ಮಂಜೇಶ್ವರ ತೂಮಿನಾಡುವಿನ ಹಿಲ್ ಟಾಪ್ ನಲ್ಲಿ ನಡೆದ ಕುಟುಂಬ ಕಲಹದಲ್ಲಿ ಕೊಲೆಗೀಡಾದವರ ಸಂಖ್ಯೆ ಎರಡಕ್ಕೇರಿದೆ. ಮಗಳ ಮೇಲೆ ಹಲ್ಲೆ ವೇಳೆ ತಡೆಯಲು ಬಂದಿದ್ದ ತಂಗಿ ಗಂಡ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮೃತರನ್ನು ಶೇಕುಂಞಿ ಎಂದು ಗುರುತಿಸಲಾಗಿದೆ.
ಶೇಕುನ್ಹಿ ಅವರು ಆರೋಪಿಯ ಪತ್ನಿ ತಾಹಿರಾ ಅವರ ಸಹೋದರಿಯ ಪತಿ. ಇನ್ನು ಘಟನೆಯಲ್ಲಿ ಆರೋಪಿಯ ಮಗಳು ಜುಮೈಲಾ(18) ನಿನ್ನೆ ಸೋಮವಾರ ಸಂಜೆ ಕೊಲೆಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಇದೀಗ ಕೊನೆಯುಸಿರೆಳೆದಿದ್ದಾರೆ. ಜುಲೈಲಾ ಅವರ ತಂದೆ ಉಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದು, ಪೊಲೀಸರ ವಶದಲ್ಲಿದ್ದಾನೆ.
ಘಟನೆ ವಿವರ
ಈ ಘಟನೆ ಸೋಮವಾರ ತುಮಿನಾಡುವಿನ ಶೇಕುನ್ಹಿ ಅವರ ಮನೆಯಲ್ಲಿ ನಡೆದಿದೆ. ಆರೋಪಿ ಉಮ್ಮರ್ ಫಾರೂಕ್ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದು, ಪತ್ನಿಯ ಜೊತೆಗಿನ ವಿರಸದಿಂದ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದ. ಆನಂತರ, ಪತ್ನಿ ತಾಹಿರಾ (41) ಮಾತಿಗೆ ಮಾತು ಬೆಳೆದು ನಿನ್ನ ಸಂಬಂಧವೇ ಬೇಡ, ವಿಚ್ಛೇದನ ಕೊಟ್ಟುಬಿಡು ಎಂದು ಹೇಳಿದ್ದಳು. ಅದರಂತೆ, ತನ್ನ ತಂಗಿಯ ಮನೆಯಲ್ಲಿ ಮಾತುಕತೆಗೆಂದು ಗಂಡ ಉಮ್ಮರ್ ನನ್ನು ಕರೆದಿದ್ದಳು.
ಈ ವೇಳೆ ಉಮ್ಮರ್ ಫಾರೂಕ್ ಕೂಡ ತನ್ನ ಸಹೋದರನೊಂದಿಗೆ ಮನೆಗೆ ಬಂದಿದ್ದರು. ಈ ವೇಳೆ ತಾಹಿರಾ, ಉಮ್ಮರ್ ಫಾರೂಕ್ ಅವರಿಗೆ ಚಿನ್ನಾಭರಣಗಳು ಮತ್ತು ಆಸ್ತಿ ದಾಖಲೆಗಳನ್ನು ಹಸ್ತಾಂತರಿಸಿ, ವಿಚ್ಚೇದನ ನೀಡುವಂತೆ ಕೇಳಿದ್ದಾರೆ. ಮಾತುಕತೆ ಮುಗಿಸಿ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಮನೆಯಿಂದ ಹೊರಗೆ ಬಂದ ಉಮರ್ ಫಾರೂಕ್ ತಾನು ತಂದಿದ್ದ ಚೂರಿಯನ್ನು ಹಿಡಿದು ತನ್ನ ಮಗಳು ಜುಮೈಲಾ ಕುತ್ತಿಗೆಗೆ ಇರಿದಿದ್ದಾನೆ. ಈ ವೇಳೆ ಜುಮೈಲಾ ಅಲ್ಲೆ ಕುಸಿದು ಬಿದ್ದಿದ್ದಾಳೆ. ಈ ವೇಳೆ ತಾಹಿರಾಳ ಸಹೋದರಿಯ ಪತಿ ಶೇಕುನ್ಹಿ ಮಧ್ಯಪ್ರವೇಶಿಸಿ ದಾಳಿಯನ್ನು ತಡೆಯಲು ಪ್ರಯತ್ನಿಸಿದಾಗ, ಉಮ್ಮರ್ ಫಾರೂಕ್ ಅವರಿಗೂ ಇರಿದಿದ್ದಾನೆ. ಈ ವೇಳೆ ಶೇಕುಂಞಿ ಅವರ ತೊಡೆಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಮೈಲಾ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಸಾವನಪ್ಪಿದ್ದ್ರು. ಇದೀಗ ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದ ಶೇಕುನ್ಹಿ ಮಂಗಳವಾರ ಬೆಳಿಗ್ಗೆ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಂಜೇಶ್ವರ ನಡೆದ ಕುಟುಂಬ ಕಲಹದಲ್ಲಿ ಕೊಲೆಗೀಡಾದವರ ಸಂಖ್ಯೆ ಎರಡಕ್ಕೆ ಏರಿಕೆ – ಗಂಭೀರವಾಗಿ ಗಾಯಗೊಂಡಿದ್ದ ತಂಗಿ ಗಂಡ ಆಸ್ಪತ್ರೆಯಲ್ಲಿ ಸಾವು
WhatsApp Group
Join Now