ಪ್ರತಿ ವಿಷಯಗಳನ್ನು ಅಂಗೈನಲ್ಲೇ ತಿಳಿಸುವ ಸಾಮಾಜಿಕ ಜಾಲತಾಣಗಳ ಪ್ರಭಾವವು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಸುಳ್ಳು, ಸಂಬಂಧವಿಲ್ಲ ವಿಷಯ, ವಿಡಿಯೋಗಳು ಹರಿದಾಡಿ ಜನರನ್ನ ದಾರಿತಪ್ಪಿಸಿದ್ದು ಇದೆ. ಇಂತಹ ಸಾಲಿಗೆ ಮತ್ತೊಂದು ವಿಡಿಯೋ ಸೇರಿದೆ.
“ಇನ್ಸ್ಟಾಗ್ರಾಮ್ 19 ನಿಮಿಷಗಳ ವೀಡಿಯೊ’ ಹೆಸರಿನಲ್ಲಿ ವಿಡಿಯೋ ಹರದಾಡಿತ್ತು. ಯುವಕ-ಯುವತಿಯ ಜೋಡಿ ಇರುವ ಫೋಟೋಗೆ ಲಿಂಕ್ ಮಾಡಿ ವೈರಲ್ ಮಾಡಲಾಗಿದೆ.
ಅಲಿಗೆ ವೈರಲ್ ಆಗಿದ್ದ ಯುವಕ-ಯುವತಿಯ ಎಂಎಂಎಸ್ ಗೂ ಹಾಗೂ ಪೊಲೀಸರಿಂದ ಏಟು ತಿನ್ನುತ್ತ ಬರುವ ಯುವಕನಿಗೂ ಸಂಬಂಧವೇ ಇಲ್ಲ ಎಂಬುದು ಸಾಬೀತಾಗಿದೆ. ಇದಕ್ಕು ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ “ಇನ್ಸ್ಟಾಗ್ರಾಮ್ 19 ನಿಮಿಷಗಳ ವೀಡಿಯೊ’ನಲ್ಲಿ ಹುಡುಕಾಟ ನಡೆಸಿದ್ದಾರೆ. ಎಂಎಂಎಸ್ ಹಾಗೂ ಅಹಮದಾಬಾದ್ನಿಂದ ಸಂಬಂಧವಿಲ್ಲದ ವೀಡಿಯೊವನ್ನು ತಪ್ಪಾಗಿ ಹೋಲಿಕೆ ಮಾಡಿದ್ದರಿಂದ ನೆಟ್ಟಿಗರು, ಎಂಎಂಎಸ್ ಫೋಟೋಗಳು, ವೈರಲ್ ವಿಡಿಯೋ ಒಂದೇ ಎಂದು ತಿಳಿದು ಗೊಂದಲಕ್ಕೀಡಾಗಿದ್ದರು.
ಇತ್ತೀಚೆಗೆ ಇನ್ಸ್ಟಾಗ್ರಾಮ್, ಎಕ್ಸ್ ಮತ್ತು ವಾಟ್ಸಾಪ್ನಲ್ಲಿ ಹದಿ ಹರೆಯದ ಯುವಕ-ಯುವತಿ ಇಬ್ಬರು ಹಾಸಿಗೆ ಮೇಲೆ ಕೂತಿದ್ದ ವಿಡಿಯೋ ವೈರಲ್ ಆಗಿತ್ತು. ಅದರೊಂದಿಗೆ ಈ 19 ನಿಮಿಷಗಳ ವಿಡಿಯೋ ಎಂದು ನೆಟ್ಟಿಗರು ಹುಡುಕಾಡಿದ್ದರು. ಆ ಹುಡುಕಾಟದಲ್ಲಿ ಅವರಿಗೆ ಸಿಕ್ಕಿದ್ದು, ಗುಜರಾತ್ನ ಅಹಮದಾಬಾದ್ ವಿಡಿಯೋ…! ಆದರೆ ಈ ವಿಡಿಯೋದಲ್ಲಿನ ಮಾಹಿತಿ ಸುಳ್ಳಾಗಿದೆ. ಯುವತಿಯೊಂದಿಗೆ ಇದ್ದ ಹುಡುಗ ವಿಡಿಯೋದಲ್ಲಿರುವವನಲ್ಲ. ಹುಡುಗನಿಗೆ 19 ನಿಮಿಷಗಳ ಎಂಎಂಎಸ್ಗೆ ವಿಡಿಯೋಗೆ ಸಂಬಂಧವಿಲ್ಲವೆಂದು ಗೊತ್ತಾಗಿದೆ.
ಅಹಮದಾಬಾದ್ ವೀಡಿಯೋದಲ್ಲಿ ಏನಿದೆ?
ಸುಮಾರು ಎಂಟು ತಿಂಗಳ ಹಿಂದಿನ ವಿಡಿಯೋ ಇದಾಗಿದೆ. ಗುಜರಾತ್ನ ಅಹಮದಾಬಾದ್ನ ವಸ್ತ್ರಲ್ ಪ್ರದೇಶದಲ್ಲಿನ ಯುವಕನ ವಿಡಿಯೋ ಇದಾಗಿದೆ. ಆಗ (ಮಾರ್ಚ್ 13) ದುಷ್ಕರ್ಮಿಗಳ ಗುಂಪೊಂದು ಕೋಲುಗಳು ಮತ್ತು ಕತ್ತಿಗಳನ್ನು ಬಳಸಿ ಜನರ ಮೇಲೆ ಹಲ್ಲೆ ನಡೆಸಿದ್ದರು. ಈ ಹಿಂಸಾತ್ಮಕ ಘಟನೆಯಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದರು. ಆಗ ಅಪ್ರಾಪ್ತ ವಯಸ್ಕನೊಬ್ಬನನ್ನು ಬಂಧಿಸಿ ಲಾಠಿಯಲ್ಲಿ ಪೆಟ್ಟು ನೀಡಿದ್ದರು. ಇದನ್ನೆ ವಿಡಿಯೋದಲ್ಲಿ ತೋರಿಸಲಾಗಿದೆ. ಆ ವಿಡಿಯೋವನ್ನೇ 19ನಿಮಿಷಗಳ ವೈರಲ್ ಎಂಎಂಎಸ್ ವಿಡಿಯೋದಲ್ಲಿರುವ ಯುವಕನಿಗೆ ಹೋಲಿಸಲಾಗಿದೆ. ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ಆದರೆ ಇವರೆಡಕ್ಕೂ ಸಂಬಂಧ ಇಲ್ಲ ಎಂದು ಆನ್ಲೈನ್ನಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರೆಂಡ್ನಲ್ಲಿದೆ 19 ನಿಮಿಷಗಳ ವಿಡಿಯೋ ಪ್ರಕರಣ, ಏನಿದು?
ಇನ್ನೂ 22-23 ವರ್ಷ ವಯಸ್ಸಿನ ಈ ಯುವಕ-ಯುವತಿಯ ಜೋಡಿಗೆ ಸಂಬಂಧಿಸಿದ 19 ನಿಮಿಷಗಳ ಎಂಎಂಎಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವರಿಬ್ಬರು ತ್ವರಿತ ಖ್ಯಾತಿ ಗಳಿಸಲು, ಬೇಗ ವೈರಲ್ ಆಗುವ ಉದ್ದೇಶದಿಂದ ಹೀಗೆ ವಿಡಿಯೋ, ಪೋಟೋ ಹರಿಬಿಟ್ಟಿದ್ದಾರೆ ಎಂದು ವರದಿ ಹೇಳುತ್ತವೆ. ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಲಾಗಿಲ್ಲ… ಆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಬೇಕಿದೆ.
ಈ ಜೋಡಿಯ ವಿಚಾರ ಗೊತ್ತಾಗುತ್ತಿದ್ದಂತೆ ಇನ್ಸ್ಟಾಗ್ರಾಮ್, ಎಕ್ಸ್ ಸೇರಿ ಆನ್ಲೈನ್ನಲ್ಲಿ ಬಳಕೆದಾರರು “19 ನಿಮಿಷದ ವಿಡಿಯೋ” ಕೀ ವರ್ಲ್ಡ್ ಹಾಕಿ ಹುಡುಕಾಡಿದ್ದಾರೆ. ಅವರಿಗೆಲ್ಲ ತಪ್ಪು ಮಾಹಿತಿ, ಗುಜರಾತ್ ವಿಡಿಯೋ ಸಿಕ್ಕಿದೆ. ಕೆಲವರಿಗೆ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ. ಯುವಕ ಸಾವಿಗೆ ಶರಣಾಗಿದ್ದಾನೆ ಎಂಬೆಲ್ಲ ಹಳೇಯ ವಿಡಿಯೋಗಳನ್ನು ಎಡಿಟ್ ಮಾಡಿ ಬಿಡಲಾಗಿದೆ. ಇದೆಲ್ಲವು ತಂತ್ರಜ್ಞಾನಗಳ ಸಹಾಯದಿಂದ ಮಾಡಿರುವುದು ಗೊತ್ತಾಗಿದೆ.
ಯುವತಿ ಬಗ್ಗೆ ತಪ್ಪು ಮಾಹಿತಿ
ಇನ್ನು ವೈರಲ್ ಆದ ಎಂಎಂಎಸ್ ನಲ್ಲಿರುವ ಆ ಯುವತಿಯು ಹಾಗೂ ಸಂಬಂಧವೇ ಇಲ್ಲದ ಈ ಇನ್ಸ್ಟಾ ಖಾತೆಯಲ್ಲಿನ (@sweet_zannat_12374) ಯುವತಿಗೆ ಹೋಲಿಕೆ ಮಾಡಿದ್ದಾರೆ. ಈಕೆಯೆ ಆ ಎಂಎಂಎಸ್ನಲ್ಲಿರುವ ಮಹಿಳೆ ಎಂದು ಪ್ರಸಾರ ಮಾಡಿದ್ದರು. ಆದರೆ ಇದು ನಾನಲ್ಲ ಎಂದು ತನ್ನ ಖಾತೆಯಿಂದಲೇ ಸ್ವೀಟ್ ಜನ್ನತ್ ಸ್ಪಷ್ಟಪಡಿಸಿದರು. ಅವರ ವಿಡಿಯೋಗೆ ಕಾಮೆಂಟ್ಗಳ ರಾಶಿ ಹರಿದು ಬಂದಿದ್ದು, ನೋಡ ನೋಡುತ್ತಲೇ ಅವರಿಗೂ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ “19 ನಿಮಿಷಗಳು’ ಸರ್ಚ್ ಕೀ ವರ್ಡ್ ಮೂಲಕ ಬರುವ ಬಳಕೆದಾರರನ್ನು ಫಾಲೋವರ್ಸ್ಗಳಾಗಿ ಮಾಡಿಕೊಳ್ಳಲು ಕೆಲವರು ತಪ್ಪು ಮಾಹಿತಿ, ವಿಡಿಯೋ ಲಿಂಕ್ ಮಾಡಿ ಹಬ್ಬಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತಪ್ಪು ಮಾಹಿತಿ ಹರಿದಾಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
19 ನಿಮಿಷಗಳ ವೈರಲ್ ವಿಡಿಯೋದಲ್ಲಿರುವ ಜೋಡಿ ಇವರೇನಾ! ತಪ್ಪು ವಿಡಿಯೋ ಲಿಂಕ್ ಮಾಡಲಾಯ್ತಾ?
WhatsApp Group
Join Now