ಬೆಂಗಳೂರು (ಡಿ.26) : ನಗರದ ಖಾಸಗಿ ಆಸ್ಪತ್ರೆಯಲ್ಲಿ (Private hospital) ನರ್ಸ್ಗಳು ಬಟ್ಟೆ ಬದಲಿಸುವ ವಿಡಿಯೋ ಸೆರೆ ಹಿಡಿಯುತ್ತಿದ್ದ ಆರೋಪದ ಮೇಲೆ ಸಹೋದ್ಯೋಗಿಯನ್ನ ಪೊಲೀಸರು ಬಂಧಿಸಿದ್ದಾರೆ. ಆಪರೇಷನ್ ಥಿಯೇಟರ್ಗಳಲ್ಲಿ (Operation Theater) ಕೆಲಸ ಮಾಡಲು ಬಟ್ಟೆ ಬದಲಿಸಲು ಹೋಗ್ತಿದ್ದ ನರ್ಸ್ಗಳ ವಿಡಿಯೋಗಳ ಈ ಸೈಕೋಪಾಥ್ ರೆಕಾರ್ಡ್ ಮಾಡ್ತಿದ್ದ ಎನ್ನಲಾಗ್ತಿದೆ. ಆರೋಪಿ ಕೂಡ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ.
ಪ್ರೀತಿ ನಿರಾಕಿಸಿದವಳ ವಿಡಿಯೋ ರೆಕಾರ್ಡ್
ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆ ಆಸ್ಪತ್ರೆಯಲ್ಲಿ ಸೈಕೋಪಾಥ್ ಸಿಬ್ಬಂದಿ ಕಾಟಕ್ಕೆ ನರ್ಸ್ ಬೇಸತ್ತಿದ್ದಾರೆ. ಲವ್ ಮೀ ಅಂತ ಹಿಂದಿದ್ದ ಸಿಬ್ಬಂದಿ ಆಕೆ ಪ್ರೀತಿ ನಿರಾಕರಿಸಿದಳು ಅಂತ ಆಕೆ ಬಟ್ಟೆ ಬದಲಿಸೋ ವಿಡಿಯೋಗಳನ್ನ ಸೆರೆ ಹಿಡಿದು ವಿಕೃತಿ ಮೆರೆದಿದ್ದಾನೆ. ಅಷ್ಟೇ ಅಲ್ಲದೇ ಡ್ರೆಸ್ಸಿಂಗ್ ರೂಮ್ ನಲ್ಲಿ ಇತರ ಮಹಿಳಾ ನರ್ಸ್ ಗಳ ವಿಡಿಯೋ ರೆಕಾರ್ಡ್ ಮಾಡಿರುವ ಆರೋಪ ಕೂಡ ಕೇಳಿ ಬಂದಿದೆ.
ವಿಡಿಯೋ ರೆಕಾರ್ಡ್ ಮಾಡುವಾಗ ಸಿಕ್ಕಿಬಿದ್ದ ಸೈಕೋ
ಲೇಡಿ ನರ್ಸ್ಗಳು ಬಟ್ಟೆ ಬದಲಿಸೋ ವಿಡಿಯೋ ಚಿತ್ರಿಕರಿಸುತ್ತಿದ್ದ ಈ ಸೈಕೋಪಾತ್ ಕೂಡ ಅದೇ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ನಲ್ಲಿ ಕೆಲಸ ಮಾಡ್ತಿದ್ದನಂತೆ. ಆರೋಪಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರಿಕರಿಸುವುದು ನರ್ಸ್ ಗಮನಕ್ಕೆ ಬಂದಿದ್ದು, ತಕ್ಷಣ ಆಕೆ ವೈದ್ಯರಿಗೆ ದೂರು ಕೊಟ್ಟಿದ್ದಾರೆ.
ದೂರಿನನ್ವಯ ಎಫ್‌ಐಆರ್ ದಾಖಲು
ನಾಗರಬಾವಿಯ ಖಾಸಗಿ ಆಸ್ಪತ್ರೆ ವೈದ್ಯ ಡಾ.ಚೇತನ್ ಎಂಬುವವರು ಕೂಡಲೇ ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದೂರಿನನ್ವಯ ಎಫ್‌ಐಆರ್ ಕೂಡ ದಾಖಲಾಗಿದೆ. ಕಳೆದೊಂದು ವರ್ಷದಿಂದ ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಕೆಲಸ ಮಾಡ್ತಿದ್ದ ಆರೋಪಿ.
ಆರೋಪಿಯನ್ನ ಬಂಧಿಸಿದ ಪೊಲೀಸರು
ದೂರು ದಾಖಲಾಗ್ತಿದ್ದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿ ಮೊಹಂತ ಎಂಬಾತನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈತ ಆಸ್ಪತ್ರೆಯಲ್ಲಿ ಓರ್ವ ನರ್ಸ್ನನ್ನ ಲವ್ ಮಾಡ್ತಿದ್ದನಂತೆ ಆದ್ರೆ ಆಕೆ ಪ್ರೀತು ನಿರಾಕರಿಸಿದ್ದಳು. ಆ ಕೋಪಕ್ಕೆ ಈತ ವಿಡಿಯೋ ರೆಕಾರ್ಡ್ ಮಾಡಿಕೊಂಡು ವಿಕೃತಿ ಮೆರೆದಿದ್ದ ಎನ್ನಲಾಗ್ತಿದೆ. ಸದ್ಯ ಅನ್ನ ಪೂರ್ಣೇಶ್ವರಿ ನಗರ ಠಾಣೆ ಪೊಲೀಸುರ ಆರೋಪಿ ವಿಚಾರಣೆ ನಡೆಸುತ್ತಿದ್ದು, ಆರೋಪಿ ತಕ್ಕ ಶಿಕ್ಷೆ ನೀಡುವಂತೆ ಆಸ್ಪತ್ರೆ ನರ್ಸ್ಗಳು ಆಗ್ರಹಿಸಿದ್ದಾರೆ.
ನರ್ಸ್ ಬಟ್ಟೆ ಬದಲಾಯಿಸುವ ವಿಡಿಯೋ ರೆಕಾರ್ಡಿಂಗ್ – ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದ ವಿಕೃತಕಾಮಿ
WhatsApp Group
Join Now