ರಾಜ್ಯದಲ್ಲೊಂದು ಘೋರ ದುರಂತ : ಪಾರ್ಟಿಯಲ್ಲಿ `ಸ್ಪಿರೀಟ್’ ಕುಡಿದಿದ್ದ ಇಬ್ಬರು ಯುವಕರು ಸಾವು.!

Spread the love

ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಪಾರ್ಟಿಯಲ್ಲಿ ಸ್ಪಿರೀಟ್ ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಸ್ಪಿರೀಟ್ ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಫೆ.4ರಂದು ಪಾರ್ಟಿಯಲ್ಲಿ ನಾಲ್ವರು ಸ್ನೇಹಿತರ ಸ್ಪಿರೀಟ್ ಕುಡಿದಿದ್ದರು. ಕೂಕನಪಳ್ಳಿಯಲ್ಲಿ ನಾಲ್ಕೈದು ಸ್ನೇಹಿತರು ಕೂಡಿ ಪಾರ್ಟಿ ಮಾಡಿದ್ದರು.

ಪಾರ್ಟಿ ಬಳಿಕ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಿಮ್ಸ್ ನಲ್ಲಿ ಓರ್ವ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಬ್ಬ ಸಾವನ್ನಪ್ಪಿದ್ದಾನೆ. ರಮೇಶ್ ಹೊಸಹಳ್ಳಿ (25) ಹಾಗೂ ಅಮರಯ್ಯ ಹಿರೇಮಠ ಮೃತಪಟ್ಟವರು. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now

Spread the love

Leave a Reply