10 ವರ್ಷದ ಬ್ಯಾಂಕ್ ಖಾತೆ ಇದ್ದವರಿಗೆ ದೊಡ್ಡ ಗುಡ್ ನ್ಯೂಸ್ | ಬ್ಯಾಂಕ್ ಖಾತೆ ಹೊಂದಿರುವವರು ತಪ್ಪದೇ ನೋಡಿ

Spread the love

ನೀವು 10 ವರ್ಷಕ್ಕಿಂತ ಹಳೆಯ ಬ್ಯಾಂಕ್ ಖಾತೆಯನ್ನ ಹೊಂದಿದ್ರೆ ಭಾರತೀಯ ರಿಸರ್ವ್ ಬ್ಯಾಂಕ್ ಈಗ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗ ಹಳೆಯ ಖಾತೆಗಳಿಗೆ ಸಂಬಂಧಪಟ್ಟಂತೆ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದ್ದು, ಇನ್ನು ಮುಂದೆ ಬ್ಯಾಂಕ್ ಖಾತೆಯನ್ನು ಹೊಂದಿರುವವರು ಈ ಕೆಲಸಗಳನ್ನ ಬಹಳ ಸುಲಭವಾಗಿ ಮಾಡಿಕೊಳ್ಳಬಹುದು. ಹಾಗಾದ್ರೆ ಹಳೆಯ ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೆ ತಂದಿರುವ ಹೊಸ ಯೋಜನೆ ಯಾವುದು.? ನೋಡೋಣ

ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಕೆಲವು ವರ್ಷಗಳಿಂದ ಬ್ಯಾಂಕ್ ಖಾತೆಯಲ್ಲಿ ಯಾವುದೇ ರೀತಿಯ ವೈವಾಟುಗಳನ್ನ ಮಾಡದೆ ಇದ್ದರೆ ಆತನ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾವಣೆ ಮಾಡಲಾಗುತ್ತೆ. ಈ ಹಿಂದೆ ಬ್ಯಾಂಕ್ ಖಾತೆಯನ್ನ ಹೊಂದಿರುವ ಗ್ರಾಹಕರು ಈ ಹಣವನ್ನ ಕ್ಲೇಮ್ ಮಾಡಿಕೊಳ್ಳಬೇಕು ಅಂತ ಹೇಳಿದ್ರೆ ಸಾಕಷ್ಟು ಸಮಯ ಕಾಯಬೇಕಾಗಿತ್ತು. ಆದರೆ ಇನ್ನು ಮುಂದೆ ಸಾಕಷ್ಟು ಸಮಯ ಕಾಯುವ ಅಗತ್ಯವಿಲ್ಲ.

ಒಂದು ವೇಳೆ ನಿಮ್ಮ ಹಣ ಶಿಕ್ಷಣ ಅಥವಾ ಜಾಗೃತಿ ನಿಧಿಗೆ ವರ್ಗಾವಣೆಯಾಗಿದ್ರೆ ನೀವು ಮತ್ತೊಮ್ಮೆ ಕೆವೈಸಿ ಅಪ್ಡೇಟ್ ಮಾಡಿ ನಿಮ್ಮ ಹಣವನ್ನ ಕ್ಲೈಮ್ ಮಾಡಿಕೊಳ್ಳಬಹುದು. ಕೆವೈಸಿ ಅಪ್ಡೇಟ್ ಮಾಡುವ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ನಿಮ್ಮ ಭಾವಚಿತ್ರವನ್ನ ಕಡ್ಡಾಯವಾಗಿ ನೀಡಬೇಕು.

ನೀವು ಕೆವೈಸಿ ಯನ್ನ ಒಮ್ಮೆ ಅಪ್ಡೇಟ್ ಮಾಡಿದ ನಂತರ ನೀವು ಬಡ್ಡಿ ಸಮೇತವಾಗಿ ಆ ಹಣವನ್ನ ವಾಪಸ್ ಪಡೆದುಕೊಳ್ಳಬಹುದು. ಭಾರತೀಯ ರಿಸರ್ವ್ ಬ್ಯಾಂಕಿನ ಈ ನಿಯಮ ಕೇವಲ ಹಳೆಯ ಬ್ಯಾಂಕ್ ಖಾತೆಯನ್ನ ಹೊಂದಿದ್ದು, ಆ ಬ್ಯಾಂಕ್ ಖಾತೆಯಲ್ಲಿ ಯಾವುದೇ ರೀತಿಯ ವಹಿವಾಟುಗಳನ್ನ ಮಾಡದವರಿಗೆ ಮಾತ್ರ ಅನ್ವಯವಾಗುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮದ ಪ್ರಕಾರ ಯಾವುದಾದರೂ ವ್ಯಕ್ತಿ ಎರಡು ಅಥವಾ ಮೂರು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದು, ಆ ಖಾತೆಯಲ್ಲಿ ಯಾವುದೇ ರೀತಿಯ ವಹಿವಾಟುಗಳನ್ನು ಮಾಡದೆ ಇದ್ದರೆ ಆ ಖಾತೆಯನ್ನ ಕ್ಲೋಸ್ ಮಾಡುವುದು ಬಹಳ ಉತ್ತಮ. ಒಂದು ವೇಳೆ ಬ್ಯಾಂಕ್ ಖಾತೆ ಕ್ಲೋಸ್ ಮಾಡದೆ ಇದ್ದರೆ ಆ ಬ್ಯಾಂಕ್ ಖಾತೆಯ ಹಣವನ್ನ ಕೆಲವು ವರ್ಷಗಳ ನಂತರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ.

WhatsApp Group Join Now

Spread the love

Leave a Reply