ಸಾಲ ತೀರಿಸಲು ಒಂಟಿ ಮಹಿಳೆ ಕೊಲೆ ಮಾಡಿ ಕರಿಮಣಿ ಸರ ಕದ್ದಿದ್ದ ಆರೋಪಿ ಅರೆಸ್ಟ್

Spread the love

ಕುಂಬಡಾಜೆ ಪಂಚಾಯತ್‌ ಪರಿಸರದಲ್ಲಿ ವಾಸಿಸುತ್ತಿದ್ದ 72 ವರ್ಷದ ಪುಷ್ಪಲತಾ ವಿ ಶೆಟ್ಟಿ ಅವರ ಕೊಲೆಗೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಬದಿಯಡ್ಕ ಪಂಚಾಯತ್‌ನ ಪೆರ್ಡಾಲ ಮೂಲದ ಪರಮೇಶ್ವರ ಅಲಿಯಾಸ್ ರಮೇಶ್ ನಾಯಕ್ (47) ಎಂದು ಗುರುತಿಸಲಾಗಿದೆ.

ಕುಂಬದಾಜೆ ಪಂಚಾಯತ್ ವ್ಯಾಪ್ತಿಯ ಮೊವ್ವಾರ್ ಗ್ರಾಮದ ಅಜಿಲದಲ್ಲಿರುವ ತಮ್ಮ ಮನೆಯಲ್ಲಿ ಪುಷ್ಪಲತಾ ಶೆಟ್ಟಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಅವರು ಮೃತಪಟ್ಟಿರುವುದು ಪತ್ತೆಯಾಗಿದ್ದು, ಆರಂಭಿಕ ತಪಾಸಣೆಯಲ್ಲಿ ಕೊಲೆ ಎಂದು ಶಂಕಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ, ಅವರು ಕೈಯಿಂದ ಉಸಿರುಗಟ್ಟಿಸಿ ಉಸಿರುಗಟ್ಟಿಸಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ.

ಬಳಿಕ ಪ್ರಕರಣ ದಾಖಲಿಸಿದ ಪೊಲೀಸರು ಅಪರಾಧ ನಡೆದ ಸಮಯದಲ್ಲಿ ಆ ಪ್ರದೇಶದಲ್ಲಿ ಹಾದುಹೋದ ಜನರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ರಮೇಶ್ ನಾಯಕ್ ಆ ಪ್ರದೇಶದಲ್ಲಿ ಹುಲ್ಲು ಕಟ್ಟಿಂಗ್ ಮಾಡುತ್ತಿದ್ದನ್ನು ಹಲವಾರು ಜನರು ನೋಡಿದ್ದರು. ಈ ಹಿನ್ನಲೆ ಪೊಲೀಸರು ರಮೇಶ್ ನಾಯಕ್ ನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಮೈಮೇಲೆ ಹಲವು ಕಡೆಗಳಲ್ಲಿ ಗಾಯಗಳಾಗಿತ್ತು, ಅದು ಕಾಳುಮೆಣಸು ಕೀಳುವ ವೇಳೆ ಆಗಿದ್ದು ಎಂದು ಸುಳ್ಳು ಹೇಳಿದ್ದ, ಬಳಿಕ ಸರಿಯಾಗಿ ವಿಚಾರಣೆ ನಡೆಸಿದ ವೇಳೆ ಆರೋಪಿ ಕೊಲೆ ಮಾಡಿದ್ದನು ಬಾಯಿಬಿಟ್ಟಿದ್ದಾನೆ.

ಆರೋಪಿಯು ರಮೇಶ್ ನಾಯಕ್ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ, ಸುಮಾರು ₹8 ಲಕ್ಷ ಸಾಲವನ್ನು ಹೊಂದಿದ್ದನು, ಮನೆ ಕಟ್ಟಲು ಭೂಮಿ ಖರೀದಿಸಲು ಸಾಲ ಪಡೆದಿದ್ದನು ಈ ಹಿನ್ನಲೆ ಹಣಕ್ಕಾಗಿ ಪುಷ್ಪಲತಾ ಅವರು ಧರಿಸಿದ್ದ ಚಿನ್ನದ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಆಕೆ ವಿರೋಧಿಸಿದಾಗ, ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 28 ಗ್ರಾಂ ತೂಕದ ಮಂಗಳಸೂತ್ರವನ್ನು ಕೊಲೆ ಮಾಡಿದ ಬಳಿಕ ಕದ್ದು ಹೋಗಿದ್ದಾನೆ.

WhatsApp Group Join Now

Spread the love

Leave a Reply