love

Leave a Reply