ಡಿಸಿಎಂ ಬೆಂಗಳೂರು ನಡಿಗೆ ಕಾರ್ಯಕ್ರಮದದ ವೇಳೆ ಮಹಿಳೆಯೊಬ್ಬರು 6 ತಿಂಗಳಿಂದ ಗೃಹಲಕ್ಷ್ಮಿ ಹಣ ಬರ್ತಿಲ್ಲ ಎಂದು ದೂರಿದ್ರು. ಇದಕ್ಕೆ ಡಿಕೆ ಶಿವಕುಮಾರ್ ಏನ್ ಮಾಡಿದ್ರು ಗೊತ್ತಾ?
ಬೆಂಗಳೂರು ನಾಗರಿಕರ ಸಮಸ್ಯೆ ಆಲಿಸಲು DCM ಡಿಕೆ ಶಿವಕುಮಾರ್ (DCM DK Shivakumar) ಬೆಂಗಳೂರು ನಡಿಗೆ (Bengaluru Nadige) ಕಾರ್ಯಕ್ರಮ ನಡೆಸಿದ್ದಾರೆ. ಇವತ್ತು ಬೆಂಗಳೂರು ಪೂರ್ವ ನಗರ ಪಾಲಿಕೆ ವೆಂಗಯ್ಯ ಇಕೋ ಪಾರ್ಕ್ ಟಿಸಿ ಪಾಳ್ಯ ಕೆಆರ್ ಪುರಂ (KR Puram) ಸುತ್ತಮುತ್ತ ಸುಮಾರು 2 ಕಿಲೋಮೀಟರ್ ನಡಿಗೆ ಕಾರ್ಯಕ್ರಮದಲ್ಲಿ (Program) ಭಾಗಿಯಾಗಿದ್ದ ಡಿಸಿಎಂ ಜನರ ಕುಂದು ಕೊರತೆ ಸಮಸ್ಯೆಗಳನ್ನು ಆಲಿಸಿದ್ರು. ಈ ವೇಳೆ ಮಹಿಳೆಯೊಬ್ಬರು 6 ತಿಂಗಳಿಂದ ಗೃಹಲಕ್ಷ್ಮಿ ಹಣ ಬರ್ತಿಲ್ಲ ಎಂದು ದೂರಿದ್ರು. ಇದಕ್ಕೆ ಡಿಸಿಎಂ ಡಿಕೆಶಿ ಏನ್ ಮಾಡಿದ್ರು ಗೊತ್ತಾ?
ನಡಿಗೆ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಆಲಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಆರು ತಿಂಗಳಿಂದ ಗೃಹ ಲಕ್ಷ್ಮಿ ಹಣ ಬಂದಿಲ್ಲ, ಹಣ ಕೊಡಿಸಿ ಎಂದ ಮಹಿಳೆ, ಫ್ರೀ ಕರೆಂಟ್ ಅಂದ್ರೂ ಈಗ 2 ಸಾವಿರ ರೂ. ಬಿಲ್ ಬರ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಬಳಿ ದೂರು ನೀಡಿದ್ರು.
ತಕ್ಷಣ ಅಧಿಕಾರಿ ಜೊತೆ ಮಾತಾಡಿದ ಡಿಸಿಎಂ
6 ತಿಂಗಳಿಂದ ಗೃಹ ಲಕ್ಷ್ಮಿ ಹಣ ಬಂದಿಲ್ಲ ಎಂದು ಮಹಿಳೆ ಹೇಳ್ತಿದ್ದಂತೆ ತಕ್ಷಣ ಮಹಿಳಾ & ಕಲ್ಯಾಣ ಇಲಾಖೆಗೆ ಜೊತೆ ಮಾತಾಡಿ ಹಣ ಬರ್ತಿದ್ಯಾ ಇಲ್ವಾ ಪರಿಶೀಲಿಸಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ರು.
ಸುಳ್ಳು ಹೇಳಿದ್ದೆ ಸುಳ್ಳು ಎಂದ ಡಿಕೆಶಿ
ಸ್ಟೇಜ್ನಲ್ಲೇ ಅಧಿಕಾರಿಗೆ ಕಾಲ್ ಮಾಡಿ ಗೃಹ ಲಕ್ಷ್ಮಿ ಹಣದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ವಿಚಾರಿಸಿದ್ದಾರೆ. ಬಳಿಕ ಮಹಿಳೆಯೇ ಸುಳ್ಳು ಹೇಳ್ತಾರೆ ಎಂದಿದ್ದಾರೆ. ಅಲ್ಲೇ ಮಹಿಳೆಯ ಮೊಬೈಲ್ ಪಡೆದು ಗೃಹಲಕ್ಷ್ಮಿ ಹಣ ಜಮಾ ಆಗಿರುವ ಮೆಸೇಜ್ ಓದಿದ್ದಾರೆ.
‘ಮಿನಿಸ್ಟರ್ ಲಕ್ಷ್ಮಿನೇ ಸಸ್ಪೆಂಡ್ ಮಾಡ್ತಿದ್ದೇನೆ’
ಏನಮ್ಮ ನಿನ್ ಮಾತು ಕೇಳ್ಕೊಂಡು ಮಿನಿಸ್ಟರ್ ಲಕ್ಷ್ಮಿನೇ ಸಸ್ಪೆಂಡ್ ಮಾಡ್ತಿದ್ದೆ. ಸದ್ಯ ಆಕೆ ಫೋನ್ ಎತ್ತಲಿಲ್ಲ. ಅಧಿಕಾರಿ ಬಳಿ ಕೇಳಿದ್ದೆ ಒಳ್ಳೆದಾಯ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಲಂಚ ಕೇಳಿದ ಅಧಿಕಾರಿ, ಸ್ಥಳದಲ್ಲೇ ಸಸ್ಪೆಂಡ್
ಖಾತ ಮಾಡಿಸೋಕೆ ಲಂಚ ಕೇಳ್ತಿದ್ದಾರೆ ಎಂದು ವ್ಯಕ್ತಿಯೋರ್ವ ಡಿಕೆಶಿ ದೂರು ನೀಡಿದ್ರು. ಹೆಸರು ಕೇಳಿದ ಡಿಕೆ ಶಿವಕುಮಾರ್ ಅವ್ರು. ಸ್ಥಳದಲ್ಲೇ ಅಧಿಕಾರಿಯನ್ನ ಸಸ್ಪೆಂಡ್ ಮಾಡಿದ್ದಾರೆ. ಜಿಬಿಎ ಕಮಿಷನರ್ ಮಹೇಶ್ವರ್ ರಾವ್ ಅವರಿಗೆ ಆತನನ್ನು ಕರೆಸಿ ವಿಚಾರಿಸಿ ನಿಜ ಆದ್ರೆ ಸಸ್ಪೆಂಡ್ ಮಾಡಿ ಎಂದು ಆದೇಶಿಸಿದ್ದಾರೆ.
ಕೆಆರ್ ಪುರಂ ವಿಭಾಗದ ವಿಜಿನಾಪುರ ವಾರ್ಡ್ ನ RI ಬಸವರಾಜು, ARO ಖಾತೆ ಮಾಡಿಸೋಕೆ 15 ಸಾವಿರ ಕೇಳ್ತಾರೆ ಎಂದು ವ್ಯಕ್ತಿಯೋರ್ವ ದೂರು ನೀಡಿದ್ದ. ಆಯ್ತು ಕೂಡಲೇ ಕ್ರಮ ತೆಗೆದುಕೊಳ್ತೀನಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶಾಸಕ ಬೈರತಿ ಬಸವರಾಜು ಕೂಡ ಸಾಥ್ ನೀಡಿದ್ರು. ಕೆಅರ್ ಪುರಂ ಮಾರ್ಕೆಟ್ಗೆ 250 ವರ್ಷಗಳ ಇತಿಹಾಸ ಇದೆ. ಇದುವರೆಗೂ ಕೂಡ ಮಾರ್ಕೆಟ್ ಅಭಿವೃದ್ಧಿ ಆಗಿಲ್ಲ. ಕೆಆರ್ ಪುರಂ ಮಾರ್ಕೆಟ್ ಅಭಿವೃದ್ಧಿ ಮಾಡಿಕೊಡುವಂತೆ ವರ್ತಕರ ಮನವಿ ಮಾಡಿದ್ರು. ಜೊತೆಗೆ KR ಪುರಂ ನಿಂದ ಹೊಸಕೋಟೆ ಮೆಟ್ರೋ ನಿರ್ಮಿಸಿ ಕೊಡಿ ಎಂದು ಡಿಕೆಶಿ ಬಳಿ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಮಿನಿಸ್ಟರ್ ಲಕ್ಷ್ಮಿನೇ ಸಸ್ಪೆಂಡ್ ಮಾಡ್ತಿದ್ದೆ ; ಗೃಹಲಕ್ಷ್ಮಿ ಹಣದ ಬಗ್ಗೆ ಗರಂ ಆಗಿದ್ಯಾಕೆ ಡಿಸಿಎಂ ಡಿಕೆ ಶಿವಕುಮಾರ್?
WhatsApp Group
Join Now