ರಾಜ್ಯ ಸರ್ಕಾರ ಈಗ ಬಾಡಿಗೆ ಮನೆಗಳಿಗೆ ಅಂದರೆ ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಈಗ ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನ ಮಾಡಲು ಮುಂದಾಗಿದ್ದು, ಇದು ಬಾಡಿಗೆ ಮನೆಯಲ್ಲಿ ಇರುವವರ ಮೇಲೆ ನೇರವಾಗಿ ಪರಿಣಾಮವನ್ನ ಬೀರಲಿದೆ. ಬಾಡಿಗೆದಾರರು ಮತ್ತು ಬಾಡಿಗೆ ನಿಯಂತ್ರಣ ಕಾಯ್ದೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಮಾಡಿರುವ ಪ್ರಮುಖ ತಿದ್ದುಪಡಿಗಳು ಯಾವುದು ಎಂದು ನೋಡೋಣ.
ರಾಜ್ಯ ಸರ್ಕಾರ ಈಗ ಬಾಡಿಗೆ ವಿವಾದಗಳನ್ನ ಅಪರಾಧವಲ್ಲ ಅಂತ ಪರಿಗಣನೆ ಮಾಡಿದ್ದು, ದಂಡವನ್ನ 10ರಿಂದ 20 ಪಟ್ಟು ಹೆಚ್ಚಳ ಮಾಡಿದೆ. ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಆಗಿರುವ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಬಾಡಿಗೆದಾರರು ನಿಯಮ ಉಲ್ಲಂಘನೆ ಮಾಡಿದರೆ ಕಡ್ಡಾಯವಾಗಿ ದಂಡವನ್ನ ಪಾವತಿ ಮಾಡಬೇಕು. ಕೇಂದ್ರ ಸರ್ಕಾರದ ಜನವಿಶ್ವಾಸ ಕಾಯ್ದೆ 2025 ಕ್ಕೆ ಅನುಗುಣವಾಗಿ ಈ ಬದಲಾವಣೆಗಳನ್ನ ಮಾಡಲಾಗಿದೆ. ಬಾಡಿಗೆ ನಿಯಂತ್ರಣ ಕಾಯ್ದೆಯ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಮನೆಯನ್ನ ಬಾಡಿಗೆ ಪಡೆಯುವವರು, ಯಾವುದೇ ಕಾರಣಕ್ಕೂ ಬಾಡಿಗೆ ಮನೆಯನ್ನ ಮತ್ತೊಬ್ಬರಿಗೆ ಬಾಡಿಗೆ ಕೊಡುವಂತಿಲ್ಲ. ಇದು ಕಾನೂನು ಪ್ರಕಾರ ಅಪರಾಧವಾಗಿದೆ.
ಅಷ್ಟೇ ಮಾತ್ರವಲ್ಲದೆ ಮನೆಯ ಮಾಲಿಕರು ಬಾಡಿಗೆದಾರರನ್ನ ಕಾನೂನು ಬಾಹಿರವಾಗಿ ಅಥವಾ ಒತ್ತಾಯಪೂರ್ವಕವಾಗಿ ಹೊರಹಾಕುವಂತಿಲ್ಲ. ಅದೇ ರೀತಿಯಲ್ಲಿ ಬಾಡಿಗೆದಾರರು ಆಸ್ತಿಯ ವಿವರಗಳನ್ನ ತಪ್ಪಾಗಿ ಕೊಡುವಂತಿಲ್ಲ. ಇನ್ನು ರಿಯಲ್ ಎಸ್ಟೇಟ್ ಏಜೆಂಟ್ಗಳು ಅಥವಾ ಮಧ್ಯವರ್ತಿಗಳು ಬಾಡಿಗೆ ನಿಯಂತ್ರಣ ಕಾನೂನಿನಲ್ಲಿ ನೊಂದಾವಣೆಯನ್ನ ಮಾಡಿಕೊಳ್ಳಬೇಕು. ಅದೇ ರೀತಿಯಲ್ಲಿ ಹೊಸ ತಿದ್ದುಪಡಿಯ ಪ್ರಕಾರ ಇನ್ನು ಮುಂದೆ ಕರ್ನಾಟಕ ರಾಜ್ಯದಲ್ಲಿ ಮನೆಯ ಮಾಲೀಕರು ಬೇಕಾಬಿಟ್ಟಿ ಬಾಡಿಗೆಯನ್ನ ವಿಧಿಸುವಂತಿಲ್ಲ. ಇನ್ನು ತಿದ್ದುಪಡಿಯ ಪ್ರಕಾರ ಮನೆಯ ಮಾಲೀಕರು ಅಥವಾ ಬಾಡಿಗೆದಾರರು ಸರ್ಕಾರದ ಕಾಯ್ದೆಗಳನ್ನ ಉಲ್ಲಂಘನೆ ಮಾಡಿದರೆ, ಅವರಿಗೆ ದಂಡ ಅಥವಾ ಜೈಲು ಶಿಕ್ಷೆಯನ್ನ ವಿಧಿಸಲಾಗುತ್ತದೆ.
ಇನ್ನು ಹೊಸ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಕುಟುಂಬ ಯಾವುದಾದರೂ ಮನೆಯನ್ನ ಬಾಡಿಗೆ ಪಡೆಯಲು ಬಯಸಿದರೆ, ಅವರು ತಮ್ಮ ಸಂಪೂರ್ಣ ಮಾಹಿತಿಯನ್ನ ಕಡ್ಡಾಯವಾಗಿ ಕೊಡಬೇಕು. ಅದೇ ರೀತಿಯಲ್ಲಿ ಪ್ರತಿ ಮನೆಯ ಮಾಲೀಕರು ಹಾಗೂ ಬಾಡಿಗೆದಾರರು ಬಾಡಿಗೆ ಒಪ್ಪಂದವನ್ನ ಮಾಡಿಕೊಳ್ಳುವುದು ಅತೀ ಕಡ್ಡಾಯವಾಗಿದೆ. ಬಾಡಿಗೆ ಒಪ್ಪಂದದಲ್ಲಿ ಬಾಡಿಗೆದಾರರು ಮತ್ತು ಮಾಲೀಕರ ನಡುವಿನ ಒಪ್ಪಂದವನ್ನ ಸಂಕ್ಷಿಪ್ತವಾಗಿ ವಿವರಿಸಬೇಕು. ಅದೇ ರೀತಿಯಲ್ಲಿ ಬಾಡಿಗೆ ಮೊತ್ತವನ್ನು ಕೂಡ ಒಪ್ಪಂದದಲ್ಲಿ ನಮೂದಿಸಬೇಕು ಅಂತ ಈಗ ಸರ್ಕಾರ ಆದೇಶವನ್ನು ಹೊರಡಿಸಿದೆ.
ರಾಜ್ಯ ಸರ್ಕಾರದ ಈ ನಿಯಮ ಮನೆಯ ಮಾಲೀಕರು ಮತ್ತು ಬಾಡಿಗೆದಾರರಿಗೆ ಅನ್ವಯ ಆಗಲಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮನೆ ಬಾಡಿಗೆಯ ಬೆಲೆ ಬಹಳ ಹೆಚ್ಚಾಗಿದೆ. ಇದು ಬಾಡಿಗೆದಾರರ ಮೇಲೆ ನೇರವಾಗಿ ಪರಿಣಾಮವನ್ನ ಉಂಟು ಮಾಡ್ತಾ ಇದೆ. ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ ಬಾಡಿಗೆ ಒಪ್ಪಂದ ನಿಯಮದಲ್ಲಿ ಬಹುದೊಡ್ಡ ಬದಲಾವಣೆಯನ್ನು ಮಾಡಿದೆ. ರಾಜ್ಯ ಸರ್ಕಾರದ ಈ ಹೊಸ ನಿಯಮ ಬಾಡಿಗೆದಾರರ ಸಂತಸಕ್ಕೆ ಕಾರಣವಾಗಿದೆ.