ಪಾಣಿಪತ್ : ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂದು ಮಹಿಳೆಯೊಬ್ಬಳು 4 ಮಕ್ಕಳನ್ನು ಹತ್ಯೆಗೈದ ಆಘಾತಕಾರಿ (Shocking) ಘಟನೆ ಹರಿಯಾಣದ ಪಾಣಿಪತ್‌ನ ಹಳ್ಳಿಯೊಂದರಲ್ಲಿ ನಡೆದಿದೆ.
ಪೂನಂ ಬಂಧಿತ ಆರೋಪಿಯಾಗಿದ್ದು, ಹರಿಯಾಣದ ಪಾಣಿಪತ್‌ನಲ್ಲಿ ಪೊಲೀಸರು ಪೂನಂಳನ್ನು 4 ಮಕ್ಕಳನ್ನು ನೀರಿನ ಟ್ಯಾಂಕ್‌ಗಳಲ್ಲಿ ಮುಳುಗಿಸಿ ಕೊಂದ ಆರೋಪದ ಮೇಲೆ ಬಂಧಿಸಿದ್ದಾರೆ.
2023ರಲ್ಲಿ ಸೋನಿಪತ್‌ನ ಬೋಹಾದ್ ಗ್ರಾಮದಲ್ಲಿ ತನ್ನ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದಾದ ನಂತರ ಯಾರೂ ಅನುಮಾನ ಪಡಬಾರದು ಎಂದು ತಪ್ಪಿಸಿಕೊಳ್ಳಲು ತನ್ನ ಸ್ವಂತ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ ಎಂದು ವರದಿಯಾಗಿದೆ.
ಪ್ರತಿಯೊಂದು ಸಾವುಗಳು ಒಂದೇ ರೀತಿಯಲ್ಲಿ ನಡೆದಿದ್ದು, ಮಕ್ಕಳು ಆಳವಿಲ್ಲದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಒಂದು ಪ್ರಕರಣದಲ್ಲಿ, ಬಳಸಿದ ಟಬ್ ಕೇವಲ ಒಂದು ಅಡಿ ಆಳವಿದ್ದು, ಮಗುವಿನ ಎತ್ತರವನ್ನು ಗಮನಿಸಿ ತನಿಖೆ ಆರಂಭಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ್ದು ಹೇಗೆ?
ನೌಲ್ತಾ ಗ್ರಾಮದಲ್ಲಿ ಇತ್ತೀಚೆಗೆ 6 ವರ್ಷದ ಬಾಲಕಿಯ ಸಾವಿನ ನಂತರ ತನಿಖೆ ನಡೆಸಲಾಯಿತು. ಇದನ್ನು ಆರಂಭದಲ್ಲಿ ಆಕಸ್ಮಿಕವೆಂದು ಭಾವಿಸಲಾಗಿತ್ತು, ಆದರೆ ನಂತರ ನೀರಿನಲ್ಲಿ ಮುಳುಗಿದ ಸಂದರ್ಭಗಳಿಂದಾಗಿ ಅನುಮಾನ ಹುಟ್ಟುಹಾಕಿದ್ದು, ಆಕೆಯ ಅತ್ತೆಯೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಕೊಲೆ ನಡೆದಿದ್ದು ಹೇಗೆ?
ಸೋನಿಪತ್ ನಿವಾಸಿ 6 ವರ್ಷದ ವಿಧಿ ತನ್ನ ಕುಟುಂಬಸ್ಥರೊಂದಿಗೆ ಹರಿಯಾಣದ ಪಾಣಿಪತ್‌ನ ಸ್ರಾನಾ ಪ್ರದೇಶದ ನೌಲ್ತಾ ಗ್ರಾಮದ ಸಂಬಂಧಿಕರ ಮದುವೆಗೆ ಬಂದಿದ್ದಳು. ವಿಧಿ ನೋಡಲು ಸುಂದರವಾಗಿದ್ದಳು. ಇದರಿಂದಾಗಿ ಸೋನಂಗೆ ತನ್ನ ಅತ್ತಿಗೆಯ ಮಗಳಾದ ವಿಧಿಯ ಮೇಲೆ ಅಸೂಯೆ ಬಂದಿದೆ.
ಮದುವೆ ಮೆರವಣಿಗೆ ನೌಲ್ತಾಗೆ ಬಂದಾಗ ಎಲ್ಲರೂ ಮದುವೆ ಸಂಭ್ರಮದಲ್ಲಿ ತೊಡಗಿರುವುದನ್ನು ಪೂನಂ ಗಮನಿಸಿದ್ದಾಳೆ. ಅದಾದ ಬಳಿಕ ವಿಧಿಯನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿ ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.
ಸ್ವಲ್ಪ ಸಮಯದ ನಂತರ, ವಿಧಿ ಕಾಣೆ ಆಗಿದ್ದರಿಂದ ಕುಟುಂಬಸ್ಥರು ಅವಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಸುಮಾರು ಒಂದು ಗಂಟೆಯ ನಂತರ, ಆಕೆಯ ಅಜ್ಜಿ ತಮ್ಮ ಸಂಬಂಧಿಕರ ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್ ರೂಂಗೆ ಹೋಗಿದ್ದಾರೆ. ಸ್ಟೋರ್ ರೂಂ ಬಾಗಿಲು ಹೊರಗಿನಿಂದ ಚಿಲಕ ಹಾಕಲಾಗಿತ್ತು. ಅವಳು ಅದನ್ನು ತೆರೆದಾಗ, ವಿಧಿಯ ತಲೆ ನೀರಿನ ಟಬ್‌ನಲ್ಲಿ ಮುಳುಗಿ ಕಾಲುಗಳು ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.
ಮಗುವನ್ನು ಎನ್‌ಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ವಿಧಿ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಯ ಹಿನ್ನೆಲೆಯಲ್ಲಿ ವಿಧಿಯ ತಂದೆ ಎಫ್‌ಐಆರ್ ದಾಖಲಿಸಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ವೇಳೆ ಪೂನಂ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಪೂನಂ ತನಗಿಂತ ಹೆಚ್ಚು ಸುಂದರ ಹುಡುಗಿಯರನ್ನು ಗುರಿಯಾಗಿಸಿಕೊಂಡು ಕೊಲ್ಲುತ್ತಿದ್ದಳು. ಅಪರಾಧಗಳನ್ನು ಮಾಡಿದ ನಂತರ, ಮಹಿಳೆ ಸಂಭ್ರಮಿಸುತ್ತಿದ್ದಳು ಎನ್ನಲಾಗಿದೆ.
ನೀರಿನಲ್ಲಿ ಮುಳುಗಿಸಿ ತನ್ನ ಪುತ್ರ ಸೇರಿ ನಾಲ್ವರು ಮಕ್ಕಳನ್ನು ಹತ್ಯೆಗೈದ ಮಹಿಳೆ.!
WhatsApp Group
Join Now