ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಲಿನ ಮೊದಲ ಅವಧಿ ಮುಗಿಸಿದ್ದು ಎರಡನೇ ಅವಧಿಯನ್ನು ಡಿಕೆ ಶಿವಕುಮಾರ್ ಅವರಿಗೆ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಅವಕಾಶ ನೀಡದೇ ಇದ್ದರೆ ಆಗ ನಾವು ನಮ್ಮ ಮುಂದಿನ ನಿರ್ಧಾರ ,ನಿಲುವು ಏನು ಎನ್ನುವುದನ್ನು ಹೇಳುತ್ತೇವೆ ಎಂದು ತುಮಕೂರು ಜಿಲ್ಲೆ ಶಿರಾದ ಸ್ಫಟಿಕಪುರಿ ಮಠಾಧೀಶ ನಂಜಾವಧೂತ ಸ್ವಾಮೀಜಿ ಖಡಕ್ ಸಂದೇಶ ನೀಡಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದದ ಬಳಿಕ ಮಾತನಾಡಿದ ಶ್ರೀಗಳು, ಡಿಕೆ ಶಿವಕುಮಾರ್ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಅವರು ಚನ್ನಾಗಿದ್ದಾರೆ, ಅವರ ಸಾಮಾಜಿಕ ಆರೋಗ್ಯವೂ ಸುಧಾರಿಸುತ್ತಿದೆ, ಈಗ ಅವರ ಪಕ್ಷ ಅವರಿಗೆ ಒಂದು ಅವಕಾಶ ಮಾಡಿಕೊಡಬೇಕು, ಅನುಭವದ ಆಧಾರದಲ್ಲಿ ಅವಕಾಶ ನೀಡಬೇಕು, ಅಹಿಂದವನ್ನೂ ಜತೆಯಲ್ಲಿ ತೆಗೆದುಕೊಂಡು ರಾಜಕಾರಣ ಮಾಡಿದ ವ್ಯಕ್ತಿ ಹಾಗಾಗಿ ಅವಕಾಶ ನೀಡಬೇಕು ಎಂದರು.
ಪಕ್ಷ ರಾಜ್ಯದಲ್ಲಿ ಬಹಳ ಸಂಕಷ್ಟದಲ್ಲಿದ್ದಾಗ ತನು,ಮನ, ಧನ ಅರ್ಪಿಸಿ ಎಲ್ಲ ಸವಾಲು ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ, ಮೊದಲು ಸಿದ್ದರಾಮಯ್ಯ ಕೊಟ್ಟಿದ್ದಾರೆ ಈಗ ಡಿಕೆ ಶಿವಕುಮಾರ್ ಗೆ ಅಧಿಕಾರ ಕೊಡಬೇಕು,ಕೆಂಗಲ್ ಹನುಮಂತಯ್ಯ ಅತ್ಯಂತ ಪ್ರಮಾಣಿಕರು,ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು?ದೇವೇಗೌಡರು ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗರಲಿಲ್ಲ, ಪ್ರಧಾನಿ ಮಾಡಿ ಎಂದಿರಲಿಲ, ಅವರನ್ನು ಹೇಗೆ ನಡೆಸಿಕೊಂಡಿತು.ಎಸ್.ಎಂ. ಕೃಷ್ಣ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಅವರನ್ನು ಯಾವ ರೀತಿ ನಡೆಸಿಕೊಂಡಿತು, ಕುಮಾರಸ್ಚಾಮಿ ಯಾರ ಮನೆ ಬಾಗಿಲಿಗೆ ಹೋಗಿರಲಿಲ್ಲ, ಮೋದಿಯೇ ಕರೆ ಮಾಡಿ ಬೇಷರತ್ ಬೆಂಬಲ ನೀನು ಅಧಿಕಾರ ಮಾಡಿ ಎಂದರೂ ಒಪ್ಪದೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಕೇಳಿದರು ಎಂದು ಅವರ ಮೈತ್ರಿಯಲ್ಲಿ ಸಿಎಂ ಆದರು ಅವರನ್ನು ಯಾವ ರೀತಿ ನಡೆಸಿಕೊಂಡರು? ಈ ಎಲ್ಲವನ್ನೂ ಸಮುದಾಯದವರು ಗಮನಿಸಿದ್ದಾರೆ ಆದ್ದರಿಂದ ಇನ್ನೊಂದು ಬಲಿಪಶು ಶಿವಕುಮಾರ್ ಆಗಬಾರದು. ಆ ಪಕ್ಷ ತನ್ನ ಕಳಂಕ ತೊಡೆದುಹಾಕಬೇಕು, ನಾವು ಕೂಡ ಹಿಂದುಳಿದವರೇ ಡಿಕೆ ಅಹಿಂದ ನಾಯಕ ಅವಕಾಶ ನೀಡಿ ಎಂದರು.
ಸಿದ್ದರಾಮಯ್ಯ ಅನುಭವ ಪರಿಗಣಿಸಿ ಅವಕಾಶ ಕೊಟ್ಟಿದ್ದಾರೆ. 7.5 ವರ್ಷ ಸುದೀರ್ಘ ಜನಪರ ಆಡಳಿತ ಕೊಟ್ಟಿದ್ದಾರೆ ಅವರ ನೇತೃತ್ವದಲ್ಲೇ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಸಿದ್ದರಾಮೈ ನೇತೃತ್ವದಲ್ಲೇ ಡಿಕೆ ಶಿವಕುಮಾರ್ ಗೆ ಅವಕಾಶ ನೀಡಬೇಕು.ಅವರಿಗೆ ಅಧಿಕಾರ ಕೊಡುವ ವಿಶ್ವಾಸ ಇದೆ, ಕೊಡದಿದ್ದಾಗ ಮುಂದೇನು ಎಂದು ಆಗ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಖಡಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ಮಠಾಧೀಶರು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಬಾರದು ಎನ್ನುವ ಕೆಎನ್ ರಾಜಣ್ಣ ಮಾತನ್ನು ಸ್ವಾಗತ ಮಾಡಲಿದ್ದೇನೆ, ನಮ್ಮದು ದೊಡ್ಡ ಸಮುದಾಯ, ಸಮುದಾಯದ ಭಾವನೆ ವ್ಯಕ್ತಪಡಿಸಲು ನಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆ ಇದು ಸಮುದಾಯದ ಜನತೆಯ, ಭಕ್ತರ ಭಾವನೆಯೇ ಹೊರತು ನಮ್ಮದಲ್ಲ ಎಂದರು.
ಡಿಕೆ ಶಿವಕುಮಾರ್ ಗೆ ಅಧಿಕಾರ ಕೊಡದಿದ್ದಲ್ಲಿ ಮುಂದೇನು ಎಂದು ನಮ್ಮ ನಿಲುವು ಪ್ರಕಟಿಸುತ್ತೇವೆ : ಖಡಕ್ ಹೇಳಿಕೆ ನೀಡಿದ ನಂಜಾವಧೂತ ಶ್ರೀ
WhatsApp Group
Join Now