ಎಫ್ ಡಿ(FD) ಯೋಜನೆಗಿಂತ ಹೆಚ್ಚಿನ ಆದಾಯವನ್ನು ತಂದುಕೊಡುವ ಆರು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನ ತಿಳಿಸಿಕೊಡ್ತೀವಿ. ಈ ಆರು ಸರ್ಕಾರಿ ಯೋಜನೆಯಲ್ಲಿ ನೀವು ಹಣವನ್ನ ಹೂಡಿಕೆ ಮಾಡಿದರೆ ಎಫ್ ಡಿ(FD) ಯೋಜನೆಗಿಂತ ಹೆಚ್ಚಿನ ಆದಾಯವನ್ನ ಪಡೆದುಕೊಳ್ಳಬಹುದು.
ಅಂಚೆ ಕಚೇರಿಯಲ್ಲಿ ಜಾರಿಯಲ್ಲಿರುವ ಮಾಸಿಕ ಆದಾಯ ಯೋಜನೆ :-
ಭಾರತೀಯ ಅಂಚೆ ಕಚೇರಿಯಲ್ಲಿ ಜಾರಿಯಲ್ಲಿರುವ ಮಂತ್ಲಿ ಇನ್ಕಮ್ ಸ್ಕೀಮ್ ನಲ್ಲಿ ನೀವು ಹೂಡಿಕೆಯನ್ನ ಮಾಡಿದ್ರೆ, ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡ 7.4% ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು. ಪೋಸ್ಟ್ ಆಫೀಸ್ನ ಈ ಯೋಜನೆಯು ಐದು ವರ್ಷಗಳ ಯೋಜನೆಯಾಗಿದ್ದು, 1,000 ರೂಪಾಯಿ ಹಣವನ್ನ ಹೂಡಿಕೆ ಮಾಡುವುದರ ಮೂಲಕ ನೀವು ಈ ಯೋಜನೆಯನ್ನ ಆರಂಭಿಸಬಹುದು. ಒಬ್ಬ ವ್ಯಕ್ತಿ ಗರಿಷ್ಠವಾಗಿ 9 ಲಕ್ಷ ರೂಪಾಯವರೆಗೆ ಹಣವನ್ನ ಹೂಡಿಕೆ ಮಾಡಬಹುದು. ಆದರೆ ಜಂಟಿಯಾಗಿ 15 ಲಕ್ಷ ರೂಪಾಯವರೆಗೆ ಹೂಡಿಕೆಯನ್ನ ಮಾಡಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆ :-
ಕೇಂದ್ರ ಸರ್ಕಾರದಿಂದ ಜಾರಿಯಲ್ಲಿರುವ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ನೀವು ಹಣವನ್ನ ಹೂಡಿಕೆ ಮಾಡಿದರೆ ಎಫ್ ಡಿ(FD) ಯೋಜನೆಗಿಂತ ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬಹುದು. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ನೀವು ಹಣವನ್ನ ಹೂಡಿಕೆ ಮಾಡಿದರೆ, ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡ 8.2% ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು.
ಈ ಯೋಜನೆಯು ಐದು ವರ್ಷಗಳ ಯೋಜನೆಯಾಗಿದ್ದು, ಯೋಜನೆ ಮುಕ್ತಾಯವಾದ ನಂತರ ನೀವು ಮತ್ತೆ ಮೂರು ವರ್ಷಗಳವರೆಗೆ ಈ ಯೋಜನೆಯನ್ನ ವಿಸ್ತರಣೆ ಮಾಡಬಹುದು. 60 ವರ್ಷ ಮೇಲ್ಪಟ್ಟವರಿಗಾಗಿ ಈ ಯೋಜನೆ ಜಾರಿಯಲ್ಲಿರುತ್ತೆ. 1000 ದಿಂದ 30 ಲಕ್ಷ ರೂಪಾಯಿಯವರೆಗೆ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ.
ಸುಕನ್ಯ ಸಮೃದ್ಧಿ ಯೋಜನೆ :-
ಪೋಷಕರು ಹೆಣ್ಣು ಮಗುವಿನ ಹೆಸರಿನಲ್ಲಿ ಈ ಸುಕನ್ಯ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದು. ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಶೇಕಡ 8.2% ರಷ್ಟು ಬಡ್ಡಿಯನ್ನು ಕೊಡಲಾಗುತ್ತದೆ. ಕೇಂದ್ರ ಸರ್ಕಾರದ ಈ ಯೋಜನೆಯು 15 ವರ್ಷಗಳ ಯೋಜನೆಯಾಗಿದ್ದು, ಪ್ರತಿವರ್ಷ 250 ರೂಪಾಯಿಯಿಂದ ಒಂದೂವರೆ ಲಕ್ಷ ರೂಪಾಯಿಯವರೆಗೆ ಹೂಡಿಕೆಯನ್ನ ಮಾಡಬಹುದು.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ :-
10 ವರ್ಷ ಮೇಲ್ಪಟ್ಟ ಎಲ್ಲಾ ಭಾರತೀಯ ನಾಗರಿಕರು ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆಯನ್ನ ಮಾಡಬಹುದು. ಕೇಂದ್ರ ಸರ್ಕಾರದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡ 7.7%ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು. ಕನಿಷ್ಠ 1,000 ರೂಪಾಯಿ ಹಣವನ್ನ ಹೂಡಿಕೆ ಮಾಡುವುದರ ಮೂಲಕ ನೀವು ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆಯ ಖಾತೆಯನ್ನು ತೆರೆಯಬಹುದು.
ಸಾರ್ವಜನಿಕ ಭವಿಷ್ಯನಿಧಿ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) :-
ಕೇಂದ್ರ ಸರ್ಕಾರದ ಈ ಪಿಪಿಎಫ್ ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ, ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡ 7.1%ರಷ್ಟು ವಾರ್ಷಿಕ ಬಡ್ಡಿಯನ್ನ ಪಡೆದುಕೊಳ್ಳಬಹುದು. ಯೋಜನೆಯ ಅವಧಿ 15 ವರ್ಷಗಳಾಗಿದ್ದು ನೀವು ವರ್ಷಕ್ಕೆ 500 ರೂಪಾಯಿಯಿಂದ ಒಂದೂವರೆ ಲಕ್ಷ ರೂಪಾಯಿಯವರೆಗೆ ಹೂಡಿಕೆಯನ್ನ ಮಾಡಬಹುದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕವಾಗಿ ಶೇಕಡ 7.1%ರಷ್ಟು ಬಡ್ಡಿಯನ್ನ ಪಡೆದುಕೊಳ್ಳಬಹುದು.
ರಾಷ್ಟ್ರೀಯ ಪಿಂಚಣಿ ಯೋಜನೆ :-
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನೀವು ಹೂಡಿಕೆಯನ್ನ ಮಾಡಿದರೆ ನಿರೀಕ್ಷಿತ ಆದಾಯವನ್ನ ಗಳಿಸಿಕೊಳ್ಳಬಹುದು. ಅಂದರೆ ವಾರ್ಷಿಕವಾಗಿ ಶೇಕಡ 10% ರಿಂದ 14% ವರೆಗೆ ನೀವು ಆದಾಯವನ್ನ ಗಳಿಸಿಕೊಳ್ಳಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆ ಕೇವಲ 60 ವರ್ಷ ವಯಸ್ಸಿನವರೆಗೆ ಮಾತ್ರ ಸೀಮಿತವಾಗಿರುತ್ತದೆ. 18 ವರ್ಷದಿಂದ 70 ವರ್ಷದ ಒಳಗಿನ ಎಲ್ಲಾ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆಯನ್ನ ಮಾಡಬಹುದು.
ರಾಷ್ಟ್ರೀಯ ಪಿಂಚಣಿ ಯೋಜನೆಯು ವಾರ್ಷಿಕ ಕನಿಷ್ಠ ಹೂಡಿಕೆಯ ಮೊತ್ತ 1000 ರೂಪಾಯಿ ಆಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡ 10ರಿಂದ 14% ವರೆಗೆ ರಿಟರ್ನ್ ಅನ್ನ ಪಡೆದುಕೊಳ್ಳಬಹುದು. ಕೇಂದ್ರ ಸರ್ಕಾರದ ಈ ಆರು ಯೋಜನೆಗಳು ತೆರಿಗೆ ಮುಕ್ತವಾಗಿದೆ. ಬ್ಯಾಂಕುಗಳ ಎಫ್ ಡಿ(FD) ಯೋಜನೆಗೆ ಹೋಲಿಕೆಯನ್ನ ಮಾಡಿದರೆ ಕೇಂದ್ರ ಸರ್ಕಾರದ ಈ ಯೋಜನೆಗಳು ಬಹಳ ಲಾಭದಾಯಕವಾಗಿದೆ.
ಬ್ಯಾಂಕ್ FD ಗಿಂತ ಹೆಚ್ಚು ಬಡ್ಡಿ ಸಿಗುತ್ತೆ ಈ ಆರು ಯೋಜನೆಗಳಲ್ಲಿ.! ಯಾವ ಯೋಜನೆ.? ಸಂಪೂರ್ಣ ಮಾಹಿತಿ
WhatsApp Group
Join Now