ಗೀಸರ್ ಬಳಸುವ ಮಂದಿ ಅತೀವ ಎಚ್ಚರಿಕೆ ವಹಿಸಬೇಕು. ಬಿಸಿ ನೀರಿಗಾಗಿ ಬಹುತೇಕರು ಗೀಸರ್ ಬಳಕೆ ಮಾಡುತ್ತಾರೆ. ಆದರೆ ಗೀಸರ್ ಸೋರಿಕೆ ಅತ್ಯಂತ ಅಪಾಯಾಕಾರಿಯಾಗಿದೆ. ಇದೀಗ ಬೆಂಗಳೂರಿನ ಗೋವಿಂದರಾಜನಗರದ ಬಳಿ ಇರುವ ಪಂಚಶೀಲನಗರದ ಗೀಸರ್ ಸೋರಿಕೆಯಿಂದ ತಾಯಿ ಹಾಗೂ 4 ವರ್ಷದ ಮಗು ಮೃತಪಟ್ಟ ಘಟನ ನಡೆದಿದೆ.
ಮಗುವನ್ನು ಸ್ನಾನ ಮಾಡಿಸಲು ತೆರಳಿದಾಗ ಗೀಸರ್ ಸೋರಿಕೆಯಾಗಿರುವುದು ಅರಿವಿಗೆ ಬಂದಿಲ್ಲ. ಇಬ್ಬರು ಕಾರ್ಬನ್ ಡೈಆಕ್ಸೈಡ್ ಗಾಳಿ ಸೇವಿಸಿ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ.
ಮಗುವಿನ ಸ್ನಾಕ್ಕೆ ಗೀಸರ್ ಆನ್ ಮಾಡಿದ್ದ ತಾಯಿ
26 ವರ್ಷದ ಚಾಂದಿನಿ ತನ್ನ ನಾಲ್ಕು ವರ್ಷದ ಮಗು ಯುವಿ ಸ್ನಾನ ಮಾಡಿಸಲು ಗೀಸರ್ ಆನ್ ಮಾಡಿದ್ದರು. ಆದರೆ ಗೀಸರ್ ಸೋರಿಕೆಯಾಗುತ್ತಿರುವುದು ಗೊತ್ತಿರಲಿಲ್ಲ. ಗೀಸರ್ನಿಂದ ಸೋರಿಕೆಯಾದ ಕಾರ್ಬನ್ ಡೈಆಕ್ಸೈಡ್ ಬಾತ್ ರೂಂ ತುಂಬಿಕೊಂಡಿದೆ. ಮಗುವಿನ ಸ್ನಾನ ಮಾಡಿಸಲು ಬಾತ್ ರೂಂ ಒಳ ಹೊಕ್ಕ ತಾಯಿ ಮಗು ಕೆಲವೇ ನಿಮಿಷದಲ್ಲಿ ಅಸ್ವಸ್ಥರಾಗಿದ್ದಾರೆ. ಮಗುವನ್ನು ಎತ್ತಿ ಹೊರಬಂದರೂ ಇಬ್ಬರು ವಿಲವಿಲ ಒದ್ದಾಡಿದ್ದಾರೆ.
WhatsApp Group
Join Now