ಆನ್‌ಲೈನ್ ರೂಮ್ ಬುಕ್ಕಿಂಗ್ ಮಾಡುವಾಗ ಎಚ್ಚರವಾಗಿರಿ ಎಂದು ಧರ್ಮಸ್ಥಳ ಭಕ್ತರಿಗೆ ದೇವಾಲಯದ ಪ್ರಕಟಣೆ

Spread the love

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ವಸತಿ ಸೇರಿದಂತೆ ಇತರ ವ್ಯವಸ್ಥೆ ಕಾರಣಕ್ಕೆ ಆಗಾಗ ಧರ್ಮಸ್ಥಳ ಸುದ್ದಿಯಾಗುವುದು ಉಂಟು.

ಮಹಾ ಶಿವರಾತ್ರಿ ವೇಳೆಯಲ್ಲಿ ಸಾವಿರಾರು ಜನರು ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಾರೆ. ಆದ್ದರಿಂದ ಪ್ರತಿವರ್ಷ ಈ ಸಮಯದಲ್ಲಿ ಧರ್ಮಸ್ಥಳದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ.

ಈ ಸಂದರ್ಭದಲ್ಲಿ ವಸತಿಗಾಗಿ ಬುಕ್ಕಿಂಗ್ ಮಾಡುವುದು ಇದೆ. ಆದರೆ ಆನ್‌ಲೈನ್ ಬುಕ್ಕಿಂಗ್ ಮಾಡುವಾಗ ಎಚ್ಚರವಾಗಿರಿ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ. ಈ ವರ್ಷ ಫೆ. 15ರ ಭಾನುವಾರ ಶಿವರಾತ್ರಿ ಇದ್ದು ಮುನ್ನೆಚ್ಚರಿಕೆಯಾಗಿ ಈಗ ಅಲರ್ಟ್ ನೀಡಲಾಗಿದೆ.

ದೇವಾಲಯದ ಪ್ರಕಟಣೆ: ಶ್ರೀ ಕ್ಷೇತ್ರ ಧರ್ಮಸ್ಥಳ, ಭಕ್ತಾದಿಗಳ ಗಮನಕ್ಕೆ ಎಂದು ಪ್ರಕಟಣೆ ಹೊರಡಿಸಲಾಗಿದೆ. ನಕಲಿ ವೆಬ್‌ಸೈಟ್‌ಗಳು, ಫೋನ್‌ಕರೆಗಳು ಅಥವ ವಾಟ್ಸಪ್ ಸಂದೇಶಗಳ ಮೂಲಕ ನಡೆಯುವ ವಸತಿ ಗೃಹಗಳ (Rooms) ನಕಲಿ ಬುಕ್ಕಿಂಗ್‌ಗಳ ಬಗ್ಗೆ ಎಚ್ಚರದಿಂದಿರಲು ವಿನಂತಿಸಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಅತಿಥಿ ಗೃಹಗಳ ಮುಂಡಗ ಕಾಯ್ದಿರಿಸುವಿಕೆ ಕೇವಲ ಅಧಿಕೃತ ವೆಬ್‌ಸೈಟ್ www.shridharmasthala.org ಮೂಲಕ ಮಾತ್ರ ಮಾಡಬಹುದಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಅಪ್ಲಿಕೇಶನ್ ಅಥವ ಪ್ಲಾಟ್‌ಫಾರ್ಮ್‌ಗಳ ಮೂಲಕ ಬುಕ್ಕಿಂಗ್ ಮಾಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಶಿವರಾತ್ರಿ ಸಮಯದಲ್ಲಿ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಾರೆ. ವಿವಿಧ ಜಿಲ್ಲೆಗಳಿಂದ ಸುಡುವ ಬಿಸಿಲು ಲೆಕ್ಕಿಸದೇ ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯುತ್ತಾರೆ. ಆದ್ದರಿಂದ ಈ ಸಮಯದಲ್ಲಿ ದೇವಾಲಯದ ಸುತ್ತಮುತ್ತ ಇರುವ ರೂಂಗಳಿಗೆ ಭಾರೀ ಬೇಡಿಕೆ ಇರುತ್ತದೆ.

ಶಿವರಾತ್ರಿಗೂ ಮೊದಲು ಧರ್ಮಸ್ಥಳಕ್ಕೆ ಸೇರಬೇಕು ಎಂದು ಈಗಾಗಲೇ ಹಾಸನ, ಮಂಡ್ಯ, ಮೈಸೂರು, ಬಳ್ಳಾರಿ, ಬೆಂಗಳೂರು, ಕೋಲಾರ, ಹೊಸಕೋಟೆ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಕಾಲ್ನಡಿಗೆ ಆರಂಭಿಸಿದ್ದಾರೆ.

ಯುವಕರು, ಮಹಿಳೆಯರು, ವೃದ್ಧರು, ಮಕ್ಕಳು ಹೀಗೆ ಜನರು ಗುಂಪು ಗುಂಪಾಗಿ ಧರ್ಮಸ್ಥಳದ ರಸ್ತೆಗಳಲ್ಲಿ ಈಗ ಕಾಣ ಸಿಗುತ್ತಾರೆ. ಎಲ್ಲರೂ ಮೂಡಿಗೆರೆಗೆ ಆಗಮಿಸಿ ಅಲ್ಲಿಂದ ಚಾರ್ಮಾಡಿ ಘಾಟ್ ಮೂಲಕ ಎಲ್ಲರೂ ಒಟ್ಟಾಗಿ ಸಾಗುತ್ತಾರೆ. ಧರ್ಮಸ್ಥಳ ಗ್ರಾಮದೊಳಗೆ ದೇವಾಲಯದ ವತಿಯಿಂದಲೇ ಕಾಲ್ನಡಿಗೆ ಮೂಲಕ ಸಾಗುವ ಭಕ್ತರಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತದೆ. ಅವರಿಗೆ ಮಾರ್ಗದರ್ಶನ ಮಾಡಲು ಸ್ವಯಂ ಸೇವಕರು ಇರುತ್ತಾರೆ.

ಈಗ ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರನ್ನು ಗುರಿಯಾಗಿಸಿಕೊಂಡು ನಕಲಿ ರೂಂ ಬುಕ್ಕಿಂಗ್‌ಗಳನ್ನು ಸೃಷ್ಟಿಮಾಡಲಾಗುತ್ತದೆ. ಧರ್ಮಸ್ಥಳದಲ್ಲಿ ಆನ್‌ಲೈನ್ ರೂಮ್ ಬುಕಿಂಗ್ ಮಾಡುವ ಮೂಲಕ ಕಾರ್ಯವಿಧಾನವನ್ನು ಈಗ ಸರಳಗೊಳಿಸಲಾಗಿದೆ. ಆದ್ದರಿಂದ ನಕಲಿ ಬುಕ್ಕಿಂಗ್ ಬಗ್ಗೆ ಎಚ್ಚರವಹಿಸಿ ಎಂದು ಕರೆ ನೀಡಲಾಗಿದೆ.

ಧರ್ಮಸ್ಥಳದಲ್ಲಿ ಆನ್‌ಲೈನ್‌ ಮೂಲಕ ನೇತ್ರಾವತಿ, ವೈಶಾಲಿ, ರಾಜತಾದ್ರಿ, ಸಾನ್ನಿಧಿ, ಸಾಕೇತ, ಗಂಗೋತ್ರಿ, ಶರಾವತಿ, ಗಾಯತ್ರಿ ಮತ್ತು ಸಹ್ಯಾದ್ರಿ ಅತಿಥಿ ಗೃಹಗಳ ರೂಂಗಳನ್ನು ಬುಕ್ ಮಾಡಬಹುದು. ಈ ಸಮಯದಲ್ಲಿ ಹೆಚ್ಚಿನ ಭಕ್ತರು ಆಗಮಿಸುವ ಕಾರಣ ಮುಂಚಿತವಾಗಿ ಬುಕ್ಕಿಂಗ್ ಮಾಡುವುದು ಉತ್ತಮ.

WhatsApp Group Join Now

Spread the love

Leave a Reply