ಜನರೇ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ.. ಎಚ್ಚರ.. ಚಿತ್ರದುರ್ಗದ ವಿನಾಯಕ ಕಲ್ಯಾಣ ಮಂಟಪದ ಬಳಿ ಮನೆಯಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವತಿ ಮೃತಪಟ್ಟಿದ್ದಾರೆ. 20 ವರ್ಷದ ನೂತನ್ ಉಸಿರುಗಟ್ಟಿ ಮೃತಪಟ್ಟ ದುರ್ದೈವಿ.
ಬಿಎಸ್ ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೂತನ (20) ಗ್ಯಾಸ್ ಗೀಸರ್ ಸೋರಿಕೆಯಾಗಿ ಮೃತಪಟ್ಟಿದ್ದಾರೆ. ವೈದ್ಯರು ಸಾವು ಖಚಿತ ಪಡಿಸಿ ಶವಾಗಾರಕ್ಕೆ ಸ್ಥಳಾಂತರಿಸಲು ಯತ್ನಿಸಿದ್ರು. ಮಗಳ ಸಾವಿನಿಂದ ಕಂಗಾಲಾದ ಪೋಷಕರು ಪೋಸ್ಟ್ ಮಾರ್ಟಮ್ಗೂ ಬಿಡದೇ ಹಠ ಹಿಡಿದಿದ್ದರು.
ಮೃತ ಯುವತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ಯಾಸ್ ಗೀಸರ್ ಸೋರಿಕೆಯಿಂದಾಗಿ ಜನರು ಆತಂಕಗೊಂಡಿದ್ದು, ಗ್ಯಾಸ್ ಗೀಸರ್ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ.
ಗ್ಯಾಸ್ ಗೀಸರ್ ಬಳಸುವ ಮುನ್ನ ಎಚ್ಚರ ಎಚ್ಚರ..
ಗ್ಯಾಸ್ ಗೀಸರ್ ಬಳಸೋರೇ ದಯಮಾಡಿ ಎಚ್ಚರದಿಂದಿರಿ. ಸ್ನಾನದ ಕೋಣೆಯಲ್ಲಿ ವಾತಾವರಣ ಚೆನ್ನಾಗಿದ್ಯಾ ಎಂದು ಮೊದಲೇ ಪರಿಶೀಲನೆ ಮಾಡಿ. ಬಾತ್ ರೂಮ್ನಲ್ಲಿವಾತಾವರಣವು ಚೆನ್ನಾಗಿಲ್ಲ ಎಂದರೆ, ಸಣ್ಣ ಅನುಮಾನ ಬಂದರೂ ಗ್ಯಾಸ್ ಗೀಸರ್ನ್ನು ಬಾತ್ ರೂಮ್ನಿಂದ ಹೊರತೆಗೆಯಿರಿ.
ಕಾಲ ಕಾಲಕ್ಕೆ ಗೀಸರ್ಗಳು ಮತ್ತು ಗ್ಯಾಸ್ ಪೈಪ್ಗಳನ್ನು ಚೆನ್ನಾಗಿ ಪರಿಶೀಲಿಸಲೇಬೇಕು. ನಿಮಗೆ ಸ್ವಲ್ಪ ಅನುಮಾನವಿದ್ದರೆ, ಗೀಸರ್ ಚೆಕ್ ಮಾಡಿಸಿ.
ಗೀಸರ್ ನೀರಲ್ಲಿ ಸ್ನಾನ ಮಾಡೋಕೆ ಚೆನ್ನಾಗಿರುತ್ತೆ ಅಂತ ಬಾತ್ ರೂಮ್ನಲ್ಲಿ ಗಂಟೆಗಟ್ಟಲೇ ಸ್ನಾನ ಮಾಡುತ್ತಾ ಕೂರಬೇಡಿ. ಗೀಸರ್ ದೀರ್ಘಕಾಲದವರೆಗೆ ಆನ್ ಆಗಿದ್ದರೆ, ಬಾತ್ ರೂಮ್ನಲ್ಲಿ ಹೆಚ್ಚು ಸಮಯ ಕಳೆಯಬೇಡಿ, ಏಕೆಂದರೆ ಗೀಸರ್ನಿಂದ ಹೊರಬರುವ ಅನಿಲವು ಸಾವಿಗೆ ಕಾರಣವಾಗಬಹುದು. ಈಗ ನೂತನ ಪ್ರಕರಣದಲ್ಲೂ ಇದೇ ಆಗಿದೆ.
ಸಮಯಕ್ಕೆ ಸರಿಯಾಗಿ ಗೀಸರ್ ಅನ್ನು ಆಫ್ ಮಾಡಿ. ಇಲ್ಲದಿದ್ದರೆ ಸಮಸ್ಯೆ ಆಗಬಹುದು. ಆದ್ದರಿಂದ ಗೀಸರ್ ಕೆಲಸ ಮುಗಿದ ತಕ್ಷಣ ಅದನ್ನು ಬಳಸಿದ ತಕ್ಷಣ ಅದನ್ನು ಆಫ್ ಮಾಡಿ
ಇತ್ತೀಚಿನ ದಿನಗಳಲ್ಲಿ, ಗ್ಯಾಸ್ ಸೋರಿಕೆ ಡಿಟೆಕ್ಟರ್ನಂತಹ ಸುರಕ್ಷತಾ ಸಾಧನಗಳು ಸಹ ಮಾರುಕಟ್ಟೆಗೆ ಬಂದಿದ್ದು, ಇದರ ಬೆಲೆ 1000 ರೂಪಾಯಿ. ನೀವು ಅವುಗಳನ್ನು ಸ್ನಾನಗೃಹದಲ್ಲಿ ಇನ್ಸ್ಟಾಲ್ ಮಾಡಿಸಿ.
ತಾಯಿ-ಮಗಳನ್ನು ಬಲಿ ಪಡೆದಿದ್ದ ಗ್ಯಾಸ್ ಗೀಸರ್
ಇದೇ ತಿಂಗಳ 8 ನೇ ತಾರೀಖಿನಂದು ಬೆಂಗಳೂರಿನ ಗೋವಿಂದರಾಜನಗರ ಠಾಣಾ ವ್ಯಾಪ್ತಿಯ ಪಂಚಮಶೀಲ ನಗರದ ಮನೆಯೊಂದರಲ್ಲಿ ಸ್ನಾನ ಮಾಡುತ್ತಿದ್ದಾಗ ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ತಾಯಿ ಹಾಗೂ ಮಗಳು ಮೃತಪಟ್ಟಿದ್ದರು.
ಚಾಂದಿನಿ ಪತಿ ಕಿರಣ್ ಕಾರ್ಪೆಂಟರ್ ಕೆಲಸಕ್ಕೆ ತೆರಳಿದ್ದರು. ದಂಪತಿಯ ಮೊದಲ ಮಗಳು ಶಾಲೆಗೆ ತೆರಳಿದ್ದರು. ಶಾಲೆಗೆ ತೆರಳಿದ್ದ ಪುತ್ರಿಯನ್ನು ಕಿರಣ್ ಸಹೋದರ ಮಧ್ಯಾಹ್ನ ಮನೆಗೆ ಕರೆದುಕೊಂಡು ಬಂದಿದ್ದರು. ಬಾಗಿಲು ಬಡಿದರೂ ತೆರೆದಿರಲಿಲ್ಲ. ಬಳಿಕ ಬಾಗಿಲು ಒಡೆದು ಪರಿಶೀಲಿಸಿದಾಗ ಸ್ನಾನದ ಕೋಣೆಯಲ್ಲಿ ಅಸ್ವಸ್ಥರಾಗಿ ತಾಯಿ ಹಾಗೂ ಮಗಳು ಬಿದ್ದಿರುವುದು ಕಂಡುಬಂದಿತ್ತು. ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ರು.
ಸ್ನಾನಕ್ಕೆ ‘ಗ್ಯಾಸ್ ಗೀಸರ್’ ಬಳಸೋರೇ ಎಚ್ಚರ – ವಿಷಾನಿಲ ಸೋರಿಕೆಯಾಗಿ ಯುವತಿ ಸಾವು
WhatsApp Group
Join Now