ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಲವ್ವಿಡವ್ವಿ ; ಮೂರು ಮಕ್ಕಳ ತಾಯಿಯ ಕತ್ತು ಸೀಳಿ ಬರ್ಬರ ಹತ್ಯೆ!

Spread the love

ಗಂಡನನ್ನು ಬಿಟ್ಟು ಮಕ್ಕಳ ಜೊತೆ ತಾಯಿಮನೆ ಸೇರಿದ್ದ ಮಹಿಳೇಯೋರ್ವರು ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹಿಂದೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಬರ್ಬರ ಹತ್ಯೆ ಮಾಡಲಾಗಿದೆ. ಸಂಧ್ಯಾ (32) ಮೃತ ಮಹಿಳೆಯಾಗಿದ್ದಾರೆ.

ಮೃತ ಸಂಧ್ಯಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅರೇನೂರು ಗ್ರಾಮದವರು. ಕಳೆದ 10 ವರ್ಷಗಳ ಹಿಂದೆ ಅರೇನೂರು ಗ್ರಾಮದಿಂದ 20 ಕಿಮೀ ದೂರದ ಶಿರಗೋಳ ಗ್ರಾಮದ ರವಿ ಅವರೊಂದಿಗೆ ಸಂಧ್ಯಾ ಮದುವೆಯಾಗಿತ್ತು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಮೂವರು ಮಕ್ಕಳಿದ್ದರು. ಆದರೆ ಇವರಿಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಗಂಡನ ಬಿಟ್ಟು ಬಂದಿದ್ದ ಸಂಧ್ಯಾ, ಕಳೆದ 3 ವರ್ಷಗಳಿಂದ ಅರೇನೂರು ಗ್ರಾಮದ ತಾಯಿ ಮನೆ ಸೇರಿದ್ದರು. ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಸಂಧ್ಯಾ ನಾಪತ್ತೆಯಾಗಿದ್ದು, ಮನೆಯವರು ಎಷ್ಟು ಹುಡುಕಿದ್ರೂ ಅವರ ಸುಳಿವಿರಲಿಲ್ಲ. ಆತಂಕಗೊಂಡ ಅವರ ತಂದೆ ಈ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡ ನೀಡಿದ್ದರು. ಆದರೆ ಸೋಮವಾರ ಸಂಜೆ ಅರೇನೂರು ಗ್ರಾಮದ ತಾಯಿ ಮನೆಗೆ ಸಂಧ್ಯಾ ವಾಪಸ್ ಬಂದಿದ್ದಾರೆ. ತಾನು ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಆದ್ರೆ ನಿನ್ನೆ ಬೆಳಗ್ಗೆ ಮನೆಯ ಹಿಂಭಾಗ ಅವರು ಬಟ್ಟೆ ತೊಳೆಯುತ್ತಿದ್ದ ಸಂಧ್ಯಾರ ಕುತ್ತಿಗೆಯನ್ನು ಚಾಕುವಿನಿಂದ ಸೀಳಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ.

ಇನ್ನು ಸಂಧ್ಯಾ ಕೊಲೆಗೆ ಲವ್ ಕಹಾನಿ ಕಾರಣವಾಗಿರಬಹುರು ಎಂಬ ಅನುಮಾನ ವ್ಯಕ್ತವಾಗಿದೆ. ತನ್ನ ಕುಟುಂಬದ ಹತ್ತಿರದ ಸಂಬಂಧಿಯೊಂದಿಗೆ ಮೂರು ಮಕ್ಕಳ ತಾಯಿ ಸಂಧ್ಯಾಳಿಗೆ ಪ್ರೇಮವಾಗಿತ್ತು. ಗಂಡನಿಂದ ದೂರವಾಗಿದ್ದ ಸಂಧ್ಯಾ ಮತ್ತೊಂದು ಮದುವೆ ಬಗ್ಗೆ ಯೋಚನೆ ಮಾಡಿದ್ದರು. ಆದರೆ ಈ ಪ್ರೇಮಕ್ಕೆ ಕುಟುಂಬದ ವಿರೋಧ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಮಕ್ಕಳನ್ನು ಕರೆದುಕೊಂಡ ಸಂಧ್ಯಾ ಪ್ರೇಮಿ ಜೊತೆ ಹೋಗಿದ್ದರು.

ಇತ್ತ ತಂದೆ ಮಗಳ ಮಿಸ್ಸಿಂಗ್ ಬಗ್ಗೆ ದೂರು ನೀಡಿದ್ದರಿಂದ, ಪೊಲೀಸರಿಗೆ ಇವರ ಸುಳಿವು ಸಿಕ್ಕ ಮಾಹಿತಿ ಬೆನ್ನಲ್ಲೇ ತಾಯಿ ಮನೆಗೆ ಸಂಧ್ಯಾ ಹಿಂದಿರುಗಿದ್ದರು. ಇದೇ ಕಾರಣಕ್ಕೆ ಆಕ್ರೋಶಗೊಂಡ ಪ್ರೇಮಿ, ಸಂಧ್ಯಾ ಹತ್ಯೆ ಮಾಡಿದ್ದಾನಾ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಹಂತಕನ ಬಂಧನಕ್ಕೆ ಎರಡುತಂಡ ರಚನೆ ಮಾಡಿ ಪೊಲೀಸರು ಶೊಧ ನಡೆಸುತ್ತಿದ್ದಾರೆ.

WhatsApp Group Join Now

Spread the love

Leave a Reply