ಗಾಜಿಯಾಬಾದ್ : ಕಾಲ ಕೆಟ್ಟೋಯ್ತು.. ಈ ಕಣ್ಣಲ್ಲಿ ನೋಡಬಾರದ್ದನ್ನೆಲ್ಲಾ ನೋಡೋ ಕಾಲ ಬಂದ್ಬಿಡ್ತು. ಮುರಾದ್‌ನಗರ ಮತ್ತು ಮೀರತ್ ಸೌತ್ ನಡುವೆ ಚಲಿಸುವ ರ‍್ಯಾಪಿಡೋ ರೈಲಿನಲ್ಲಿ ಯುವಕ ಮತ್ತು ಹುಡುಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ತುಣುಕುಗಳು ಎಲ್ಲೆಡೆ ವೈರಲ್ ಆಗಿವೆ.
ನವೆಂಬರ್ 24 ರಂದು ಬಹುತೇಕ ಖಾಲಿ ಕೋಚ್‌ನಲ್ಲಿ ಈ ಘಟನೆ ನಡೆದಿದ್ದು. ಲೈವ್ ಸಿಸಿಟಿವಿ ಫೀಡ್‌ನಿಂದ ಉದ್ಯೋಗಿಯೊಬ್ಬರು ಫೋನ್‌ನಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಮೋದಿ ನಗರ ಉತ್ತರ ನಿಲ್ದಾಣದ ಬಳಿ ಈ ಇಡೀ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ವರದಿಗಳ ಪ್ರಕಾರ, ನಮೋ ಭಾರತ್ ಎಕ್ಸ್‌ಪ್ರೆಸ್ ರೈಲಿನ ಒಂದು ಬೋಗಿಯಲ್ಲಿ ಜನಸಂದಣಿ ಕಡಿಮೆಯಿದ್ದಾಗ, ಯುವಕ ಮತ್ತು ಯುವತಿ ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿದ್ದರು.
ರೈಲಿನೊಳಗೆ ಅಳವಡಿಸಲಾದ ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳು ತಮ್ಮ ಪ್ರತಿಯೊಂದು ಚಲನವಲನವನ್ನು ಸೆರೆಹಿಡಿಯುತ್ತಿವೆ ಎಂಬುದು ಕೂಡಾ ಅವರಿಗೆ ತಿಳಿದಿರಲಿಲ್ಲ. ಈ ಘಟನೆಯ ನಾಲ್ಕು ಪ್ರತ್ಯೇಕ ವೀಡಿಯೊ ತುಣುಕುಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
‘ಯಾವುದೇ ಪ್ರಯಾಣಿಕರಿಂದ ಯಾವುದೇ ದೂರು ಬಂದಿಲ್ಲದ ಕಾರಣ, ನಾವು ಪೊಲೀಸರಿಗೆ ದೂರು ನೀಡಿಲ್ಲ. ಆದರೂ, ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ನಾವು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತೇಬೆ’ ಎಂದು ಎನ್‌ಸಿಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲಿನಲ್ಲೇ ಜೋಡಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದೆ. ಹೀಗಾದರೆ ರೈಲು ಬೋಗಿಗಳ ಒಳಗೆ ಕಣ್ಗಾವಲಿನ ಬಗ್ಗೆ ಸಾಮಾನ್ಯವಾಗಿ ಪ್ರಶ್ನೆಗಳು ಏಳುತ್ತವೆ ಎಂದು ಪ್ರಯಾಣಿಕ ಶ್ರೀಧರ್ ಮಿಶ್ರಾ ಪ್ರಶ್ನಿಸಿದ್ದಾರೆ.
‘ನಮೋ ಭಾರತ್ ಸೇವೆಯು ವಿಶ್ವ ದರ್ಜೆಯ ಸಿಸಿಟಿವಿ ಮತ್ತು ಸುರಕ್ಷತೆಯನ್ನು ಹೊಂದಿದೆ ಎಂದು ಎನ್‌ಸಿಆರ್‌ಟಿಸಿ ಹೇಳುತ್ತದೆ. ಆದರೂ, ಎನ್‌ಸಿಆರ್‌ಟಿಸಿ ಇಂಥಾ ಘಟನೆಯನ್ನ ತಡೆಯುವಲ್ಲಿ ಹೇಗೆ ವಿಫಲವಾಯಿತು? ಈ ರೈಲುಗಳನ್ನು ಜನ ಸಾಮಾನ್ಯರು, ಕುಟುಂಬಸ್ಥರು ಮತ್ತು ಮಕ್ಕಳು ಬಳಸುತ್ತಾರೆ. ಅಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ರೀತಿಯ ಘಟನೆ ಮರುಕಳಿಸದ ರೀತಿ ಎಚ್ಚರಿಕೆ ವಹಿಸಬೇಕು’ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
NCRTC ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡಿದ್ದರೂ ಕೂಡಾ, ಇಂಥಾ ಕಿಡಿಗೇಡಿಗಳಿಗೆ ನೇರವಾಗಿ ದಂಡ ವಿಧಿಸುವ ಅಧಿಕಾರವನ್ನು ಹೊಂದಿಲ್ಲ. ಇಂತಹ ಸಂದರ್ಭಗಳಲ್ಲಿ, ಪೊಲೀಸರಿಗೆ ಮಾಹಿತಿ ನೀಡುವುದು ಕೂಡಾ ತಡವಾಗುತ್ತಿದೆ. ಅಂತಹ ಘಟನೆಗಳು ಅಶ್ಲೀಲತೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬರುತ್ತವೆ. ಆದ್ದರಿಂದ ದೂರು ಕೂಡಾ ದಾಖಲಾಗೋದು ತಡವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ಉದ್ಯೋಗಿಯನ್ನು ವಜಾಗೊಳಿಸಿದ NCRTC
ವಿಡಿಯೋ ವೈರಲ್ ಆದ ತಕ್ಷಣ, NCRTC ಆಡಳಿತವು ಎಚ್ಚೆತ್ತುಕೊಂಡಿದೆ. ತಕ್ಷಣವೇ ಆಂತರಿಕ ತನಿಖೆಯನ್ನು ಪ್ರಾರಂಭಿಸಿತು. ದೃಶ್ಯಗಳನ್ನು ಸೋರಿಕೆ ಮಾಡಿದ ವ್ಯಕ್ತಿಯನ್ನು ಅಧಿಕಾರಿಗಳು ಗುರುತಿಸಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡು, ಆ ಉದ್ಯೋಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ.
ಎಂಥಾ ಕಾಲ ಬಂತಪ್ಪಾ! ರೈಲಿನಲ್ಲಿ ಯುವಕ ಮತ್ತು ಹುಡುಗಿ ಲೈಂಗಿಕ ಕ್ರಿಯೆಯ ವಿಡಿಯೋ ಎಲ್ಲೆಡೆ ವೈರಲ್.!
WhatsApp Group
Join Now