ಬಾಡಿಗೆ ನಿಯಮಕ್ಕೆ ಸಂಬಂಧಪಟ್ಟಂತೆ ಇದೀಗ ಹೊಸ ನಿಯಮವನ್ನು ಜಾರಿ ಮಾಡಿದೆ. ಒಂದು ವೇಳೆ ನಿಯಮವನ್ನ ಉಲ್ಲಂಘನೆ ಮಾಡಿದ್ರೆ ಬಾಡಿಗೆದಾರರು ಮಾತ್ರವಲ್ಲದೇ ಮಾಲೀಕರು ಕೂಡ ದಂಡವನ್ನ ಕಟ್ಟಬೇಕಾಗುತ್ತದೆ. ಕರ್ನಾಟಕ ಸರ್ಕಾರವು ಬಾಡಿಗೆ ನಿಯಂತ್ರಣ ಕಾಯ್ದೆಗೆ ಮಹತ್ವದ ತಿದ್ದುಪಡೆಗಳನ್ನ ಜಾರಿಗೆ ಮಾಡಿದೆ.
ಬಾಡಿಗೆ ವಿವಾದಗಳನ್ನ ಇನ್ಮುಂದೆ ಕ್ರಿಮಿನಲ್ ಅಪರಾಧವಲ್ಲ ಎಂದು ಪರಿಗಣಿಸಿದೆ. ಆದರೆ ನಿಯಮ ಉಲ್ಲಂಘಿಸುವ ಬಾಡಿಗೆದಾರರು ಹಾಗು ಮನೆ ಮಾಲೀಕರು, ಇಬ್ಬರಿಗೂ ಕೂಡ ಹಿಂದಿಗಿಂತಲೂ ಅಧಿಕ ಭಾರಿ ಆರ್ಥಿಕ ದಂಡದ ಬರೆ ಕೂಡ ಬೀಳಲಿದೆ. ಹಾಗಿದ್ರೆ ಯಾವುದೆಲ್ಲ ತಿದ್ದುಪಡಿಗಳು ನೋಡೋಣ.
ಬಾಡಿಗೆ ವಿವಾದಗಳಲ್ಲಿ ಇದ್ದ ಒಂದು ತಿಂಗಳ ಜೈಲು ಶಿಕ್ಷೆಯ ನಿಬಂಧನೆಯನ್ನ ಇದೀಗ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಇದರರ್ಥ ಬಾಡಿಗೆ ವಿವಾದಗಳಿಗೆ ಇನ್ನು ಮುಂದೆ ಜೈಲು ಸೇರುವ ಅಗತ್ಯ ಇರುವುದಿಲ್ಲ. ಇನ್ನು ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತವನ್ನ ಮಾತ್ರ ಶೇಕಡ 10ರಿಂದ 20 ಪಟ್ಟು ಬಾರಿ ಪ್ರಮಾಣದಲ್ಲಿ ಹೆಚ್ಚು ಮಾಡಲಾಗಿದೆ. ಅದೇ ರೀತಿ ನಿಯಮಗಳನ್ನ ಉಲ್ಲಂಘನೆ ಮಾಡಿದರೆ ಬಾಡಿಗೆದಾರರು ಮಾತ್ರವಲ್ಲದೇ ಮನೆ ಮಾಲೀಕರಿಗೂ ಇದೇ ರೀತಿಯ ಕಠಿಣ ದಂಡ ಕೂಡ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವುದೇ ಬಾಡಿಗೆದಾರನು ಕಾನೂನಿಗೆ ವಿರುದ್ಧವಾಗಿ ಆಸ್ತಿಯ ಸಂಪೂರ್ಣ ಅಥವಾ ಭಾಗವನ್ನ ಉಪಬಾಡಿಗೆಗೆ ನೀಡಿದರೆ ಅಥವಾ ಹಸ್ತಾಂತರ ಮಾಡಿದರೆ ಅವರಿಗೆ 50ಸಾವಿರ ರೂಪಾಯಿಗಳವರೆಗೆ ದಂಡವನ್ನು ವಿಧಿಸಲಾಗುತ್ತದೆ. ಹಳೆಯ ನಿಯಮಗಳ ಪ್ರಕಾರ ಇದೇ ರೀತಿಯ ಉಲ್ಲಂಘನೆಗೆ ಕೇವಲ 5000 ರೂಪಾಯಿ ದಂಡ ಇತ್ತು. ಅದೇ ರೀತಿ ಒಂದು ತಿಂಗಳವರೆಗೆ ಜೈಲು ಶಿಕ್ಷೆ ಇತ್ತು. ಈಗ ಈಗ ಜೈಲು ಶಿಕ್ಷೆಯ ಭಯವಿಲ್ಲ. ಆದರೆ ದಂಡದ ಮೊತ್ತವನ್ನ 10 ಪಟ್ಟು ಹೆಚ್ಚು ಮಾಡಿದ್ದಾರೆ.
ಕಾನೂನು ಬಾಹಿರವಾಗಿ ಬಾಡಿಗೆದಾರರನ್ನ ಹೊರಹಾಕುವ ಮನೆ ಮಾಲೀಕರಿಗೂ ಕೂಡ ಇದೇ ರೀತಿಯ ಕಠಿಣ ಶರತುಗಳು ಅನ್ವಯವಾಗುತ್ತವೆ. ವಿಶೇಷವಾಗಿ ನ್ಯಾಯಾಲಯಗಳು ಮೂಲ ಬಾಡಿಗೆದಾರರಿಗೆ ಮರು ಬಾಡಿಗೆಗೆ ನೀಡಲು ಆದೇಶ ನೀಡಿದರೆ ಅದನ್ನ ಪಾಲಿಸುವುದು ಕಡ್ಡಾಯ. ಹಿಂದೆ ಮನೆ ಮಾಲೀಕರು 5000 ರೂಪಾಯಿ ದಂಡ ಅಥವಾ ಮರು ಬಾಡಿಗೆಗೆ ನಂತರ ಸಂಗ್ರಹಿಸಿದ ಬಾಡಿಗೆಯ ದುಪ್ಪಟ್ಟು ಮೊತ್ತವನ್ನು ವಿಧಿಸುತ್ತಿದ್ದರು. ಇದೀಗ ದಂಡದ ಮೊತ್ತವನ್ನ ಡಬಲ್ ಮಾಡಲಾಗಿದೆ. ಅಂದ್ರೆ ಈ ದಂಡದ ಮೊತ್ತ 50,000 ರೂಪಾಯ ವರೆಗೆ ಇರಬಹುದು ಎಂದು ಹೊಸ ರೂಲ್ಸ್ ನ್ನ ಜಾರಿ ಮಾಡಲಾಗಿದೆ.

ದೇಶಾದ್ಯಂತ ಬಾಡಿಗೆ ಮನೆಗೆ 4 ಕಠಿಣ ರೂಲ್ಸ್ ಘೋಷಣೆ | ಊಹಿಸದ ಕ್ರಮ | Tenant Rules India 2025
WhatsApp Group
Join Now