ಮೂಡುಬಿದಿರೆ ಕಾಲೇಜಿನ ಮೂವರು ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾ-ರ.! ಆರೋಪಿಗಳ ಬಂಧನ

Spread the love

ಮೂಡುಬಿದಿರೆಯ ಕಾಲೇಜು ವಿದ್ಯಾರ್ಥಿನಿಯ ಮೇಲೆ ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯಾಲಜಿ ಉಪನ್ಯಾಸಕ ಸಂದೀಪ್ ಹಾಗೂ ಅವರಿಗೆ ಬೆಂಗಳೂರಿನಲ್ಲಿ ರೂಮು ಕೊಟ್ಟ ಅನೂಪ್ ಸೇರಿ ಮೂವರೂ ಅತ್ಯಾಚಾರ ಮಾಡಿದ್ದಾರೆ. ಮೊದಲನೆಯದಾಗಿ ವಿದ್ಯಾರ್ಥಿನಿಯ ಸಲುಗೆ ಬೆಳೆಸಿ ನರೇಂದ್ರ ಎಂಬ ಉಪನ್ಯಾಸಕ ಬೆಂಗಳೂರಿಗೆ ಕರೆತಂದು ಅತ್ಯಾಚಾರ ಮಾಡಿದ್ದು, ಈ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಆಕೆಯನ್ನು ಬೆದರಿಸಿ ಮತ್ತಿಬ್ಬರು ಸಮಯ ಸಾಧಿಸಿ ಆಕೆಯನ್ನು ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ.

ಹೌದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಉತ್ತಮ ಜೀವನ ರೂಪಿಸಬೇಕಾದ ಉಪನ್ಯಾಸಕರೇ ವಿದ್ಯಾರ್ಥಿನಿಯನ್ನು ಹುರಿದು ಮುಕ್ಕಿದ ಘಟನೆ ಇದೀಗ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇದೀಗ ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ತಾಯಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಹಿಳಾ ಆಯೋಗದ ರಕ್ಷಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಕರೆದೊಯ್ದು ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದರ ಬೆನ್ನಲ್ಲಿಯೇ ಮೂವರು ಅತ್ಯಾಚಾರಿ ಉಪನ್ಯಾಸಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ,

ಘಟನೆಯ ವಿವರ:

ಮೂಡುಬಿದಿರೆ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ನೋಟ್ಸ್ ನೀಡುವ ನೆಪದಲ್ಲಿ ಫಿಸಿಕ್ಸ್ ಉಪನ್ಯಾಸಕ ನರೇಂದ್ರ ಹತ್ತಿರವಾಗಿದ್ದನು. ಬಳಿಕ ಹಂತ ಹಂತವಾಗಿ ಚಾಟ್ ಮಾಡಿ ಸ್ನೇಹ ಬೆಳಸಿಕೊಂಡಿದ್ದನು. ಇದಾದ ಬಳಿಕ ಯುವತಿಯನ್ನು ತೀರಾ ಸಲುಗೆಗೆ ಬಳಸಿಕೊಂಡು ಬೆಂಗಳೂರಿನ ತನ್ನ ಸ್ನೇಹಿತನ ರೂಮಿಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾನೆ. ನಂತರ, ಈ ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಕಾಲೇಜು ಶಿಕ್ಷಣದಲ್ಲಿ ವ್ಯತ್ಯಾಸ ಉಂಟಾಗಬಹುದೆಂದು ವಿದ್ಯಾರ್ಥಿನಿ ನಡೆದ ವಿಚಾರವನ್ನು ಯಾರಿಗೂ ಹೇಳದೇ ಸುಮ್ಮನಾಗಿ, ನೋವು ಅನುಭವಿದ್ದಳು.

ಇದಾದ ಕೆಲ ದಿನಗಳ ಬಳಿಕ ಬಯೋಲಜಿ ಲೆಕ್ಚರ್ ಸಂದೀಪ್ ಸಹ ಯುವತಿಯನ್ನು ದೈಹಿಕವಾಗಿ ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಆದರೆ, ನೀನು ನರೇಂದ್ರ ಸರ್ ಜೊತೆಗೆ ಖಾಸಗಿಯಾಗಿ ಇರುವ ಫೋಟೊ ಹಾಗೂ ವಿಡಿಯೋ ತನ್ನ ಬಳಿ ಇದೆ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ. ನಂತರ, ನಿನ್ನ ಫೋಟೊ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ರಿಲೀಸ್ ಮಾಡುವುದಾಗಿ ಹಾಗೂ ಕಾಲೇಜಿಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಇದರಿಂದ ತನ್ನ ಜೀವನ ಹಾಳಾಗುವುದೆಂದು ಯುವತಿ ಭಯಗೊಂದು ಉಪನ್ಯಾಸಕ ಸಂದೀಪನಿಗೂ ದೇಹ ಒಪ್ಪಿಸಲು ಮುಂದಾಗಿದ್ದಾಳೆ. ಆಗ ಲೆಕ್ಚರ್ ಸಂದೀಪ್ ಕೂಡ ಅನೂಪ್ ಎಂಬುವವರ ರೂಮಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.

ಇಷ್ಟಕ್ಕೆ ಮುಗಿಯಲಿಲ್ಲ ಕಾಮುಕರ ಅಟ್ಟಹಾಸ:

ವಿದ್ಯಾರ್ಥಿನಿ ಇಬ್ಬರು ಲೆಕ್ಚರ್ ಕೈಗೆ ಸಿಕ್ಕು ನೋವು ಅನುಭವಿಸಿದ್ದರೂ ಕಾಮುಕರ ಅಟ್ಟಹಾಸ ಮಾತ್ರ ಮುಗಿದಿರಲಿಲ್ಲ. ಉಪನ್ಯಾಸಕರಾದ ನರೇಂದ್ರ ಮತ್ತು ಸಂದೀಪನ ಬಳಿಕ ಅವರಿಬ್ಬರಿಗೂ ರೂಮು ಕೊಟ್ಟಿದ್ದ ಅನೂಪ್ ವಿದ್ಯಾರ್ಥಿನಿಯ ಮೇಲೆ ಕಣ್ಣು ಹಾಕುತ್ತಾನೆ. ಯುವತಿಗೆ ನೀನು ನನ್ನೊಂದಿಗೆ ಬರಬೇಕು ಎಂದು ಒತ್ತಾಯ ಮಾಡುತ್ತಾನೆ. ಇದಕ್ಕೊಪ್ಪದಿದ್ದಾಗ ನೀನು ನನ್ನ ರೂಮಿಗೆ ಬಂದಿರೋದು ಸಿಸಿಟಿವಿಯಲ್ಲಿ ಇದೆ. ನನ್ನ ರೂಮಿನೊಳಗೆ ಸಿಸಿಟಿವಿ ಇದೆ. ನೀವು ಮಾಡಿದ್ದೆಲ್ಲವೂ ರೆಕಾರ್ಡ್ ಆಗಿದೆ ಎಂದು ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಅನೂಪನಿಂದಲೂ ಸಹ ಯುವತಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ಇಷ್ಟೆಲ್ಲಾ ನಡೆದರೂ ಕಾಮುಕರು ಇನ್ನೂ ಆಕೆಯನ್ನು ಬಳಕೆ ಮಾಡುವ ಹುನ್ನಾರ ತಿಳಿದ ಸಂತ್ರಸ್ತ ಯುವತಿ ತನ್ನ ಮೇಲಾದ ದುರಂತ ಘಟನೆ ಬಗ್ಗೆ ಪೋಷಕರಿಗೆ ಹೇಳಿಕೊಂಡಿದ್ದಾಳೆ.

ಈ ಘಟನೆ ಬಗ್ಗೆ ದೂರು ನೀಡಲು ಬೆಂಗಳೂರಿಗೆ ಬಂದಿದ್ದ ಪೋಷಕರು ಯುವತಿಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಹಿಳಾ ಆಯೋಗದಲ್ಲಿ ವಿದ್ಯಾರ್ಥಿನಿಗೆ ಕೌನ್ಸಲಿಂಗ್ ನೀಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಾರತಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ. ಈ ವಿದ್ಯಾರ್ಥಿನಿಗೂ ಮುಂಚೆಯೇ ಇದೇ ರೀತಿ ಬೇರೆ ಯಾವುದಾದರೂ ವಿದ್ಯಾರ್ಥಿನಿಯರನ್ನು ಬೆದರಿಸಿ ಅತ್ಯಾಚಾರ ಮಾಡಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

WhatsApp Group Join Now

Spread the love

Leave a Reply