ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮೊಟ್ಟೆ ಸಾಂಬರ್ ವಿಚಾರಕ್ಕೆ ನಡೆದ ಕೌಟುಂಬಿಕ ಜಗಳ ಹಿಂಸಾಚಾರದ ರೂಪ ಪಡೆದಿದ್ದು, ಈ ವೇಳೆ ಪತ್ನಿಯೊಬ್ಬರು ತನ್ನ ಪತಿಯ ಮೇಲೆ ಹಲ್ಲೆ ಮಾಡಿ ಆತನ ನಾಲಿಗೆಯನ್ನು ಕಚ್ಚಿ ಕಟ್ ಮಾಡಿ ಶಾಶ್ವತವಾಗಿ ಮೂಗನಾಗಿರುವಂತೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.
ಬೇಗುಮಾಬಾದ್ ಪ್ರದೇಶದ ಸಂಜಯ್ಪುರಿಯಲ್ಲಿ ಸೋಮವಾರ(ಜ. 19) ರಾತ್ರಿ ಈ ಘಟನೆ ನಡೆದಿದೆ. ಪತಿ ವಿಪಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಾಶ್ವತವಾಗಿ ಮೂಖನಾಗಿದ್ದಾನೆ. ವೈದ್ಯರು ಮತ್ತೆ ಶಸ್ತ್ರ ಚಿಕಿತ್ಸೆ ಬಳಿಕವೂ ನಾಲಿಗೆಯನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲ ಎಂದು ಕುಟುಂಸ್ಥರಿಗೆ ತಿಳಿಸಿದ್ದಾರೆ. ಆರೋಪಿ ಪತ್ನಿ ಇಶಾಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದಿದ್ದೇಗೆ?
ಮೋದಿ ನಗರದ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡ್ತಿದ್ದು ವಿಪಿನ್, ತಂದೆ ರಾಮ್ ಅವತಾರ್, ತಾಯಿ ಗೀತಾ ಅವರೊಡನೆ ವಾಸಿಸುತ್ತಿದ್ದನು. 2025ರಲ್ಲಿ ಮೀರತ್ ಇಶಾಳನ್ನು ಮದುವೆಯಾದ ಬಳಿಕ ಮನೆ ಚಿಕ್ಕದಾದ ಕಾರಣ ಮನೆಯ ಮಹಡಿಯಲ್ಲೇ ಇನ್ನೊಂದು ರೂಮ್ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು.
ಸೋಮವಾರ ರಾತ್ರಿ ಇಶಾ ಅಡುಗೆಗೆ ಮೊಟ್ಟೆ ಸಾಂಬರ್ ಮಾಡಿದ್ದು, ಕೆಲಸ ಮುಗಿಸಿಕೊಂಡು 8 ಗಂಟೆ ಸುಮಾರಿಗೆ ಮನೆಗೆ ಬಂದ ವಿಪಿನ್, ನನಗೆ ಪ್ರತಿದಿನ ಮೊಟ್ಟೆ ತಿನ್ನಲು ಸಾಧ್ಯವಿಲ್ಲ. ದಿನ ಮೊಟ್ಟೆ ತಿಂದು ಬೇಸತ್ತಿದ್ದೇನೆ ಎಂದು ಜಗಳವಾಡಿದ್ದಾನೆ. ಈ ವೇಳೆ ಸಿಟ್ಟಿಗೆದ್ದ ಇಶಾ ಚಿಕನ್ ಆರ್ಡರ್ ಮಾಡು ಎಂದು ಬೆಡ್ ಕೆಳಗೆ ಇಟ್ಟಿದ್ದ ಮದ್ಯದ ಬಾಟಲಿ ತೆಗೆದಿದ್ದಾಳೆ. ಈ ವೇಳೆ ವಿಪಿನ್ಗೆ ತನ್ನ ಪತ್ನಿ ಕುಡಿಯುವ ಬಗ್ಗೆ ತಿಳಿದಿದ್ದು ಇಬ್ಬರ ನಡುವೆ ರಾತ್ರಿ 11 ಗಂಟೆ ಸುಮಾರಿಗೆ ಜೋರಾಗಿ ಗಲಾಟೆ ನಡೆದಿದೆ.
ಈ ವೇಳೆ ಇಶಾ, ಪತಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದು, ಬಳಿಕ ಪತಿ ಅವಳನ್ನು ಸಾಮಾಧನ ಮಾಡಿದ್ದಾನೆ.
ಈ ವೇಳೆ ಸಾಮಾಧಾನವಾಗಿರುವಂತೆ ನಟಿಸಿದ ಪತ್ನಿ, ತಕ್ಷಣ ತನ್ನ ಬಾಯಿಯ ಹಲ್ಲಿನಿಂದ ಪತಿಯ ನಾಲಿಗೆಯನ್ನು ಕಚ್ಚಿ ತುಂಡು ಮಾಡಿದ್ದಾಳೆ. ತೀವ್ರಗಾಯಗೊಂಡು ಪತಿ ನೋವಿನಿಂದ ಕಿರುಚಿಕೊಂಡು, ಕೆಳಗಡೆ ಇರುವ ತಂದೆ-ತಾಯಿ ಬಳಿ ಓಡಿ ಬಂದಿದ್ದಾನೆ. ತಕ್ಷಣ ತಂದೆ-ತಾಯಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ತಕ್ಷಣ ನೆರೆಹೊರೆಯವರು ಬಂದು ಇಶಾಳನ್ನು ಹೊಡೆದು ಪೊಲೀಸರಿಗೊಪ್ಪಿಸಿದ್ದಾರೆ. ಕುಟುಂಬಸ್ಥರ ಮುಂದೆ ತಾನೇ ನಾಲಿಗೆ ಕತ್ತಿರಿಸಿದ್ದಾಗೆ ಒಪ್ಪಿಕೊಂಡಿದ್ದಾಳೆ.
ಇನ್ನೂ ಘಟನೆಯ ಕುರಿತು ವಿಪಿನ್ ತಾಯಿ ದೂರು ದಾಖಲಿಸಿದ್ದು, ಸೊಸೆ ಇಶಾ ತಮ್ಮ ಮಗನ ನಾಲಿಗೆಯನ್ನು ಕಚ್ಚಿ ಕತ್ತಿರಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೌಟುಂಬಿಕ ಹಿಂಸಾಚಾರ ಗಂಭೀರ ಗಾಯವನ್ನುಂಟು ಮಾಡಿದ್ದಾಳೆ. ಕಳೆದ ಆರು ತಿಂಗಳಲ್ಲಿ ಅವಳು ನನ್ನ ಮಗನನ್ನು ಹಲವು ಬಾರಿ ಹೊಡೆದಿದ್ದಾಳೆ. ಆ ರಾತ್ರಿ ಅವಳು ಎಲ್ಲಾ ಮಿತಿಗಳನ್ನು ದಾಟಿದ್ದಾಳೆ ಎಂದು ಆರೋಪಿಸಿದ್ದಾರೆ.
ವಿಪಿನ್ ತಾಯಿ ಗೀತಾ ಹೇಳಿದ್ದೇನು?
ಈ ಕುರಿತು ಮಾತನಾಡಿರುವ ವಿಪಿನ್ ತಾಯಿ, ವಿಪಿನ್ ಮತ್ತು ಇಶಾ ಮದುವೆಯಾದ ಒಂದು ತಿಂಗಳೊಳಗೆ ಇಬ್ಬರ ನಡುವೆ ಗಲಾಟೆ ಪ್ರಾರಂಭವಾಯಿತು. ನಾನು ನನಗೆ ಇಷ್ಟ ಬಂದಂತೆ ಬದುಕುತ್ತೇನೆ. ನನ್ನ ವಿರುದ್ಧ ಒಂದೂ ಮಾತಾಡಿದ್ರೂ ನಾನು ಸಹಿಸಲ್ಲ ಅಂತ ಹೇಳಿದ್ದಳು. ಅವಳು ರಹಸ್ಯವಾಗಿ ಸಿಗರೇಟ್ ಮತ್ತು ಮದ್ಯ ಸೇವನೆ ಮಾಡ್ತಿದ್ದಳು. ಇನ್ಸ್ಟಾಗ್ರಾಂ ರೀಲ್ಸ್ ಮಾಡುತ್ತಿದ್ದಳು. ನನ್ನ ಮಗ ಆಕ್ಷೇಪಿಸಿದ್ರೆ ಬಿಟ್ಟು ಹೋಗುವ ಬೆದರಿಕೆ ಹಾಕ್ತಿದ್ದಳು ಎಂದು ಹೇಳಿದ್ದಾರೆ.
ಸೋಮವಾರ ರಾತ್ರಿ ಗಲಾಟೆ ನಡೆದ ಬಳಿಕ ನಮ್ಮ ಬಳಿ ಓಡಿ ಬಂದ, ಬಾಯಲ್ಲಿ ಸೇರಿ ಮೈಯೆಲ್ಲೆಲ್ಲಾ ರಕ್ತವಿತ್ತು. ಅವನಿಗೆ ಮಾತಾಡಲು ಬರಲೇ ಇಲ್ಲ. ಅವನ ಕೈಯಲ್ಲಿದ್ದ ನಾಲಿಗೆಯನ್ನು ನಮಗೆ ತೋರಿಸಿದನು. ಮೊದಲು ಯಾರೋ ಚಾಕು ಹಾಕಿದ್ದಾರೆ ಎಂದು ಭಾವಿಸಿದ್ದೇವು. ಆದರೆ ಇಂತಹ ಘಟನೆ ಎಂದು ನಾವು ಊಹಿಸಿರಲಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.
ವಿಪಿನ್ನನ್ನು ಮೊದಲು ಮೀರತ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಸುಭಾರ್ತಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ವಿಪಿನ್ ಅವರ ನಾಲಿಗೆಯ ಸುಮಾರು 2.5 ಸೆಂಟಿಮೀಟರ್ ಸಂಪೂರ್ಣವಾಗಿ ತುಂಡಾಗಿದೆ. ನಾಲಿಗೆಯನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ.
ಪೊಲೀಸರ ಮುಂದೆ ಇಶಾ ಹೇಳಿದ್ದೇನು?
ವಿಪಿನ್ ತಾಯಿ ದೂರಿನ ಮೇರೆಗೆ ಸೊಸೆ ಇಶಾಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ವಿಪಿನ್ ನಾಲಿಗೆ ಕಚ್ಚಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆದರೆ ಅದು ಕೋಪದ ಭರದಲ್ಲಿ ನಡೆದ ಘಟನೆ ಎಂದು ಹೇಳಿದ್ದಾಳೆ ಎನ್ನಲಾಗಿದೆ. ಜೊತೆಗೆ ನನ್ನ ಪತಿ ಆಗಾಗ್ಗೆ ಮುಚ್ಚಿದ ಬಾಗಿಲುಗಳ ಹಿಂದೆ ತನ್ನನ್ನು ಗದರಿಸುತ್ತಿದ್ದ, ಮದ್ಯಪಾನ ಮಾಡುವುದನ್ನು ಮತ್ತು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದ ಎಂದು ಹೇಳಿದ್ದಾಳೆ.
ಮೊಟ್ಟೆ ಸಾಂಬರ್ ಸಂಬಂಧ ಗಲಾಟೆ; ಪತಿಯ ನಾಲಿಗೆಯನ್ನೇ ಕಚ್ಚಿ ಕಟ್ ಮಾಡಿದ ಪತ್ನಿ ; ಘಟನೆ ಕೇಳಿದ್ರೆ ನೀವೇ ದಂಗಾಗ್ತೀರಾ!
WhatsApp Group
Join Now