ಅಮ್ಮ ಬೇರೆ, ಮಗ ಬೇರೆ, ಅವನ ಅನಿಸಿಕೆ ನನಗೆ ಬೇಕಿಲ್ಲ : ಖಡಕ್ ಆಗಿ ಹೇಳಿದ ಯಶ್ ತಾಯಿ ಪುಷ್ಪ

Spread the love

ಯಶ್ ತಾಯಿ ಪುಷ್ಪ ಅವರು ‘ಕೊತ್ತಲವಾಡಿ’ ಸಿನಿಮಾ ನಿರ್ಮಾಣ ಮಾಡಿದ್ದು, ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಯಶ್ಗೆ ಸಿನಿಮಾ ತೋರಿಸಿ ಅಭಿಪ್ರಾಯ ಪಡೆಯುತ್ತೀರಾ ಎಂದು ಕೇಳಿದ್ದಕ್ಕೆ ಪುಷ್ಪ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

‘ಯಶ್, ರಾಧಿಕಾ ಯಾರಿಗೂ ನಾನು ಸಿನಿಮಾ ತೋರಿಸಲ್ಲ. ಮಗ ಬೇರೆ, ಅಮ್ಮ ಬೇರೆ. ಮಗ ಎಂದಮಾತ್ರಕ್ಕೆ ನನ್ನ ಮಾತು ಕೇಳಬೇಕು ಅಂತ ಏನೂ ಇಲ್ಲ. ಅವನು ನನ್ನ ಸಿನಿಮಾ ನೋಡುತ್ತಾನೆ ಅಂತ ನಾನು ನಿರೀಕ್ಷಿಸಲ್ಲ. ಯಶ್ ನೋಡಿದ ತಕ್ಷಣ ಸಿನಿಮಾ ಓಡುತ್ತಾ? ನನ್ನ ದುಡ್ಡು ವಾಪಸ್ ಬರುತ್ತಾ? ಪ್ರೇಕ್ಷಕರು ನೋಡಬೇಕು. ಮಗನ ಅಭಿಪ್ರಾಯ ನನಗೆ ಬೇಕಿಲ್ಲ. ಜನರ ಅಭಿಪ್ರಾಯ ಬೇಕು’ ಎಂದು ಪುಷ್ಪ ಅವರು ಹೇಳಿದ್ದಾರೆ.

ಶ್ರೀರಾಜ್ ನಿರ್ದೇಶನದ ‘ಕೊತ್ತಲವಾಡಿ’ ಚಿತ್ರದಲ್ಲಿ ಪೃಥ್ವಿ ಅಂಬರ್ ಹೀರೊ ಆಗಿ ನಟಿಸಿದ್ದಾರೆ. ಕಾವ್ಯಾ ಶೈವ ನಾಯಕಿಯಾಗಿ ನಟಿಸಿದ್ದು ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ. ಚಿತ್ರದ ಹೊಸ ಹಾಡಿನ ಬಿಡುಗಡೆಗೂ ಮುನ್ನ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸಮಾಧಿಗೆ ಪುಷ್ಪಾ ಅರುಣ್ ಕುಮಾರ್ ಭೇಟಿ ನೀಡಿದ್ದರು. ಪೂಜೆ ಸಲ್ಲಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಒಂದ್ಕಡೆ ಯಶ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಚಿತ್ರಗಳ ಚಿತ್ರೀಕರಣ ನಡೀತಿದೆ. ಮುಂಬೈ, ಬೆಂಗಳೂರು ಅಂತ ಫ್ಲೈಟ್ ಏರಿ ಇಳಿಯುತ್ತಿದ್ದಾರೆ. ಸದ್ಯ ಪತ್ನಿ ಹಾಗೂ ಮಕ್ಕಳ ಜೊತೆ ಯಶ್ ಯುಎಸ್ ಪ್ರವಾಸ ಕೈಗೊಂಡಿದ್ದಾರೆ. ಇದೆಲ್ಲದರ ನಡುವೆ ‘ಕೊತ್ತಲವಾಡಿ’ ಸಿನಿಮಾ ಪ್ರಚಾರ ಆರಂಭವಾಗಿದೆ. ನಿಮ್ಮ ಮಗ ಯಶ್ ಅವರು ಈ ಚಿತ್ರದ ಟೀಸರ್ ನೋಡಿದ್ರಾ? ಸಿನಿಮಾ ನೋಡಿದ್ರಾ? ಎನ್ನುವ ಪ್ರಶ್ನೆಗೆ ಅವರ ತಾಯಿ ಪುಷ್ಪ ಪ್ರತಿಕ್ರಿಯಿಸಿದ್ದಾರೆ.

ನಮ್ಮ ‘ಕೊತ್ತಲವಾಡಿ’ ಸಿನಿಮಾ ಬಗ್ಗೆ ಬಹಳ ನಿರೀಕ್ಷೆ ಇದೆ. ಜನ ಏನು ಹೇಳುತ್ತಾರೋ ನೋಡೋಣ. ನಮ್ಮ ಮಗು ನಮಗೆ ಚೆಂದ ಎನ್ನುವಂತೆ ನನಗೆ ಸಿನಿಮಾ ಇಷ್ಟವಾಗಿದೆ. ಮುಂದೆ ನೋಡೋಣ. ನನಗೆ ನಟಿಸುವ ಆಸೆ ಇಲ್ಲ. ಸಿನಿಮಾ ನಿರ್ಮಾಣ ಮಾತ್ರ ಮಾಡುತ್ತೇನೆ. ಸಾಕಷ್ಟು ಜನ ಕೇಳಿದ್ದಾರೆ. ಆದರೆ ಒಪ್ಪಲಿಲ್ಲ” ಎಂದು ಪುಷ್ಪಾ ಅರುಣ್‌ಕುಮಾರ್ ಹೇಳಿದ್ದಾರೆ.

ಮಾತು ಮುಂದುವರೆಸಿರುವ ನಿರ್ಮಾಪಕಿ ಪುಷ್ಪಾ “ಯಶ್ ಹಾಗೂ ರಾಧಿಕಾ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುತ್ತಾರಾ ಎನ್ನುವುದರ ಬಗ್ಗೆ ಅವರನ್ನೇ ಕೇಳಬೇಕು. ಮಗ ಬೇರೆ, ಅಮ್ಮ ಬೇರೆ ಬೇರೆ. ಮಗ ಅಂದಮಾತ್ರಕ್ಕೆ ನನ್ನ ಮಾತು ಕೇಳಬೇಕು ಅಂತೇನಿಲ್ಲ. ಅವ್ನು ಸಿನ್ಮಾ ಮಾಡ್ತಿದ್ದಾನಲ್ಲ, ಮಾಡಲಿ. ಜನ ಸಿನಿಮಾ ಬಗ್ಗೆ ಹೇಳಿದಾಗ ಯಶ್ ಹೋಗಿ ನೋಡುತ್ತಾನಲ್ಲ. ಯಶ್ ನೋಡುವುದು ಮುಖ್ಯ ಅಲ್ಲ, ಪ್ರೇಕ್ಷಕರು ನೋಡಬೇಕು. ಯಶ್ ನೋಡಿದ ಮಾತ್ರಕ್ಕೆ ಸಿನಿಮಾ ಓಡಿ, ನನ್ನ ದುಡ್ಡು ವಾಪಸ್ ಬರುತ್ತಾ?” ಎಂದು ಖಡಕ್ ಆಗಿಯೇ ಪುಷ್ಪಾ ಹೇಳಿದ್ದಾರೆ.

ಯಶ್ ಅಭಿಮಾನಿಗಳು ಮಾತ್ರವಲ್ಲ, ಸುದೀಪ್, ದರ್ಶನ್, ಧ್ರುವ ಸರ್ಜಾ ಹಾಗೂ ಪುನೀತ್ ಅಭಿಮಾನಿಗಳು ಹೀಗೆ ಎಲ್ಲಾ ಕಲಾವಿದರ ಅಭಿಮಾನಿಗಳು ಬಂದು ‘ಕೊತ್ತಲವಾಡಿ’ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ. ಇದು ಮಂಡ್ಯ ಸೊಗಡಿನ ಕಥೆ ಆಗಿದ್ದು, ಪೃಥ್ವಿ ಅಂಬರ್ ಮೊದಲ ಬಾರಿಗೆ ರಗಡ್ ಪಾತ್ರದಲ್ಲಿ ಮಿಂಚಿದ್ದಾರೆ. ಯಶ್ ತಾಯಿ ನಿರ್ಮಾಣದ ಸಿನಿಮಾ ಎನ್ನುವ ಕಾರಣಕ್ಕೆ ಸಹಜವಾಗಿಯೇ ನಿರೀಕ್ಷೆ ಮೂಡಿಸಿದೆ.

ಚಿಕ್ಕಂದಿನಿಂದಲೂ ಅಣ್ಣಾವ್ರ ಅಭಿಮಾನಿ ಪುಷ್ಪಾ ಅರುಣ್ ಕುಮಾರ್. ಅವರ ರೀತಿಯಲ್ಲೇ ಚಿತ್ರರಂಗಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಕಾರಣಕ್ಕೆ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಚಿತ್ರದ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಮನಸ್ಸು ಮಾಡಿದ್ದಾರೆ. ‘ಕೊತ್ತಲವಾಡಿ’ ಚಿತ್ರದ ಮೂಲಕ ಅದಕ್ಕೆ ಶ್ರೀಕಾರ ಹಾಕಿದ್ದಾರೆ. ಮುಂದೆ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸಲು ಹೊರಟಿದ್ದಾರೆ. 2ನೇ ಚಿತ್ರದಲ್ಲಿ ಶರಣ್ ಹೀರೊ ಆಗಿ ನಟಿಸಲಿದ್ದಾರೆ. ಯಶ್ ಕೂಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವುದು ಗೊತ್ತೇಯಿದೆ.

WhatsApp Group Join Now

Spread the love

Leave a Reply