ಬರ್ತಡೇ ಪಾರ್ಟಿಗೆ ಕರೆದು ಗೆಳೆಯನನ್ನೇ ಕೊಂದರು! ರಾಯಚೂರು ಕೆರೆ ಏರಿ ಮೇಲೆ ಕೊಲೆ

Spread the love

ರಾಯಚೂರಿನ ಮಾವಿನಕೆರೆ ದಂಡೆಯ ಮೇಲೆ ಶುಕ್ರವಾರ ರಾತ್ರಿ ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ಯುವಕನ ಕೊಲೆ ಮಾಡಲಾಗಿದೆ.

ಜಹೀರಾಬಾದ್ ಬಡಾವಣೆ ನಿವಾಸಿ ವಿಶಾಲ (22) ಕೊಲೆಯಾಗಿದ್ದಾನೆ. ಬಸವರಾಜ, ಜನ್ಮದಿನದ ಪಾರ್ಟಿ ಕೊಡಿಸುವುದಾಗಿ ನಂಬಿಸಿ ವಿಶಾಲನನ್ನು ಕರೆಸಿಕೊಂಡಿದ್ದ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಆರೋಪಿಗಳಾದ ಜಹೀರಾಬಾದ್‌ ಬಡಾವಣೆಯ ರಾಜು ಅಲಿಯಾಸ್ ಯೇಸು (19) ಹಾಗೂ ಬಸವರಾಜ (19) ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಓಡಿ ಹೋಗುತ್ತಿದ್ದಾಗ ಡಿವೈಎಸ್‌ಪಿ ಶಾಂತವೀರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸದರ್ ಬಜಾರ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

WhatsApp Group Join Now

Spread the love

Leave a Reply