ಮೂರು ಬಾರಿ ವಿಷ ಕೊಟ್ಟರೂ ಸಾಯದ ಪತ್ನಿ : ನಾಲ್ಕನೇ ಬಾರಿ ಪ್ಲಾನ್ ಬದಲಿಸಿದ ಗಂಡನಿಗೆ ಕಾದಿತ್ತು ಶಾಕ್.!

Spread the love

ಮುಂಬೈ: ಪತ್ನಿಯನ್ನು ಕೊಲ್ಲಲು ಮೂರು ಬಾರಿ ವಿಷ ಹಾಕಿದರೂ ಅವಳು ಬದುಕುಳಿದಿದ್ದರಿಂದ, ನಾಲ್ಕನೇ ಬಾರಿ ಗಂಡನು ಸಂಚನ್ನು ಬದಲಿಸಿ ಯಶಸ್ವಿಯಾಗಿರುವ ಘಟನೆ ಮಹಾರಾಷ್ಟ್ರದ ಬುಲ್ಲಾನದಲ್ಲಿ ನಡೆದಿದೆ.

ಬುಲ್ಲಾನಾ ನಿವಾಸಿ ಪ್ರಕಾಶ್ ಗವಂಡೆ ಆರೋಪಿ ಪತಿ. ವೃಶಾಲಿ ಮೃತ ಪತ್ನಿ. ಪ್ರಕಾಶ್‌ಗೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ವೃಶಾಲಿ ತನಗಿಂತ ಚೆನ್ನಾಗಿದ್ದಾಳೆ. ಹಲವರು ಆಕೆಯ ಜೊತೆ ಮಾತನಾಡುತ್ತಿದ್ದಾರೆ ಎಂಬುವುದೇ ದೊಡ್ಡ ಸಮಸ್ಯೆಯಾಗಿತ್ತು. ಈ ಮಾತುಕತೆಯನ್ನೇ ಅಕ್ರಮ ಸಂಬಂಧ ಎಂದುಕೊಂಡ ಪ್ರಕಾಶ್‌ಗೆ ಸಂದೇಹಗಳು ಹೆಚ್ಚಾಗುತ್ತಲೇ ಹೋಗಿತ್ತು. ಪತ್ನಿ ಜತೆ ಜಗಳ ಸೇರಿದಂತೆ ಹಲವು ಜಟಾಪಟಿಗಳು ನಡೆದಿದೆ. ಆದರೂ ತನಗೆ ಪತ್ನಿ ಮೇಲೆ ಪ್ರೀತಿ ಇರುವಂತೆ ನಡೆದುಕೊಂಡಿದ್ದಾನೆ.

ಪತ್ನಿ ಮೇಲೆ ಅನುಮಾನ ಹೆಚ್ಚಾಗುತ್ತಿದ್ದಂತೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಪ್ರಕಾಶ್ ಗವಂಡೆ ಬಲವಾಗಿ ನಂಬಿದ್ದ. ಈ ಕಾರಣದಿಂದ ಆರೋಪಿಯು ತನ್ನ ಪತ್ನಿಯನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ನಿರ್ಧರಿಸಿ, ಮೊದಲ ಮೂರು ಸಂದರ್ಭಗಳಲ್ಲಿ ಆಕೆಗೆ ತಿಳಿಯದಂತೆ ಊಟ ಅಥವಾ ಪಾನೀಯದಲ್ಲಿ ವಿಷ ಬೆರೆಸಿದ್ದನು. ಅದೃಷ್ಟವಶಾತ್‌ ಮೂರು ಬಾರಿಯೂ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಳು.

ಪ್ರಯತ್ನಗಳು ವಿಫಲವಾದಾಗ ಪ್ರಕಾಶ್ ತನ್ನ ಹತ್ಯೆಯ ಸಂಚನ್ನು ಬದಲಿಸಿದನು. ನಾಲ್ಕನೇ ಬಾರಿಗೆ ಆಕೆಯನ್ನು ರಸ್ತೆ ಅಪಘಾತದಲ್ಲಿ ಸಾಯಿಸಲು ಸ್ಕೆಚ್ ಹಾಕಿದನು. ಈತ ಸುಪಾರಿ ಪಡೆದ ಕಿಲ್ಲರ್ ಗ್ಯಾಂಗ್‌ಗೆ 1 ಲಕ್ಷ ರೂಪಾಯಿ ಹಣವನ್ನು ನಗದು ರೂಪದಲ್ಲಿ ನೀಡಿದ್ದಾನೆ. ಬಳಿಕ ಆಕೆ ಸ್ಕೂಟ‌ರ್ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಕಾರಿನ ಮೂಲಕ ವೇಗವಾಗಿ ಅಪಘಾತ ಮಾಡಿಸಿ ಸಾಯಿಸುವಲ್ಲಿ ಯಶಸ್ವಿಯಾದನು.

ಮೊದಲು ಇದು ಸಾಮಾನ್ಯ ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ, ಮೊದಲು ನಡೆದ ವಿಷ ಹಾಕುವ ಪ್ರಯತ್ನಗಳು ಮತ್ತು ಪತಿಯ ಈ ಹಿಂದಿನ ನಡವಳಿಕೆಗಳು ಬೆಳಕಿಗೆ ಬಂದವು. ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿ ಪ್ರಕಾಶ್‌ನನ್ನು ಬಂಧಿಸಿದರು.

WhatsApp Group Join Now

Spread the love

Leave a Reply