ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಪ್ರಯಾಣಿಕರಿಗೆ ಬಿಸ್ಕತ್ ಹಂಚಿದ ಆಟೋ ಡ್ರೈವರ್!

ಕನ್ನಡ ನ್ಯೂಸ್ ಟೈಮ್ : ಬೆಂಗಳೂರಿನ ಆಟೋವೊಂದರಲ್ಲಿ ಕುಳಿತ ಪ್ರಯಾಣಿಕರಿಗೆ ಆ ಆಟೋ ಚಾಲಕ ಫ್ರೀಯಾಗಿ ಬಿಸ್ಕತ್ ಹಂಚುತ್ತಿದ್ದ. ಇದಕ್ಕೆ ಕಾರಣವೇನೆಂದು ಕೇಳಿದಾಗ ಆತ ನನ್ನ ಹೆಂಡತಿ ಆಕೆಯ ಅಮ್ಮನ ಮನೆಗೆ ಹೋಗಿರುವುದರಿಂದ ಬಹಳ ಖುಷಿಯಾಗಿದ್ದೇನೆ. ಹೀಗಾಗಿ, ಬಿಸ್ಕತ್ ಹಂಚುತ್ತಿದ್ದೇನೆ ಎಂದು ಹೇಳಿದ್ದಾನೆ. ಇದೇ ವಿಷಯವನ್ನು ಆಟೋದಲ್ಲಿ ಬರೆದಿಟ್ಟು, ಬಿಸ್ಕತ್ ಪ್ಯಾಕ್ ಕೂಡ ಇಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಲವರು ಇದೇ ನಿಜವಾದ ಸ್ವಾತಂತ್ರ್ಯ ಎಂದು ಕಮೆಂಟ್ ಕೂಡ ಮಾಡಿದ್ದಾರೆ.

Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿದ್ದನ್ನು ಯಾವ ಮಟ್ಟಿಗೆ ಸಂಭ್ರಮಿಸಿದ್ದಾನೆ ಎಂದರೆ ಆಕೆ ತವರಿಗೆ ಹೋಗಿರುವ ವಿಚಾರ ಇದೀಗ ಸೋಷಿಯಲ್ ಮೀಡಿಯಾದ ತುಂಬೆಲ್ಲ ಹರಿದಾಡುತ್ತಿದೆ. ಅದು ಹೇಗೆ ಅಂತೀರಾ? ತನ್ನ ಹೆಂಡತಿ ಆಕೆಯ ಅಮ್ಮನ ಮನೆಗೆ ಹೋದ ಖುಷಿ ತಾಳಲಾರದೆ ಆಕೆಯ ಗಂಡ ಊರ ತುಂಬೆಲ್ಲ ಈ ವಿಚಾರವನ್ನು ಢಂಗುರ ಸಾರಿದ್ದಾನೆ. ನನ್ನ ಹೆಂಡತಿ ತವರು ಮನೆಗೆ ಹೋಗಿರುವುದರಿಂದ ನಾನು ಬಹಳ ಸಂತೋಷವಾಗಿದ್ದೇನೆ ಎಂದು ಬೋರ್ಡ್ವೊಂದನ್ನು ತನ್ನ ಆಟೋದಲ್ಲಿ ಬರೆದು ಹಾಕಿರುವ ಆತ ಅದೇ ಖುಷಿಯಲ್ಲಿ ತನ್ನ ಆಟೋದಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕತ್ ವಿತರಿಸಿದ್ದಾನೆ.

WhatsApp Group Join Now

ಈ ವಿಡಿಯೋವನ್ನು ಆತನ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ “ಹೆಂಡತಿ ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ, ನಾನು ಸಂತೋಷವಾಗಿದ್ದೇನೆ” ಎಂದು ಬರೆಯಲಾಗಿದೆ.

ನೆಟಿಜನ್‌ಗಳು ಇದನ್ನು ‘ಸ್ವಾತಂತ್ರ್ಯ’ ಎಂದು ಕರೆದಿದ್ದಾರೆ. ಆ ವ್ಯಕ್ತಿ ತಮ್ಮ ಆಟೋದಲ್ಲಿ ಪ್ರಯಾಣಿಸುವವರಿಗೆ ಬ್ರಿಟಾನಿಯಾ ಮಿಲ್ಕ್ ಬಿಕಿಸ್‌ಗಳನ್ನು ವಿತರಿಸಿದ್ದಾನೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?

ಇನ್ನು ಕೆಲವರು ತಮಾಷೆಯಾಗಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, “ನೀವು ಅವನ ಜೀವನವನ್ನೇ ಹಾಳುಮಾಡಿದ್ದೀರಿ. ಪಾಪ ಆತ ಹೆಂಡತಿಯಿಲ್ಲದೆ ಸಂತೋಷವಾಗಿದ್ದ. ಈಗ ನಿಮ್ಮಿಂದ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಷಯ ಅವನ ಹೆಂಡತಿಗೆ ಅವನು ಆಟೋದಲ್ಲಿಯೇ ಪರ್ಮನೆಂಟಾಗಿ ಮಲಗಬೇಕಾಗುತ್ತದೆ” ಎಂದು ಕಮೆಂಟ್ ಮಾಡಿದ್ದಾರೆ.

Leave a Reply