‘ಎಲ್ಲರಿಗೂ ವಸತಿ’ ಎಂಬ ಭಾರತದ ಮಹತ್ವಾಕಾಂಕ್ಷಿ ಗುರಿಯನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) 2.0 ಅನ್ನು 2024ರ ಸೆಪ್ಟೆಂಬರ್ 1ರಿಂದ ಜಾರಿಗೆ ತಂದಿದೆ. ಈ ಯೋಜನೆಯು ನಗರ ಪ್ರದೇಶದ ಆರ್ಥಿಕವಾಗಿ ದುರ್ಬಲ ವರ್ಗ (EWS), ಕಡಿಮೆ ಆದಾಯ ಗುಂಪು (LIG) ಮತ್ತು ಮಧ್ಯಮ ಆದಾಯ ಗುಂಪು (MIG)ಗಳಿಗೆ ಪಕ್ಕಾ ಮನೆ ನಿರ್ಮಾಣ ಅಥವಾ ಖರೀದಿಗೆ ಆರ್ಥಿಕ ನೆರವು ಒದಗಿಸುತ್ತದೆ.
ಮುಂದಿನ ಐದು ವರ್ಷಗಳಲ್ಲಿ (2024-2029) ಒಟ್ಟು 1 ಕೋಟಿಗೂ ಹೆಚ್ಚು ನಗರ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸುವ ಗುರಿ ಸರ್ಕಾರದಾಗಿದೆ.
ಯೋಜನೆಯ ಉದ್ದೇಶ
ಪಿಎಂಎವೈ-ನಗರ (PMAY-U) 2.0 ಯೋಜನೆಯು 2015ರಲ್ಲಿ ಪ್ರಾರಂಭವಾದ ಮೂಲ ಯೋಜನೆಯ ವಿಸ್ತೃತ ಆವೃತ್ತಿ. ಇದರ ಉದ್ದೇಶ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡವರು ಹಾಗೂ ಮಧ್ಯಮ ವರ್ಗದವರು ಮೂಲಭೂತ ಸೌಕರ್ಯಗಳೊಂದಿಗೆ ಪಕ್ಕಾ ಮನೆ ಹೊಂದುವಂತೆ ನೆರವು ನೀಡುವುದು. ಯೋಜನೆಯಡಿ ಕನಿಷ್ಠ 30 ಚ.ಮೀ. ಕಾರ್ಪೆಟ್ ಪ್ರದೇಶದ ಮನೆ ನಿರ್ಮಾಣ ಕಡ್ಡಾಯವಾಗಿದ್ದು, ರಾಜ್ಯ ಸರ್ಕಾರಗಳು ಅದನ್ನು 45 ಚ.ಮೀ.ವರೆಗೆ ವಿಸ್ತರಿಸಬಹುದು.
ಅರ್ಹತಾ ಮಾನದಂಡಗಳು
ಕುಟುಂಬ ಸಂಯೋಜನೆ:
ಗಂಡ, ಹೆಂಡತಿ ಹಾಗೂ ಅವಿವಾಹಿತ ಮಕ್ಕಳು (ಗಂಡು/ಹೆಣ್ಣು).
ಕುಟುಂಬದ ಯಾರ ಹೆಸರಿನಲ್ಲೂ ಭಾರತದಾದ್ಯಂತ ಪಕ್ಕಾ ಮನೆ ಇರಬಾರದು.
ಆದಾಯದ ಆಧಾರದ ಮೇಲೆ ವರ್ಗೀಕರಣ:
EWS (ಆರ್ಥಿಕ ದುರ್ಬಲ ವರ್ಗ): ₹3 ಲಕ್ಷದವರೆಗೆ
LIG (ಕಡಿಮೆ ಆದಾಯ ಗುಂಪು): ₹3 ಲಕ್ಷ-₹6 ಲಕ್ಷ
MIG (ಮಧ್ಯಮ ಆದಾಯ ಗುಂಪು): ₹6 ಲಕ್ಷ-₹9 ಲಕ್ಷ
ಮನೆ ಕಡ್ಡಾಯವಾಗಿ ಮಹಿಳಾ ಮುಖ್ಯಸ್ಥರ ಹೆಸರಿನಲ್ಲಿ ಅಥವಾ ಗಂಡ-ಹೆಂಡತಿ ಜಂಟಿ ಹೆಸರಿನಲ್ಲಿ ಇರಬೇಕು. ಮಹಿಳಾ ಸದಸ್ಯರಿಲ್ಲದಿದ್ದರೆ ಮಾತ್ರ ಪುರುಷರ ಹೆಸರಿನಲ್ಲಿ ನೋಂದಣಿ ಸಾಧ್ಯ.ಮುಂದಿನ ಐದು ವರ್ಷಗಳಲ್ಲಿ (2024-2029) ಒಟ್ಟು 1 ಕೋಟಿಗೂ ಹೆಚ್ಚು ನಗರ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸುವ ಗುರಿ ಸರ್ಕಾರದಾಗಿದೆ.
ಯೋಜನೆಯ ನಾಲ್ಕು ಪ್ರಮುಖ ಘಟಕಗಳು
1. ಫಲಾನುಭವಿ ನೇತೃತ್ವದ ನಿರ್ಮಾಣ (BLC):
ಸ್ವಂತ ಜಮೀನಿನಲ್ಲಿ ಮನೆ ಕಟ್ಟಲು ಸರ್ಕಾರದಿಂದ ಆರ್ಥಿಕ ನೆರವು.
ಜಮೀನು ಇಲ್ಲದವರಿಗೆ ರಾಜ್ಯ ಸರ್ಕಾರಗಳಿಂದ ಜಮೀನು ಒದಗಿಸುವ ವ್ಯವಸ್ಥೆ.
2. ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ (AHP):
ಖಾಸಗಿ ಅಥವಾ ಸರ್ಕಾರಿ ನಿರ್ಮಾಣ ಯೋಜನೆಗಳಡಿ ಅಗ್ಗದ ಮನೆ ಖರೀದಿಗೆ ಸಹಾಯ.
3. ಕೈಗೆಟುಕುವ ಬಾಡಿಗೆ ವಸತಿ (ARH):
ಬಡವರು, ಮಹಿಳೆಯರು, ಕಾರ್ಮಿಕರಿಗೆ ಬಾಡಿಗೆ ಮನೆ ಸೌಲಭ್ಯ.
4. ಬಡ್ಡಿ ಸಹಾಯಧನ ಯೋಜನೆ (CLSS) :-
• ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ರಿಯಾಯಿತಿ.
• ₹25 ಲಕ್ಷದವರೆಗೆ ಸಾಲ ಪಡೆದರೆ ₹1.80 ಲಕ್ಷದವರೆಗೆ ಬಡ್ಡಿ ಸಹಾಯಧನ (5 ವರ್ಷಗಳಲ್ಲಿ).
ಬಡ್ಡಿ ಸಹಾಯಧನದ ವಿವರ :-
• ಗರಿಷ್ಠ ₹25 ಲಕ್ಷದ ಸಾಲ ಹಾಗೂ ₹35 ಲಕ್ಷದ ಮನೆ ಮೌಲ್ಯ.
• ₹1.80 ಲಕ್ಷದವರೆಗೆ ಬಡ್ಡಿ ಸಹಾಯಧನ, ಐದು ವರ್ಷಗಳಲ್ಲಿ ಹಂತವಾಗಿ ಬಿಡುಗಡೆ.
ಬ್ಯಾಂಕ್ ಬಡ್ಡಿದರ ಕಡಿಮೆಯಾಗುವುದರಿಂದ ಮನೆ ನಿರ್ಮಾಣ ಅಥವಾ ಖರೀದಿ ಸುಲಭ.
ಆದ್ಯತೆ ವರ್ಗಗಳು
ಈ ವರ್ಗಗಳಿಗೆ ವಿಶೇಷ ಪ್ರಾಧಾನ್ಯತೆ:
• ವಿಧವೆಯರು, ಏಕ ಮಹಿಳೆಯರು, ಹಿರಿಯ ನಾಗರಿಕರು, ವಿಕಲಚೇತನರು.
• ಮಂಗಳಮುಖಿಯರು, ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತರು.
• ಸಫಾಯಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ನಿರ್ಮಾಣ ಕಾರ್ಮಿಕರು, ವಿಶ್ವಕರ್ಮ ಯೋಜನೆಯ ಕುಶಲಕರ್ಮಿಗಳು.
• ಅಂಗನವಾಡಿ ಕಾರ್ಯಕರ್ತರು ಹಾಗೂ ಸ್ಲಂ ನಿವಾಸಿಗಳು.
ಹೇಗೆ ಅರ್ಜಿ ಸಲ್ಲಿಸುವುದು.?
• ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ:
https://pmaymis.gov.in/ ಅಥವಾ
https://pmay-urban.gov.in/
• “Apply for PMAY-U 2.0” ಆಯ್ಕೆ ಮಾಡಿ.
• ಸೂಚನೆಗಳನ್ನು ಓದಿ, ಸಂಬಂಧಿತ ಘಟಕ (BLC/AHP/ARH/CLSS) ಆಯ್ಕೆಮಾಡಿ.
• ವಾರ್ಷಿಕ ಆದಾಯ ಮತ್ತು ಕುಟುಂಬ ವಿವರಗಳನ್ನು ನಮೂದಿಸಿ.
• ಆಧಾರ್ ದೃಢೀಕರಣ ನೀಡಿ.
• ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಿ.
• ದೃಢೀಕರಣ ರಸೀದಿ ಡೌನ್ಲೋಡ್ ಮಾಡಿ.
ಬೇಕಾಗುವ ದಾಖಲೆಗಳೇನು.?
• ಆಧಾರ್ ಕಾರ್ಡ್ (ಕಡ್ಡಾಯ)
• ಗುರುತಿನ ಪುರಾವೆ (ಪ್ಯಾನ್ / ವೋಟರ್ ಐಡಿ)
• ವಿಳಾಸ ಪುರಾವೆ (ರೇಷನ್ ಕಾರ್ಡ್ / ವಿದ್ಯುತ್ ಬಿಲ್)
• ಆದಾಯ ಪ್ರಮಾಣಪತ್ರ / ವೇತನ ಸ್ಲಿಪ್ / ITR
• ಬ್ಯಾಂಕ್ ಸ್ಟೇಟ್ಮೆಂಟ್
• ಆಸ್ತಿ ದಾಖಲೆಗಳು (ಇದ್ದರೆ)
• ಜಾತಿ / ಅಂಗವೈಕಲ್ಯ / ವಿಧವೆಯ ಪ್ರಮಾಣಪತ್ರ (ಅಗತ್ಯವಿದ್ದರೆ)
ಪಿಎಂ ಆವಾಸ್ ಯೋಜನೆ 2.0 ಯೋಜನೆ ನಗರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ “ಎಲ್ಲರಿಗೂ ಮನೆ” ಎಂಬ ಕನಸನ್ನು ಸಾಕಾರಗೊಳಿಸುವತ್ತ ಪ್ರಮುಖ ಹೆಜ್ಜೆ. ಸರ್ಕಾರದ ಈ ನವೀಕರಿತ ಯೋಜನೆಯು ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಹಾಗೂ ನಗರಾಭಿವೃದ್ಧಿ ಉದ್ದೇಶಗಳನ್ನು ಒಟ್ಟಾಗಿ ಸಾಧಿಸಲು ಮಾರ್ಗದರ್ಶಕವಾಗಲಿದೆ.
‘PM ಆವಾಸ್ ಯೋಜನೆ’ಯಡಿ ಮನೆ ಕಟ್ಟಲು ಸಿಗಲಿದೆ 25 ಲಕ್ಷ ರೂ. ಸಾಲ.! ಅರ್ಜಿ ಹೇಗೆ ಸಲ್ಲಿಸುವುದು.?
WhatsApp Group
Join Now