ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಫ್ಯಾಟಿ ಲಿವರ್ ಸಮಸ್ಯೆಯಿಂದ ಗಂಭೀರವಾಗಿ ಬಳಲುತ್ತಿದ್ದಾರೆ. ವಾಸ್ತವವಾಗಿ ಈ ಲಿವರ್ ಸಮಸ್ಯೆ ಏಕೆ ಬರುತ್ತದೆ ಎಂದು ಕಂಡುಹಿಡಿಯಲು ಸಂಶೋಧನೆ ನಡೆಸಿದಾಗ, ನಂಬಲಾಗದ ಸಂಗತಿಗಳು ಬಹಿರಂಗಗೊಂಡಿವೆ.
ನಾವು ತಿನ್ನುವ ಆಹಾರಗಳಿಂದಲೇ ಇದು ಸಂಭವಿಸುತ್ತದೆ ಎಂದು ತಿಳಿದುಬಂದಿದೆ. ಹಾಗಾದರೆ ಆ ಆಹಾರಗಳು ಯಾವುವು ಎಂಬುದರ ಬಗ್ಗೆ ತಿಳಿಯಿರಿ…
ವ್ಯಾಯಾಮ : ಅನೇಕ ಜನರು ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಇದರಿಂದ ಅವರಿಗೆ ವ್ಯಾಯಾಮ ಮಾಡಲು ಸಮಯವೂ ಇರುವುದಿಲ್ಲ. ಅಲ್ಲದೆ ಕಚೇರಿಗಳಲ್ಲಿ ಕೆಲಸ ಮಾಡುವಾಗ ಅವರು ಕಂಪ್ಯೂಟರ್ಗಳಿಗೆ ಅಂಟಿಕೊಂಡಿರುತ್ತಾರೆ. ಬಿಡುವಿಲ್ಲದ ಜೀವನಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಒಂದೇ ಸ್ಥಳದಲ್ಲಿ ಗಂಟೆಗಟ್ಟಲೇ ಕುಳಿತುಕೊಳ್ಳುವುದರಿಂದ ಇನ್ಸುಲಿನ್ ಹೆಚ್ಚಾಗುತ್ತದೆ ಮತ್ತು ಲಿವರ್ನಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.
ಹಸಿರು ಚಹಾ, ಬ್ಲೂ ಕಾಫಿ : ಬದಲಾಗುತ್ತಿರುವ ಜೀವನಶೈಲಿಯಲ್ಲಿ ಜನರು ಹೊಸ ಅಭ್ಯಾಸಗಳನ್ನ ಕಲಿಯುತ್ತಿದ್ದಾರೆ. ಅನೇಕ ಜನರು ಬೆಳಗ್ಗೆ ಎದ್ದ ತಕ್ಷಣ ಹಸಿರು ಚಹಾ, ಬ್ಲೂ ಕಾಫಿ ಮತ್ತು ಬ್ಲ್ಯಾಕ್ ಕಾಫಿಯನ್ನ ಕುಡಿಯುತ್ತಾರೆ. ತಜ್ಞರ ಪ್ರಕಾರ, ಈ ನೈಸರ್ಗಿಕ ಪೂರಕಗಳನ್ನ ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದು. ಈ ಅಭ್ಯಾಸಗಳು ನಿಮ್ಮ ಲಿವರ್ಗೆ ಹಾನಿ ಮಾಡುತ್ತದೆ ಎಂದು ಅವರು ಹೇಳುತ್ತಾರೆ.
ಜಂಕ್ ಫುಡ್ಸ್ : ಇಂದು ಅನೇಕರು ಹೊರಗೆ ಸಿಗುವ ಜಂಕ್ ಫುಡ್ಗಳನ್ನ ಅತಿಯಾಗಿ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಏಕೆಂದರೆ ಇದರಲ್ಲಿ ಬಹಳಷ್ಟು ಉಪ್ಪು ಇರುತ್ತದೆ. ಇವುಗಳನ್ನ ಅತಿಯಾಗಿ ಸೇವಿಸುವುದರಿಂದ ಲಿವರ್ಗೆ ಹಾನಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಚಿಪ್ಸ್ ಮತ್ತು ಬಟಾಣಿಗಳಂತಹ ಆಹಾರಗಳಲ್ಲಿ ಬಹಳಷ್ಟು ಉಪ್ಪು ಇರುತ್ತದೆ. ಈ ಆಹಾರಗಳು ನಿಮ್ಮ ಲಿವರ್ಗೂ ಒಳ್ಳೆಯದಲ್ಲ. ಆದ್ದರಿಂದ ಅವುಗಳಿಂದ ಸಾಧ್ಯವಾದಷ್ಟು ದೂರವಿರಿ.
ಸಂಸ್ಕರಿಸಿದ ಮಾಂಸಾಹಾರ : ಯಾವುದೇ ಸಂಸ್ಕರಿಸಿದ ಮಾಂಸಾಹಾರವನ್ನ ತಿನ್ನುವುದರಿಂದ ನಿಮ್ಮ ಲಿವರ್ಗೆ ಹಾನಿಯಾಗಬಹುದು. ಏಕೆಂದರೆ ಇದರಲ್ಲಿ ಬಹಳಷ್ಟು ಉಪ್ಪು ಇರುತ್ತದೆ. ಈ ಮಾಂಸದಲ್ಲಿರುವ ನೈಟ್ರೇಟ್ಗಳು ಲಿವರ್ಗೆ ಹಾನಿ ಮಾಡುತ್ತವೆ. ಈ ಸಂಸ್ಕರಿಸಿದ ಆಹಾರವನ್ನ ತಿನ್ನುವುದರಿಂದ ಫ್ಯಾಟಿ ಲಿವರ್ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Kannada News Time ಇದನ್ನು ದೃಢಪಡಿಸುವುದಿಲ್ಲ.)
ಫ್ಯಾಟಿ ಲಿವರ್ ಕಾಯಿಲೆಗೆ ಈ ಕೆಟ್ಟ ಅಭ್ಯಾಸಗಳೇ ಕಾರಣ: ಮದ್ಯಪಾನಕ್ಕಿಂತಲೂ ತುಂಬಾ ಡೇಂಜರ್..!
WhatsApp Group
Join Now