ಕೇಂದ್ರ ಸರ್ಕಾರ ಈಗ ಮತ್ತೆ ಬ್ಯಾಂಕುಗಳನ್ನ ವಿಲೀನಗೊಳಿಸಲು ಮುಂದಾಗಿದೆ. ಕೆಲವು ವರ್ಷಗಳ ಹಿಂದೆ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ಗಳನ್ನ ವಿಲೀನಗೊಳಿಸಲಾಗಿತ್ತು. ಅದೇ ರೀತಿಯಲ್ಲಿ ಬ್ಯಾಂಕ್ ಆಫ್ ಬರೋಡ ಮತ್ತು ವಿಜಯ ಬ್ಯಾಂಕ್ ಅನ್ನ ಕೂಡ ವಿಲೀನಗೊಳಿಸಲಾಗಿತ್ತು. ಕೇಂದ್ರ ಸರ್ಕಾರ ಈಗ ಮತ್ತೆ ನಾಲ್ಕು ಬ್ಯಾಂಕುಗಳನ್ನ ವಿಲೀನಗೊಳಿಸಲು ಮುಂದಾಗಿದೆ.
ದೇಶದ ನಾಲ್ಕು ಸಣ್ಣ ಬ್ಯಾಂಕುಗಳನ್ನ ಈಗ ಮತ್ತೆ ವಿಲೀನಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಈಗ ಬಹು ದೊಡ್ಡ ತೀರ್ಮಾನವನ್ನ ತೆಗೆದುಕೊಂಡಿದೆ. ಹಾಗಾದ್ರೆ ಕೇಂದ್ರ ಸರ್ಕಾರ ಮತ್ತೆ ಯಾವ ನಾಲ್ಕು ಬ್ಯಾಂಕುಗಳನ್ನ ವಿಲೀನಗೊಳಿಸಲು ಮುಂದಾಗಿದೆ ಮತ್ತು ಈ ಕುರಿತಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವೇನು.? ತಿಳಿಯೋಣ.
ಬಲ್ಲ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇಂಡಿಯನ್ ಓವರ್ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರಗಳು ವಿಲೀನಗೊಳ್ಳುವ ಸಾಧ್ಯತೆ ಇದೆ. ಈ ನಾಲ್ಕು ಬ್ಯಾಂಕುಗಳನ್ನ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಮರ್ಜ್ ಮಾಡುವ ಸಾಧ್ಯತೆ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಇದರ ಬಗ್ಗೆ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.
ಒಂದು ವೇಳೆ ಈ ನಾಲ್ಕು ಬ್ಯಾಂಕುಗಳು ಮರ್ಜ್ ಆದರೆ ಗ್ರಾಹಕರು ಮತ್ತಷ್ಟು ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಈ ನಾಲ್ಕು ಬ್ಯಾಂಕುಗಳ ಗ್ರಾಹಕರು ಮತ್ತೆ ತಮ್ಮ ಅಕೌಂಟ್ ನಂಬರ್ ಮತ್ತು ಬ್ಯಾಂಕಿಂಗ್ ವಹಿವಾಟುಗಳನ್ನ ಬದಲಾಯಿಸಿಕೊಳ್ಳಬೇಕು. ಈ ನಾಲ್ಕು ಬ್ಯಾಂಕುಗಳು ಸಣ್ಣ ಬ್ಯಾಂಕುಗಳಾಗಿದ್ದು, ಈ ಕಾರಣಗಳಿಂದ ಕೇಂದ್ರ ಸರ್ಕಾರ ಈ ಬ್ಯಾಂಕುಗಳನ್ನ ವಿಲೀನಗೊಳಿಸಲು ಮುಂದಾಗಿದೆ.

ಈ 4 ಬ್ಯಾಂಕುಗಳಲ್ಲಿ ಹೆಚ್ಚಿನ ಹಣ ಇದ್ದವರಿಗೆ ಹೊಸ ಸಂಕಷ್ಟ | RBI ನಿರ್ಧಾರ.!
WhatsApp Group
Join Now