ಬೆಂಗಳೂರಲ್ಲಿ ಪ್ರೀತ್ಸೆ ಅಂತ 19ರ ಹುಡ್ಗಿ ಹಿಂದೆ ಬಿದ್ದ 40ರ ಅಂಕಲ್‌ ನ ಭೀಕರ ಹತ್ಯೆ.!

Spread the love

ಲವ್ ಮಾಡು ಎಂದು ಯುವತಿಯ ಬೆನ್ನು ಹತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. 19 ವರ್ಷದ ಯುವತಿಯ ಹಿಂದೆ 40 ವರ್ಷದ ವ್ಯಕ್ತಿ ಲವ್ ಮಾಡು ಎಂದು ದುಂಬಾಲು ಬಿದಿದ್ದಾನೆ. ನನ್ನನ್ನು ಪ್ರೀತಿ ಮಾಡು ಎಂದು ಬೆನ್ನು ಬಿದ್ದಿದ್ದ. ಇದನ್ನ ಸಹಿಸದ ಯುವತಿಯ ತಂದೆ ಹಾಗೂ ಸೋದರ ಮಾವ 40 ವರ್ಷದ ಚೆಲುವ ಎನ್ನುವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.

ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಬಳಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಈ ಒಂದು ಕೊಲೆ ನಡೆದಿದೆ ಯುವತಿ ಹೋದಲ್ಲಿ ಬಂದಲ್ಲಿ ಈತ ಪ್ರೀತ್ಸೇ ಎಂದು ಪೀಡಿಸುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.ಈ ವಿಚಾರ ತಿಳಿದು ಪಾಗಲ್ ಪ್ರೇಮಿ ಹತ್ಯೆಗೆ ಪ್ಲಾನ್ ಮಾಡಿದ್ದಾರೆ ನಿನ್ನೆ ಕಾರಿನಲ್ಲಿ ಯುವತಿಯ ಪೋಷಕರು ಚೆಲುವನನ್ನು ಅಪಹರಣ ಮಾಡಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ.

WhatsApp Group Join Now

Spread the love

Leave a Reply