ಇತ್ತೀಚಿನ ಕಾಲದಲ್ಲಿ ಆಸ್ತಿಗಳ ಹಂಚಿಕೆಗೆ ಸಂಬಂಧಪಟ್ಟಂತೆ ಅನೇಕ ತಕರಾರುಗಳು ನಡೆಯುತ್ತಿದೆ. ತಂದೆ ತಾಯಿ ಮಾಡಿಟ್ಟ ಆಸ್ತಿಯಲ್ಲಿ ಅಥವಾ ಪೂರ್ವಜರು ಮಾಡಿಟ್ಟ ಆಸ್ತಿಯಲ್ಲಿ ಗಂಡಿಗೆ ಎಷ್ಟು ಪಾಲು.? ಹೆಣ್ಣಿಗೆ ಎಷ್ಟು ಪಾಲು.? ಈ ರೀತಿಯ ಅನೇಕ ಸಮಸ್ಯೆಗಳು ಇಂದಿಗೂ ಕೂಡ ಕೋರ್ಟ್ ಮೆಟ್ಟಿಲೇರುತ್ತಿದೆ. ಇದರ ನಡುವೆ ಸಾಕಷ್ಟು ಹೆಣ್ಣು ಮಕ್ಕಳಿಗೆ ತಮ್ಮ ತಂದೆ ಅಥವಾ ತಾಯಿಯ ಆಸ್ತಿಯಲ್ಲಿ ನಮಗೆ ಮದುವೆ ಆದ ನಂತರ ಎಷ್ಟು ವರ್ಷಗಳ ಕಾಲ ಹಕ್ಕಿರುತ್ತೆ ಅನ್ನುವ ಪ್ರಶ್ನೆ ಕೂಡ ಕಾಡ್ತಾ ಇದೆ.
ಹಾಗಾದರೆ ಮಗಳಿಗೆ ಮದುವೆಯನ್ನ ಮಾಡಿಕೊಟ್ಟ ನಂತರ ತಂದೆ ಅಥವಾ ತಾಯಿಯ ಆಸ್ತಿಯಲ್ಲಿ ಆಕೆಗೆ ಎಷ್ಟು ವರ್ಷಗಳ ಕಾಲ ಹಕ್ಕು ಇರುತ್ತದೆ. ಮಗಳ ಆಸ್ತಿಗೆ ಸಂಬಂಧಪಟ್ಟಂತೆ 1956ರ ಹಿಂದೂ ಉತ್ತರಾಧಿಕಾರ ಕಾಯ್ದೆ ಹೇಳುವುದೇನು.? ಇವೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಭಾರತದ ಹಿಂದೂ ಉತ್ತರಾಧಿಕಾರ ಕಾಯ್ದೆ ಅಂದರೆ 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಂದೆ ತಾಯಿಯ ಆಸ್ತಿಯಲ್ಲಿ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಹಕ್ಕಿರುತ್ತದೆ. ಅದೇ ರೀತಿಯಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ತಂದೆ ಅಥವಾ ತಾಯಿ ತಮ್ಮ ಸ್ವಂತ ಹಣದಲ್ಲಿ ಆಸ್ತಿಯನ್ನ ಖರೀದಿ ಮಾಡಿದ್ದರೆ, ಆ ಆಸ್ತಿಯಲ್ಲಿ ಕೂಡ ಮಹಿಳೆಯರಿಗೆ ಸಮಾನವಾದ ಪಾಲು ಇರುತ್ತದೆ. ಅಂದರೆ ತಂದೆ ಅಥವಾ ತಾಯಿಯ ಆಸ್ತಿಯಲ್ಲಿ ಮಗಳು ಸಮಾನವಾದ ಹಕ್ಕನ್ನ ಪಡೆದುಕೊಂಡಿರುತ್ತಾಳೆ.
ಹಿಂದಿನ ಕಾಲದಲ್ಲಿ ಮಗಳಿಗೆ ಮದುವೆಯನ್ನ ಮಾಡಿಕೊಡುವ ಸಮಯದಲ್ಲಿ ವರದಕ್ಷಿಣೆಯನ್ನ ನೀಡಲಾಗುತಿತ್ತು. ಅಷ್ಟೇ ಅಲ್ಲದೇ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನುವ ಮಾತಿನಂತೆ ಮಗಳನ್ನ ಮದುವೆ ಮಾಡಿಕೊಟ್ಟ ನಂತರ ಆಕೆ ತನ್ನ ತಾಯಿಯ ಮನೆಯ ಸಂಬಂಧವನ್ನೇ ಕಳೆದುಕೊಳ್ಳುತ್ತಿದ್ದಳು. ಮಗಳಿಗೆ ಮದುವೆಯನ್ನ ಮಾಡಿಕೊಡುವ ಸಮಯದಲ್ಲಿ ವರದಕ್ಷಿಣೆಯನ್ನ ನೀಡುವ ಕಾರಣ ಆಕೆ ತನ್ನ ತಾಯಿ ಅಥವಾ ತಂದೆಯ ಆಸ್ತಿಯಲ್ಲಿ ಯಾವುದೇ ರೀತಿಯ ಹಕ್ಕನ್ನ ಪಡೆದುಕೊಳ್ಳಲು ಆಗಿನ ಕಾಲದಲ್ಲಿ ಸಾಧ್ಯವಿರಲಿಲ್ಲ. ಆದರೆ ಈಗ ಕಾನೂನಿನಲ್ಲಿ ಬದಲಾವಣೆಯನ್ನ ಮಾಡಲಾಗಿದೆ. ಇನ್ನು ಬದಲಾದ ಕಾನೂನಿನ ಪ್ರಕಾರ ಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಆಸ್ತಿ ಹಂಚಿಕೆ ಈಗ ಹೆಣ್ಣು ಮಕ್ಕಳಿಗೂ ಕೂಡ ಸಿಗಲಿದೆ.
ತಂದೆ ಅಥವಾ ತಾಯಿಯ ಆಸ್ತಿಯಲ್ಲಿ ಅಥವಾ ಪೂರ್ವಾರ್ಜಿತವಾಗಿ ಬಂದ ಆಸ್ತಿಯಲ್ಲಿ ಗಂಡು ಎಷ್ಟು ಪಾಲನ್ನ ಪಡೆದುಕೊಳ್ಳುತ್ತಾನೋ, ಅಷ್ಟೇ ಪಾಲನ್ನ ಹೆಣ್ಣು ಮಗಳು ಕೂಡ ಪಡೆದುಕೊಳ್ಳುತ್ತಾಳೆ. ಈ ನಡುವೆ ಸಾಕಷ್ಟು ಮಹಿಳೆಯರು ಮದುವೆಯಾದ ಎಷ್ಟು ವರ್ಷಗಳವರೆಗೆ ನಮಗೆ ತಂದೆ ಅಥವಾ ತಾಯಿಯ ಆಸ್ತಿಯಲ್ಲಿ ಅಥವಾ ಪೂರ್ವಾರ್ಜಿತರ ಆಸ್ತಿಯಲ್ಲಿ ಹಕ್ಕು ಇರುತ್ತದೆ ಅನ್ನುವ ಪ್ರಶ್ನೆಯನ್ನ ಕೋರ್ಟ್ ಮುಂದೆ ಇಟ್ಟಿದ್ದಾರೆ. ನಮ್ಮ ಭಾರತದಲ್ಲಿ 2005ಕ್ಕೂ ಮೊದಲು ಗಂಡು ಮಕ್ಕಳಿಗೆ ಮಾತ್ರ ಆಸ್ತಿಯಲ್ಲಿ ಪಾಲು ನೀಡಲಾಗುತ್ತಿತ್ತು. ಆದರೆ 2005ರಲ್ಲಿ ಹಿಂದೂ ಉತ್ತರಾಧಿಕಾರ ಕಾನೂನಿನ ಅಡಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಪಾಲು ನೀಡಲಾಗುತ್ತದೆ ಅನ್ನುವ ಹೊಸ ಕಾನೂನನ್ನು ರೂಪಿಸಲಾಗಿತ್ತು.
ಮದುವೆ ಮಾಡಿಕೊಟ್ಟ ಹೆಣ್ಣು ಮಗಳ ಆರ್ಥಿಕ ಪರಿಸ್ಥಿತಿ ಮತ್ತು ಆಕೆಯ ಮುಂದಿನ ಜೀವನದ ಉದ್ದೇಶದಿಂದ ಗಂಡು ಮಕ್ಕಳ ಹಾಗೆ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಸರಿಯಾದ ಪಾಲು ನೀಡಬೇಕು ಅನ್ನುವ ಕಾನೂನನ್ನ 2005ರಲ್ಲಿ ಜಾರಿಗೆ ತರಲಾಗಿತ್ತು. ಇನ್ನು 2005ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಮಗಳನ್ನು ಕೂಡ ಆಸ್ತಿಯ ಸಮಾನ ಉತ್ತರಾಧಿಕಾರಿ ಎಂದು ಪರಿಗಣನೆ ಮಾಡಲಾಗಿದೆ. ಮದುವೆಯ ನಂತರ ಮತ್ತು ಮದುವೆಯ ಮೊದಲು ಆಕೆ ತನ್ನ ತಂದೆ ಅಥವಾ ತಾಯಿಯ ಆಸ್ತಿಯಲ್ಲಿ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಪಾಲನ್ನ ಪಡೆದುಕೊಂಡಿರುತ್ತಾಳೆ. ಅಷ್ಟೇ ಮಾತ್ರವಲ್ಲ, ಮಗಳಿಗೆ ಮದುವೆಯಾಗಿ ಎಷ್ಟೇ ವರ್ಷ ಕಳೆದಿದ್ದರೂ ಕೂಡ ಮಗಳು ತನ್ನ ತಾಯಿ ಅಥವಾ ತಂದೆಯ ಆಸ್ತಿಯಲ್ಲಿ ಅಥವಾ ಪಿತ್ತಾರ್ಜಿತವಾದ ಆಸ್ತಿಯಲ್ಲಿ ಸಮಾನವಾದ ಹಕ್ಕನ್ನು ಪಡೆದುಕೊಂಡಿರುತ್ತಾಳೆ.
ಮದುವೆಯಾದ ಮಗಳಿಗೆ ಆಸ್ತಿ ಕೊಡುವ ನಿಯಮಕ್ಕೆ ಸಂಬಂಧಪಟ್ಟಂತೆ ಯಾವುದೇ ವರ್ಷಗಳ ಮಿತಿ ಇಲ್ಲ. ಮಗನ ಹಾಗೆ ಮಗಳು ಕೂಡ ಯಾವಾಗ ಬೇಕಾದರೂ ತಮ್ಮ ತಂದೆಯ ಆಸ್ತಿಯಲ್ಲಿ ಅಥವಾ ತಾಯಿಗೆ ಆಸ್ತಿಯಲ್ಲಿ ಹಾಗೆ ಪೂರ್ವಾರ್ಜಿತರ ಆಸ್ತಿಯಲ್ಲಿ ಪಾಲನ್ನ ಪಡೆದುಕೊಳ್ಳಬಹುದು. ಇನ್ನು ಕೆಲವು ಬಾರಿ ತಂದೆ ಅಥವಾ ತಾಯಿ ತಮ್ಮ ಸ್ವಂತ ಹಣದಿಂದ ಆಸ್ತಿಯನ್ನು ಖರೀದಿ ಮಾಡಿರುತ್ತಾರೆ. ಆ ಆಸ್ತಿಯಲ್ಲಿ ಮಗಳಿಗೆ ಯಾವುದೇ ಹಕ್ಕು ಇರುವುದಿಲ್ಲ. ಹೌದು, ತಂದೆ ಅಥವಾ ತಾಯಿ ತಮ್ಮ ಸ್ವಂತ ಹಣದಲ್ಲಿ ಆಸ್ತಿಯನ್ನ ಖರೀದಿ ಮಾಡಿದ್ದು, ಆ ಆಸ್ತಿಯನ್ನ ವಿಲ್ ಬರೆದಿಟ್ಟಿದ್ದರೆ ಅಥವಾ ಬೇರೆಯವರ ಹೆಸರಿಗೆ ಬರೆದಿಟ್ಟಿದ್ದರೆ ಅಥವಾ ಮಗನ ಹೆಸರಿಗೆ ಮಾತ್ರ ಬರೆದಿಟ್ಟಿದ್ದರೆ ಆ ಆಸ್ತಿಯಲ್ಲಿ ಮಗಳಿಗೆ ಯಾವುದೇ ಹಕ್ಕು ಇರುವುದಿಲ್ಲ.
ಒಂದುವೇಳೆ ತಂದೆ ಅಥವಾ ತಾಯಿ ಯಾವುದೇ ವಿಲ್ ಬರೆಯದೆ ಸತ್ತರೆ, ತಂದೆ ಅಥವಾ ತಾಯಿ ತಮ್ಮ ಸ್ವಂತ ಹಣದಲ್ಲಿ ಆಸ್ತಿಯನ್ನ ಖರೀದಿ ಮಾಡಿದ್ದು, ಯಾವುದೇ ವಿಲ್ ಮಾಡದೇ ಅವರು ಸತ್ತರೆ, ಮಗನ ಹಾಗೆ ಮಗಳು ಕೂಡ ಸಮಾನವಾದ ಹಕ್ಕನ್ನ ಪಡೆದುಕೊಂಡಿರುತ್ತಾಳೆ. ಇನ್ನು ತಂದೆ ಅಥವಾ ತಾಯಿ ತಮ್ಮ ಸ್ವಂತ ಹಣದಲ್ಲಿ ಆಸ್ತಿಯನ್ನ ಖರೀದಿ ಮಾಡಿದ್ದರೆ ಅದರಲ್ಲಿ ಪಾಲು ಕೇಳುವ ಹಕ್ಕು ಮಗನಿಗೂ ಇರುವುದಿಲ್ಲ ಮತ್ತು ಮಗಳಿಗೂ ಇರುವುದಿಲ್ಲ. ತಂದೆ ಅಥವಾ ತಾಯಿ ತಮ್ಮ ಸ್ವಂತ ಹಣದಲ್ಲಿ ಖರೀದಿ ಮಾಡಿದ ಆಸ್ತಿಯನ್ನ ಇಷ್ಟವಿದ್ದರೆ ಮಾತ್ರ ಮಗ ಅಥವಾ ಮಗಳಿಗೆ ಕೊಡಬಹುದಾಗಿದೆ. ಆದರೆ ತಂದೆ ಅಥವಾ ತಾಯಿಗೆ ಪಿತ್ರಾರ್ಜಿತವಾಗಿ ಆಸ್ತಿ ಬಂದಿದ್ದರೆ ಆ ಆಸ್ತಿಯಲ್ಲಿ ಮಗ ಮತ್ತು ಮಗಳು ಸಮನಾದ ಪಾಲನ್ನ ಪಡೆದುಕೊಳ್ಳಬಹುದಾಗಿದೆ.