ಪಟ್ಟಣದ ಕಾಳಮ್ಮನಗರದಲ್ಲಿ ಶನಿವಾರ ಹಾಡಹಗಲೇ ರಂಜಿತಾ ಬನ್ಸೊಡೆ (30) ಎಂಬ ಮಹಿಳೆಗೆ ಇರಿದು ಪರಾರಿಯಾಗಿದ್ದ ರಫಿಕ್ ಯಳ್ಳೂರ ಭಾನುವಾರ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕಾಳಮ್ಮಮಗರದ ರಫಿಕ್, ರಂಜಿತಾ ಬನ್ಸೊಡೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ನರಳುತ್ತಿದ್ದ ರಂಜಿತಾಳನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಸಾವನ್ನಪ್ಪಿದ್ದಳು.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಪರಾರಿಯಾದ ರಫೀಕ್ ಗಾಗಿ ಶೋಧ ನಡೆಸುತ್ತಿದ್ದರು. ಶೋಧಕ್ಕೆ ಸಹಕರಿಸಲು ಈತನ ಭಾವಚಿತ್ರವನ್ನು ಸಾಮಾಜಿಕ ತಾಣಗಳಲ್ಲಿ ಹಾಕಲಾಗಿತ್ತು.ಕೋಮು ಸೂಕ್ಶ್ಮ ಘಟನೆ ಆತಂಕಕ್ಕೆ ಕಾರಣವಾಗಿದ್ದು ಪಟ್ಟಣದಲ್ಲಿ ಭಯದ ವಾತಾವರಣ ಹುಟ್ಟಿಸಿತ್ತು.ಹಲವರು ಘಟನೆಯನ್ನು ಖಂಡಿಸಿ ಕೊಲೆಗಾರನನ್ನು ಪತ್ತೆಹಚ್ಚುವಂತೆ ಆಗ್ರಹ ಮಾಡಿದ್ದರು.
ಎಸ್.ಪಿ ದೀಪನ್ ಯಲ್ಲಾಪುರದಲ್ಲಿ ಠಿಕಾಣಿ ಹೂಡಿದ್ದರು. ಹಿಂದೂ ಸಂಘಟನೆಗಳು ಇಂದು ಯಲ್ಲಾಪುರ ಬಂದ್ ಗೆ ಕರೆನೀಡಿದ್ದರು. ಕೆಲವು ಹಿಂದೂ ಸಂಘಟನೆ ಪ್ರಮುಖರು ಠಾಣೆಗೆ ಜಮಾಯಿಸಿ ಆರೀಪಿ ರಫೀಕ್ ಬಂಧಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ವಿಚ್ಛೇದಿತ ವಿವಾಹಿತೆ
ಮೃತ ರಂಜಿತಾ ಅವರು 12 ವರ್ಷದ ಹಿಂದೆ ಸೊಲ್ಲಾಪುರದ ಸಚೀನ್ ಕಾಟೇರ್‌ಅವರನ್ನು ಮದುವೆ ಆಗಿದ್ದರು. ಈ ದಂಪತಿಗೆ ಮಗು ಜನಿಸಿ ಐದು ವರ್ಷವಾದಾಗ ಇಬ್ಬರ ಮದ್ಯೆ ಮನಸ್ತಾಪವುಂಟಾಗಿತ್ತು. ಬಳಿಕ ರಂಜಿತಾ ಅಕ್ಕನ ಮನೆಯಲ್ಲಿ ವಾಸವಾಗಿದ್ದರು. ಅಲ್ಲದೇ ಸದ್ಯವಷ್ಟೇ ಪತಿಯಿಂದ ವಿಚ್ಚೇದನ ಪಡೆದಿದ್ದರು. ಜೀವನೋಪಾಯಕ್ಕಾಗಿ ರಂಜಿತಾ ಬಿಸಿಯೂಟ ಸಿಬ್ಬಂದಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ರಾಮಾಪುರ ಶಾಲೆ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು.
ಪೂರ್ವನಿಯೋಜಿತ ಸಂಚು?
ಮದುವೆ ಪ್ರಸ್ತಾಪಕ್ಕೆ ರಂಜಿತಾ ಒಪ್ಪದಿದ್ದರೆ ಕೊಲೆ ಮಾಡಲೇಬೇಕು ಎಂದು ರಫಿಕ್ ಸಂಚುರೂಪಿಸಿದ್ದನೇ ಎಂಬ ಶಂಕೆ ಮೂಡಿದೆ. ಮೊದಲಿನಿಂದಲೂ ಪರಿಚಿತಳಾಗಿದ್ದ ರಂಜಿತಾ ತನ್ನ ಪತಿಯಿಂದ ದೂರವಾದ ಬಳಿಕ ರಫಿಕ್ ಮತ್ತಷ್ಟು ಸಲಿಗೆಯಿಂದ ಇರಲು ಯತ್ನಿಸಿದ್ದ. ಅಲ್ಲದೇ ಆಗಾಗ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂಬ ಮಾತು ಕೇಳಿಬಂದಿದೆ. ಆದರೆ ಇದಕ್ಕೆ ರಂಜಿತಾ ಒಪ್ಪದಿದ್ದಾಗ ರಫಿಕ್ ಕ್ರುದ್ಧನಾಗಿದ್ದ. ಹೀಗಾಗಿ ಕೊಲೆ ಮಾಡುವ ಉದ್ದೇಶದಿಂದಲೇ ಆತ ಚಾಕು ಸಹಿತ ಬಂದಿದ್ದು ರಂಜಿತಾರನ್ನು ಅಡ್ಡಗಟ್ಟಿ ಕುತ್ತಿಗೆಗೆ ಇರಿದಿದ್ದಾನೆ ಎಂಬ ಮಾತು ಕೇಳಿ ಬಂದಿದೆ. ಈತ ಪೂರ್ವಯೋಜಿತ ಸಂಚು ರೂಪಿಸಿದ್ದ ಎಂಬುದಕ್ಕೆ ಪುಷ್ಠಿ ನೀಡಿದೆ.
ರಫಿಕ್ ಮತ್ತು ರಂಜಿತಾ ಒಟ್ಟಿಗೇ ಓದಿದವರಾಗಿದ್ದು ರಂಜಿತಾ ಅವರು ವಿವಾಹ ವಿಚ್ಚೇದನ ಪಡೆದ ನಂತರ ರಫಿಕ್ ಇವರಿಗೆ ಮತ್ತಷ್ಟು ಹತ್ತಿರವಾಗಲು ಬಯಸಿದ್ದ ಎನ್ನಲಾಗಿದೆ. ಸಹಪಾಠಿಗಳಾಗಿದ್ದರಿಂದ ಸಹಜ ವಾಗಿಯೇ ಇಬ್ಬರ ನಡುವೆ ಮಾತುಕತೆ ನಡೆಯುತ್ತಿತ್ತು. ಆದರೆ ರಂಜಿತಾಳೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ರಫಿಕ್ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಅಲ್ಲದೇ ಅವಳನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಎಂಬ ಆರೋಪಗಳೂ ಕೇಳಿಬಂದಿದೆ.
ಅಕ್ಕನ ವಿರೋಧ :-
ಪರಸ್ಪರ ಇಬ್ಬರು ಪರಿಚಿತರಾಗಿದ್ದರಿಂದ ಆತ ಈಕೆ ವಾಸವಿದ್ದಲ್ಲಿಗೆ ಬರುತ್ತಿದ್ದ. ಆದರೆ ರಂಜಿತಾರ ಅಕ್ಕ ಇದನ್ನು ವಿರೋಧಿಸಿದ್ದರಲ್ಲದೇ ಮನೆಗೆ ಬಾರದಂತೆ ತಾಕೀತು ಮಾಡಿದ್ದಳು. ಆ ಬಳಿಕ ರಫಿಕ್ ಮನೆಯತ್ತ ಸುಳಿದಿರಲಿಲ್ಲ.
ಯಲ್ಲಾಪುರ ರಂಜಿತಾ ಹತ್ಯೆ ಮಾಡಿ ಪರಾರಿಯಾಗಿದ್ದ ರಫಿಕ್ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ
WhatsApp Group
Join Now