ಮಂಡ್ಯದಲ್ಲಿ 9 ನೇ ತರಗತಿ ವಿದ್ಯಾರ್ಥಿನಿಗೆ ‘ಲೈನ್’ : ಶಾಲಾ ಬಸ್ ಅಡ್ಡಗಟ್ಟಿದ ಪುಂಡರು ಅರೆಸ್ಟ್

Spread the love

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ವಡ್ಡರಹಳ್ಳಿಯಲ್ಲಿ ಪುಂಡರು ಶಾಲಾ ಬಸ್ ತಡೆದ ಘಟನೆ ನಡೆದಿದೆ. ಬಸ್ ತಡೆದ ಪುಂಡರು ಚಾಲಕನಿಗೆ ಆವಾಜ್ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಡ್ಡರಹಳ್ಳಿ ಗ್ರಾಮದ ಕಿರಣ್ ಮತ್ತು ಗಿರೀಶ್ ಎಂಬ ಯುವಕರು 9 ನೇ ತರಗತಿ ವಿದ್ಯಾರ್ಥಿನಿಗೆ ಲೈನ್ ಹೊಡೆಯುತ್ತಿರುತ್ತಾರೆ. ಬಾಲಕಿಯನ್ನ ಬಸ್ ನಿಂದ ಕೆಳಗೆ ಇಳಿಸುವಂತೆ ಆಗ್ರಹಿಸಿ ಚಾಲಕನಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.

ಪುಂಡರ ಕೃತ್ಯವನ್ನ ಚಾಲಕ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಘಟನೆಗೆ ಸಂಬಂಧಿಸಿದಂತೆ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಿಕ್ಕೇರಿ ಶಾಲೆಯಿಂದ ವಡ್ಡರಹಳ್ಳಿಗೆ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಬಸ್ ಚಾಲಕ ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

WhatsApp Group Join Now

Spread the love

Leave a Reply