ಪರಿಶಿಷ್ಟ ಜಾತಿಗಳ ಮೀಸಲಾತಿ (SC Reservation) ಪರಿಗಣಿಸುವಾಗ ಅವರ ಆದಾಯವನ್ನು ಪರಿಗಣಿಸಬೇಕು ಎಂಬ ತೀರ್ಪಿಗಾಗಿ (Verdict) ತಮ್ಮದೇ ಸಮುದಾಯದ ಜನರಿಂದ ವ್ಯಾಪಕವಾಗಿ ಟೀಕೆಗೆ ಒಳಗಾಗಿದ್ದಾರೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (B.R. Gavai) ಹೇಳಿದ್ದಾರೆ.
ಹಿಂದುಳಿದ ವರ್ಗಗಳ ವಾರ್ಷಿಕ ₹8 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಮೀಸಲಾತಿ ಕೋಟಾದಿಂದ ಹೊರಗಿಡಲ್ಪಡುವ ಸಂಬಂಧ ಅವರು ಈ ಹೇಳಿಕೆ ಉಲ್ಲೇಖಿಸಿದ್ದಾರೆ.
ಡಿ .6 ರಂದು ಮುಂಬೈ ವಿಶ್ವವಿದ್ಯಾಲಯದಲ್ಲಿ ‘ಸಮಾನ ಅವಕಾಶವನ್ನು ಉತ್ತೇಜಿಸುವಲ್ಲಿ ದೃಢೀಕರಣದ ಪಾತ್ರ’ ಕುರಿತು ಉಪನ್ಯಾಸ ನೀಡುವ ವೇಳೆ ಈ ಬಗ್ಗೆ ಮಾತನಾಡಿದ್ದಾರೆ. ನಾನು ದೇಶಾದ್ಯಂತ, ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ. ಪರಿಶಿಷ್ಟ ಜಾತಿಗೆ ಸೇರಿದ ಅನೇಕ ಜನರು ಮುಖ್ಯ ಕಾರ್ಯದರ್ಶಿ ಅಥವಾ ಪೊಲೀಸ್ ಮಹಾನಿರ್ದೇಶಕರು ಅಥವಾ ರಾಯಭಾರಿಗಳು ಮತ್ತು ಹೈಕಮಿಷನರ್ ಗಳಾಗುವುದನ್ನು ನಾನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಮುಖ್ಯ ಕಾರ್ಯದರ್ಶಿಯ ಮಗ ಮತ್ತು ಗ್ರಾಮ ಪಂಚಾಯತ್ ಶಾಲೆಯಲ್ಲಿ ಓದಿದ ಕಾರ್ಮಿಕನ ಮಗನಿಗೆ ಒಂದೇ ಮಾನದಂಡವನ್ನು ಅನ್ವಯಿಸುವುದರಿಂದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತೆಯ ಪರೀಕ್ಷೆಯನ್ನು ಪೂರೈಸಲು ಸಾಧ್ಯವೇ? ಎಂದು ಗವಾಯಿ ಟೀಕಿಸಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ ರೀತಿಯಲ್ಲಿ, ಓರ್ವ ಹತ್ತನೇ ಕಿಲೋಮೀಟರ್‌ನಲ್ಲಿ ಮತ್ತು ಯಾರಾದರೂ ಶೂನ್ಯದಲ್ಲಿ ಇದ್ದರೆ,ಶೂನ್ಯದಲ್ಲಿ ಇದ್ದವನಿಗೆ ಸೈಕಲ್ ಒದಗಿಸಬೇಕು, ಇದರಿಂದ ಆತ ಹತ್ತನೇ ಕಿಲೋಮೀಟರ್ ವರೆಗೆ ವೇಗವಾಗಿ ತಲುಪಬಹುದು. ಆದ್ರೆ ಈಗ ಮೀಸಲಾತಿ ಈ ರೀತಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.
ನನ್ನನ್ನು ಅತಿ ಹೆಚ್ಚು ಟೀಕಿಸಿದವರು ನನ್ನ ಸಮುದಾಯದವರೇ ಆಗಿದ್ದಾರೆ – ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ
WhatsApp Group
Join Now