ಬೆಳಗಾವಿ ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣ ಎಂಬಾತನ ಹೆಂಡತಿ ಲಕ್ಷ್ಮಿ ಸೂಪಣ್ಣ ಕೈಲಾಶ್ ಅಚ್ಚಿತಾಲ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಹಲವು ದಿನಗಳಿಂದ ಈ ಅಕ್ರಮ ಸಂಬಂಧ ಮುಂದುವರೆದಿದ್ದು, ಇನ್ನು ಮುಂದೆ ತಮ್ಮ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆಂದು ಭಾವಿಸಿ ಗಂಡನ್ನೆ ಕೊ*ಲೆ ಗೈದಿರುವ ಘಟನೆ ಬೆಳಗಾವಿ ಆನಗೋಳದ ಬಾಬಲೇ ಗಲ್ಲಿಯಲ್ಲಿ ನಡೆದಿದೆ.
ಲಕ್ಷ್ಮಿಸೂಪಣ್ಣ ಹಾಗೂ ಕೈಲಾಶ್ ಕಳೆದ ಎರಡು ಕಳೆದ ಎರಡು ವರ್ಷಗಳಿಂದ ಕೈಲಾಶ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದರು.ಮೊಬೈಲ್ಗೆ ರಿಚಾರ್ಜ್ ಮಾಡಿಸಲು ಹೋದಾಗ ಒಬ್ಬರಿಗೊಬ್ಬರು ಪೋನ್ ನಂಬರ್ ಶೇರ್ ಮಾಡಿಕೊಂಡಿದ್ದರು. ಕೈಲಾಶ್ ಅವಿನಾಶ ಮನೆಯ ಅಣತಿ ದೂರದಲ್ಲೇ ಮೊಬೈಲ್ ಎಕ್ಸಸರೀಸ್ ಮಳಿಗೆ ಹೊಂದಿದ್ದ ಇದರಿಂದ ಕೊ*ಲೆಯಾದ ಅವಿನಾಶ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಮನೆಯಲ್ಲಿ ಇಲ್ಲದಾಗ ಲಕ್ಷ್ಮಿ ಭೇಟಿಗೆ ಬರುತ್ತಿದ್ದ ಈ ಪರಿಚಯ ಸ್ನೇಹವಾಗಿ ಕಳೆದ ಎರಡು ವರ್ಷಗಳಿಂದ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಶುರುವಾಗಿದೆ. ಗಂಡನಿಗೆ ಅನೈತಿಕ ಗೊತ್ತಾಗುತ್ತಿದ್ದಂತೆ ಪತ್ನಿ,ಆಕೆಯ ಸ್ನೇಹಿತನಿಗೂ ಎಚ್ಚರಿಕೆ ನೀಡಲಾಗಿತ್ತು.
ಇದ್ದರಿಂದ ಕೋಪಗೊಂಡ ಲಕ್ಷ್ಮೀ ಪ್ರೀತಿಸಿ ಮದುವೆಯಾದ ಗಂಡನನ್ನೆ ಕಳೆದ ಒಂದು ತಿಂಗಳಿನಿಂದ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆಗೈಯಲು ಸ್ಕೆಚ್ ಹಾಕಿದ್ದಾಳೆ. ಮಾರ್ಚ್ 6ರಂದು ಸಂಜೆ 4ಕ್ಕೆ ಥೆರಪಿ ಮಸಾಜ್ ಮಾಡಿಸಿಕೊಳ್ಳಲು ಅವಿನಾಶ ಕ್ಲಿನಿಕ್ಗೆ ಪ್ರಿಯಕರ ಕೈಲಾಶ್ ಹೋಗಿದ್ದ. ಹೋಗುವ ಮುನ್ನ ತಂಪುಪಾನಿಯದಲ್ಲಿ ನಿದ್ರೆ ಮಾತ್ರೆ ಬೆರಸಿಕೊಂಡು ಹೋಗಿದ್ದನಂತೆ ಅವಿನಾಶ್ ಮಸಾಜ್ ಆರಂಭಿಸುವ ಮುನ್ನ ಪಾನೀಯ ಕುಡಿಯುವಂತೆ ಕೈಲಾಶ್ ಒತ್ತಾಯಿಸಿದ್ದಾನೆ.
ಬಳಿಕ ಪತಿ ಅವಿನಾಶ್ ತಂಪು ಪಾನೀಯ ಕುಡಿಯುತ್ತಿದ್ದಂತೆ ಕುಸಿದು ಬಿದ್ದಿದ್ದಾನೆ ತಕ್ಷಣ ಪಕ್ಕದಲ್ಲೇ ಇದ್ದ ಸಿಲಿಂಡರ್ನಿಂದ ತಲೆಗೆ ಹಾಗೂ ಎದೆ ಭಾಗಕ್ಕೆ ಹೊಡೆದು ಹ*ತ್ಯೆಗೈಯಲಾಗಿದೆ. ಬಳಿಕ ಪತ್ನಿ ಗಂಡ ಸತ್ತಿದ್ದಾನೋ ಇಲ್ವೋ ಚೆಕ್ ಮಾಡೊದಕ್ಕೆ ವಿಡಿಯೋ ಕಾಲ್ ಮಾಡಿ ಆತ ಇನ್ನೂ ಸತ್ತಿಲ್ಲ ಬದುಕಿದ್ದಾನೆಂದು ಪ್ರಿಯಕರನಿಗೆ ಹೇಳಿ ಸ್ವಲ್ಪ ಹೊತ್ತು ಮೂಗು ಬಿಗಿಹಿಡಿಯುವಂತೆ ಸಲಹೆ ನೀಡಿ ಭೀಕರವಾಗಿ ಕೊ*ಲೆಗೈಯಲಾಗಿದೆ.
ಇನ್ನೂ ಪತಿ ಸಾಯುತ್ತಿದ್ದಂತೆ ಮನೆಗೆ ಬಂದು ಏನು ಗೊತ್ತಿಲ್ಲದಂತೆ ಶುಗರ್ ಹೆಚ್ಚಾಗಿ ಕುಸಿದು ಬಿದ್ದು ತಲೆಗೆ ಪೆಟ್ಟಾಗಿ ಸಾವನಪ್ಪಿರುವ ಬಗ್ಗೆ ಕಥೆ ಕಟ್ಟಿ ಗೋಳಾಡುವಂತೆ ನಾಟಕವಾಡಿದ್ದಾಳೆ. ಆದರೆ ಅವಿನಾಶ ತಾಯಿಗೆ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ತಕ್ಷಣವೇ ಪೊಲೀಸರ ಮೊರೆ ಹೋಗಿ ಪ್ರಕರಣ ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಸಹಜ ಸಾವಲ್ಲ, ಕೊಲೆ ಎಂಬುದು ಸಾಬೀತಾಗಿದ್ದು, ಪೊಲೀಸರ ತಮ್ಮದೇ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರನ್ನು ಟಿಳಕವಾಡಿ ಠಾಣೆ ಪೊಲೀಸರು.ಇಬ್ಬರನ್ನೂ ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.
ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಪತ್ನಿ..! ಕಿಲಾಡಿ ಜೋಡಿ ಸಿಕ್ಕಿಬಿದಿದ್ದೇ ರೋಚಕ
WhatsApp Group
Join Now